ಕರಾವಳಿಸ್ಥಳೀಯ

ಎಸ್.ಕೆ. ಗೋಲ್ಡ್’ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ವಜ್ರಮಹೋತ್ಸವ ಸಂಭ್ರಮಾಚರಣೆ 2024 | ಬೆಳ್ಳಂಪಳ್ಳಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಅಗತ್ಯ ವಸ್ತುಗಳ ಹಸ್ತಾಂತರ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಇಲ್ಲಿನ ಎಸ್.ಕೆ. ಗೋಲ್ಡ್’ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ವಜ್ರಮಹೋತ್ಸವ ಸಂಭ್ರಮಾಚರಣೆ 2024ರ ಪ್ರಯುಕ್ತ ಬೆಳ್ಳಂಪಳ್ಳಿಯ ಜೈ ಹಿಂದ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಅಗತ್ಯ ವಸ್ತುಗಳ ಹಸ್ತಾಂತರ ಕಾರ್ಯಕ್ರಮ ಜುಲೈ 31ರಂದು ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಅವರು ಶಾಲೆಗೆ, ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಸ್ಟೀಲ್ ಬಟ್ಟಲು ಮತ್ತು ಲೋಟೆಗಳನ್ನು ಹಸ್ತಾಂತರಿಸಿ ಮಾತನಾಡಿ, ಸಂಸ್ಥೆಯ ಬೆಳ್ಳಂಪಳ್ಳಿ ಶಾಖೆಯ ಉದ್ಘಾಟನಾ ಸಂದರ್ಭ ಕಾರ್ಯಕ್ರಮ ನಡೆಸಲು ಸ್ಥಳಾವಕಾಶ ನೀಡಿದ ಈ ಶಾಲೆಗೆ ಇಂದು ಅಗತ್ಯ ವಸ್ತುಗಳನ್ನು ನೀಡುವ ಅವಕಾಶ ದೊರೆತಿರುವುದು ನಮಗೂ ನಮ್ಮ ಸಂಸ್ಥೆಗೂ ಹೆಮ್ಮೆಯ ವಿಷಯ ಎಂದ ಅವರು, ಮಕ್ಕಳಿಗೆ ಕಥೆ ಹೇಳುವುದರ ಮೂಲಕ ಜೀವನ ಪಾಠ ತಿಳಿಸಿದರು.

SRK Ladders

ಬೆಳ್ಳಂಪಳ್ಳಿ ಜೈ ಹಿಂದ್ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕ ಬಿ. ಹರೀಶ್ ಹೆಗ್ಡೆ, ಮುಖ್ಯೋಪಾಧ್ಯಾಯ ಸುಭಾಷ್ ನಾಯಕ್, ಶಿಕ್ಷಕಿ ಮಲ್ಲಿಕಾ ಅವರು ಕೃತಜ್ಞತೆ ಸಲ್ಲಿಸಿದರು.

ಹಾವಂಜೆ – ಬೆಳ್ಳಂಪಳ್ಳಿ – ಕುಕ್ಕೆಹಳ್ಳಿ ವಿಶ್ವಕರ್ಮ ಸಮಾಜೋದ್ದಾರಕ ಸಂಘದ ಅಧ್ಯಕ್ಷ ಗೋಪಾಲ ಆಚಾರ್ಯ ಕೀಳಿಂಜೆ, ಬೆಳ್ಳಂಪಳ್ಳಿ- ಕುಕ್ಕಿಕಟ್ಟೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆ, ಸಂಸ್ಥೆಯ ಪೆರ್ಡೂರು ಶಾಖಾ ನಿವೃತ್ತ ಹಿರಿಯ ಶಾಖಾ ವ್ಯವಸ್ಥಾಪಕ ನಾಗರಾಜ ಪ್ರಭು ಬಿ. ವೇದಿಕೆಯಲ್ಲಿದ್ದರು.

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘದ ವತಿಯಿಂದ ಮಾಡಲಾಗಿತ್ತು. ಸಂಜೆಯ ಉಪಾಹಾರದ ವ್ಯವಸ್ಥೆಯನ್ನು ಎಸ್.ಕೆ. ಗೋಲ್ಡ್’ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ ಮಾಡಲಾಯಿತು.

ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ನಿರ್ದೇಶಕರಾದ ಕೆ. ಯಜ್ಞೇಶ್ವರ ಆಚಾರ್ಯ, ವೈ.ವಿ. ವಿಶ್ವಜ್ಞಮೂರ್ತಿ, ಕೆ. ಶಶಿಕಾಂತ ಆಚಾರ್ಯ, ಉಡುಪಿ ಶಾಖೆಯ ಶಾಖಾವ್ಯವಸ್ಥಾಪಕ ಬಿ. ಲಕ್ಷ್ಮೀನಾರಾಯಣ ಆಚಾರ್ಯ, ಮಾರಾಟಾಧಿಕಾರಿ ಜಯಪ್ರಕಾಶ್ ಬಿ.ಎಸ್, ನಿವೃತ್ತ ಸಿಬ್ಬಂದಿಗಳಾದ ಸುರೇಶ್ ಬಿ, ಉಪೇಂದ್ರ ಆಚಾರ್ಯ ಬಿ., ಗಂಗಾಧರ ಕೆ.ಬಿ., ರತ್ನಾಕರ ಆಚಾರ್ಯ, ರಜನಿ ಆರ್. ರಾವ್, ವಿನೋದ ಎಸ್. ಆಚಾರ್ಯ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

ಕಿರಿಯ ಸಹಾಯಕ ಸುಧೀರ್ ಕುಮಾರ್ ವಂದಿಸಿದರು. ಸಂಸ್ಥೆಯ ಬೆಳ್ಳಂಪಳ್ಳಿ ಶಾಖೆಯ ಪ್ರಭಾರ ಶಾಖಾ ವ್ಯವಸ್ಥಾಪಕ ಮೋಹನದಾಸ ಆಚಾರ್ಯ ಟಿ.ಬಿ. ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2025ನೇ…

1 of 3