ಕರಾವಳಿಸ್ಥಳೀಯ

ಮಕ್ಕಳ ಮೇಲಾಗುವ ಯಾವುದೇ ದೌರ್ಜನ್ಯವೂ ಶಿಕ್ಷಾರ್ಹ: ನ್ಯಾ. ಅಭಯ್ ಧನಪಾಲ್ ಚೌಗುಲೆ

ಮಕ್ಕಳ ಮೇಲೆ ಆಗುವ ಯಾವುದೇ ರೀತಿಯ ಲೈಂಗಿಕ‌ ದೌರ್ಜನ್ಯವು ಶಿಕ್ಷಾರ್ಹವಾಗಿದೆ. ಅಂತಹ ತಪ್ಪುಗಳು ಸಂಭವಿಸಿದೆ ಎಂದು ಗೊತ್ತಾದ ಕೂಡಲೇ ಮಕ್ಕಳು ತಮ್ಮ ಪೋಷಕರ ಗಮನಕ್ಕೆ ತಂದು ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಬಹುದಾಗಿದೆ ಎಂದು ದಕ್ಷಿಣ ಕನ್ನಡ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಮತ್ತು ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಹಾಗೂ ಪ್ರಸಕ್ತ ಖಾಯಂ ಲೋಕ ಅದಾಲತ್ ಅಧ್ಯಕ್ಷ ಅಭಯ್ ಧನಪಾಲ್ ಚೌಗುಲೆ ತಿಳಿಸಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಮಕ್ಕಳ ಮೇಲೆ ಆಗುವ ಯಾವುದೇ ರೀತಿಯ ಲೈಂಗಿಕ‌ ದೌರ್ಜನ್ಯವು ಶಿಕ್ಷಾರ್ಹವಾಗಿದೆ. ಅಂತಹ ತಪ್ಪುಗಳು ಸಂಭವಿಸಿದೆ ಎಂದು ಗೊತ್ತಾದ ಕೂಡಲೇ ಮಕ್ಕಳು ತಮ್ಮ ಪೋಷಕರ ಗಮನಕ್ಕೆ ತಂದು ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಬಹುದಾಗಿದೆ ಎಂದು ದಕ್ಷಿಣ ಕನ್ನಡ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಮತ್ತು ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಹಾಗೂ ಪ್ರಸಕ್ತ ಖಾಯಂ ಲೋಕ ಅದಾಲತ್ ಅಧ್ಯಕ್ಷ ಅಭಯ್ ಧನಪಾಲ್ ಚೌಗುಲೆ ತಿಳಿಸಿದರು.

akshaya college

ಅವರು ಶನಿವಾರ ಮುಲ್ಕಿಯ ಕಿಲ್ಪಡಿಯ ಎಂ. ಸಿ. ಟಿ (M.C.T) ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಬಾಲ್ಯ ವಿವಾಹ ನಿಷೇಧ ಹಾಗೂ ಪೋಕ್ಸೋ ಕಾಯ್ದೆ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಶಾಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವುದಕ್ಕಾಗಿಯೇ ಭಾರತ ಸರಕಾರವು 2012ರಲ್ಲಿ ಪೋಕ್ಸೋ ಕಾಯ್ದೆ ಜಾರಿಗೆ ತಂದಿದೆ. ಈ ಮೂಲಕ ಅಪ್ರಾಪ್ತ ವಯಸ್ಕರ ಮೇಲೆ ಆಗುವ ಲೈಂಗಿಕ ದೌರ್ಜನ್ಯಕ್ಕೆ ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆ ವಿಧಿಸುವ ಅವಕಾಶವಿದೆ. ಮಕ್ಕಳು ಇಂತಹ ಕಾಯ್ದೆ ಬಗ್ಗೆ ಅರಿತು ತಮ್ಮ ಮೇಲಾಗುವ ದೌರ್ಜನ್ಯವನ್ನು ತಡೆಗಟ್ಟಿದರೆ ಇದರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಿದೆ ಎಂದರು.

ಬಾಲ್ಯ ವಿವಾಹ ಅನ್ನೋದು ಬಹುದೊಡ್ಡ ಸಾಮಾಜಿಕ ಪಿಡುಗು ಆಗಿದ್ದು, ಮಕ್ಕಳ ಭವಿಷ್ಯಕ್ಕೆ ಆತಂಕವಾಗಿದೆ. ಎಳೆಯ ಪ್ರಾಯದಲ್ಲಿಯೇ ಮಕ್ಕಳನ್ನು ಮದುವೆಗೆ ಒಪ್ಪಿಸುವುದು ಕೂಡ ಶಿಕ್ಷಾರ್ಹ ಅಪರಾಧ. ಇಂತಹ ಘಟನೆ ನಡೆಯುತ್ತಿದೆ ಎಂದು ಗೊತ್ತಾದ ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತಂದು ಇಂತಹ ಪಿಡುಗನ್ನು ಸಮಾಜದಿಂದ ನಿರ್ಮೂಲನೆ ಮಾಡಲು ಕೈ ಜೋಡಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ವಕೀಲ ಹಾಗೂ ಖಾಯಂ ಲೋಕ ಅದಾಲತ್ ಸದಸ್ಯರಾದ ಫಝಲ್ ರಹಿಮಾನ್, ಮಂಗಳೂರಿನ ವಕೀಲರಾದ ಮಹಮ್ಮದ್ ಅಸ್ಗರ್ ಮುಡಿಪು, ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಎಂ. ಬಿ ಖಾನ್, ಉಪಾಧ್ಯಕ್ಷರಾದ ಅಡ್ವೋಕೇಟ್ ಓಮರ್ ಫಾರೂಕ್ ಮುಲ್ಕಿ, ಸಂಚಾಲಕ ಹಾಜಿ ಎಚ್ ಅಬೂಬಕ್ಕರ್, ಕಾರ್ಯದರ್ಶಿ ಅಬುಸಲಿ ಹಾಜಿ, ಶಾಲಾ ಮುಖ್ಯ ಶಿಕ್ಷಕರಾದ ಹರೀಶ್ ಬಂಗೇರ ಉಪಸ್ಥಿತರಿದ್ದರು.

ಕೃತಿಕಾ ಸ್ವಾಗತಿಸಿದರು. ಸನಾ ವಂದಿಸಿದರು. ಪ್ರಿಯಾಂಕ ಕಾರ್ಯಕ್ರಮದ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರು ಕೆಎಸ್ಸಾರ್ಟಿಸಿ ನೂತನ ಬಸ್ ಚಾಲಕ ನಿರ್ವಾಹಕರಿಗೆ ಸಂವಹನ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ

ಪುತ್ತೂರು: ಕೆಎಸ್ಸಾರ್ಟಿಸಿ ಪುತ್ತೂರು ಘಟಕಕ್ಕೆ ನೂತನವಾಗಿ ಆಯ್ಕೆಗೊಂಡಿರುವ ಬಸ್ ಚಾಲಕ ಮತ್ತು…

ಸೆ. 7 – 9: ಯುವಜನರ ನಡಿಗೆ ಉದ್ಯೋಗದ ಕಡೆಗೆ ಡಿವೈಎಫ್ಐನಿಂದ ಯುವಜನ ಜಾಥಾ | ಪುತ್ತೂರು ಸಹಿತ ಜಿಲ್ಲಾದ್ಯಂತ ಸಂಚರಿಸಲಿದೆ ಜಾಥಾ

ಪುತ್ತೂರು: ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಯುವಜನರ ನಡಿಗೆ ಉದ್ಯೋಗದ ಕಡೆಗೆ…

ಎರಡೇ ದಿನದಲ್ಲಿ ಬಯಲಾದ ರಸ್ತೆ ಕಾಮಗಾರಿಯ ಅಸಲಿ ಮುಖ | ಅವೈಜ್ಞಾನಿಕ, ಕಳಪೆ ರಸ್ತೆ ಕಾಮಗಾರಿ ವಿರುದ್ಧ ಪುತ್ತಿಲ ಆಕ್ರೋಶ

ಪುತ್ತೂರು: ಕಾಮಗಾರಿ ನಡೆದ ರಸ್ತೆ ವಾಹನ ಸಂಚಾರಕ್ಕೆ ತೆರೆದುಕೊಂಡ ಎರಡೇ ದಿನದಲ್ಲಿ ಕಿತ್ತು…

1 of 143