Gl harusha
ಕರಾವಳಿಧಾರ್ಮಿಕಸ್ಥಳೀಯ

ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಸೆಲಬ್ರಿಟಿಗಳ ದಂಡು; ಕ್ಷೇತ್ರದ ಒಳ ಪ್ರವೇಶಿಸದೆ ಹೊರಗೇ ಪ್ರಾರ್ಥನೆ ಸಲ್ಲಿಸಿದ ಕತ್ರಿನಾ ಕೈಫ್ Katrina Kaif: ಮೂಲತಃ ಮಂಗಳೂರಿನವರೇ ಆದ Sunil shetty, K.L. Rahul ಭಾಗಿ

ಕೊರಗಜ್ಜ ದೈವದ ಆದಿಸ್ಥಳವಾದ ಕುತ್ತಾರು ಕ್ಷೇತ್ರಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಪ್ (katrina Kaif) ಸೇರಿದಂತೆ ಸುನೀಲ್ ಶೆಟ್ಟಿ (sunil Shetty) ಪುತ್ರ ಅಹಾನ್ ಶೆಟ್ಟಿ, ಪುತ್ರಿ ಆತಿಯಾ ಶೆಟ್ಟಿ, ಹಾಗೂ ಸ್ಟಾರ್ ಕ್ರಿಕೆಟರ್ ಕೆ.ಎಲ್.ರಾಹುಲ್ (KL Rahul) ಭೇಟಿ ನೀಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಕೊರಗಜ್ಜ ದೈವದ ಆದಿಸ್ಥಳವಾದ ಕುತ್ತಾರು ಕ್ಷೇತ್ರಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಪ್ (katrina Kaif) ಸೇರಿದಂತೆ ಸುನೀಲ್ ಶೆಟ್ಟಿ (sunil Shetty) ಪುತ್ರ ಅಹಾನ್ ಶೆಟ್ಟಿ, ಪುತ್ರಿ ಆತಿಯಾ ಶೆಟ್ಟಿ, ಹಾಗೂ ಸ್ಟಾರ್ ಕ್ರಿಕೆಟರ್ ಕೆ.ಎಲ್.ರಾಹುಲ್ (KL Rahul) ಭೇಟಿ ನೀಡಿದ್ದಾರೆ.

srk ladders
Pashupathi
Muliya

ತುಳುನಾಡಿನವರೇ ಆಗಿರುವ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರ, ಪುತ್ರಿ, ಅಳಿಯನ ಜೊತೆ ಖ್ಯಾತ ನಟಿ ಕತ್ರಿನಾ ಕೈಫ್ ಕೂಡ ಕೊರಗಜ್ಜನ ಸನ್ನಿಧಿಗೆ ಆಗಮಿಸಿ ಕೋಲದಲ್ಲಿ ಭಾಗವಹಿಸಿದ್ದಾರೆ.

ಜುಲೈ 14ರ ಭಾನುವಾರ ಕುತ್ತಾರು ಕೊರಗಜ್ಜನ ಕ್ಷೇತ್ರದಲ್ಲಿ ಕಟ್ಟೆ ಕೋಲ ನಡೆದಿದ್ದು, ಇದರಲ್ಲಿ ಭಾಗವಹಿಸಿದ ಸೆಲೆಬ್ರಿಟಿಗಳ ತಂಡ ಹರಕೆ ನೆರವೇರಿಸಿತ್ತು. ನಟಿ ಕತ್ರಿನಾ ಕೈಫ್, ನಟ ಸುನಿಲ್ ಶೆಟ್ಟಿ, ಪುತ್ರ ಅಹಾನ್ ಶೆಟ್ಟಿ, ಪುತ್ರಿ ಅಧ್ಯಾ ಶೆಟ್ಟಿ, ಕ್ರಿಕೆಟಿಗ ಕೆ.ಎಲ್. ರಾಹುಲ್, ಮ್ಯಾಟ್ರಿಕ್ಸ್ ಎಂಟರ್ ಟೈಪ್ಟೆಂಟ್ನ ರೇಷ್ಠಾ ಶೆಟ್ಟಿ, ಕತ್ರಿನಾ ಪತಿ ವಿಕಿ ಕೌಶಲ್ ಹಾಗೂ ವಿ.ಎಂ. ಕಾಮತ್ ಸೇರಿದಂತೆ ಒಟ್ಟು ಅವರ ಪರಿಚಿತರೇ ಆಗಿರುವ 9 ಮಂದಿಯ ಹರಕೆ ಕೋಲವನ್ನು ಕೊರಗಜ್ಜನ ಕಟ್ಟೆಯಲ್ಲಿ ಎರಡು ತಿಂಗಳ ಹಿಂದೆ ಬರೆಸಲಾಗಿತ್ತು.

ಭಾನುವಾರ ನಡೆದ ಹರಕೆ ಕೋಲದಲ್ಲಿ ವಿಕಿ ಕೌಶಲ್ ಹೊರತುಪಡಿಸಿ ಉಳಿದೆಲ್ಲರೂ ಭಾಗಿಯಾಗಿದ್ದರು. ಮಹಿಳೆಯರಿಗೆ ರಾತ್ರಿ ಹೊತ್ತು ಕಟೆಯ ಒಳಗೆ ಪ್ರವೇಶ ಇಲ್ಲದ ಕಾರಣ, ಕತ್ರಿನಾ, ರೇಷ್ಮಾ ಶೆಟ್ಟಿ, ಆಧ್ಯಾ ಶೆಟ್ಟಿ ಕೋಲದಿಂದ ಹೊರಗುಳಿದು ಕಟ್ಟೆಯ ಕಚೇರಿಯಲ್ಲಿ ಉಳಿದರು. ರಾಹುಲ್ ಮತ್ತು ಆಹಾನ್ ಕೋಲದಲ್ಲಿ ಭಾಗಿಯಾಗಿದ್ದಾರೆ.

ಸಂಜೆ 6 ಗಂಟೆ ವೇಳೆಗೆ ಕುತ್ತಾರಿಗೆ ಆಗಮಿಸಿದ್ದ ಬಾಲಿವುಡ್ ಕುಟುಂಬ ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಕೊರಗಜ್ಜನ ಕಟ್ಟೆಯ ಕಚೇರಿ ಸಿಬ್ಬಂದಿಗಳಲ್ಲಿ ಮನವಿ ಮಾಡಿದ್ದರು. ಅಲ್ಲದೇ ಸ್ಥಳದಲ್ಲಿ ಫೋಟೊ ತೆಗೆಯಲು ಬಿಡದೆ, ತೆಗೆದವರನ್ನು ಡಿಲೀಟ್ ಮಾಡುವಂತೆ ಮನವಿ ಮಾಡಿದರು. ಸಂಪ್ರದಾಯದಂತೆ ಕಟ್ಟೆಯೊಳಗೆ ಬೆಳಕಿಲ್ಲದೆ ಕೋಲವು ನೆರವೇರಿದ್ದು, ಹೊರಗೆ ನಿಂತಿದ್ದ ಕತ್ರಿನಾ ಸೇರಿದಂತೆ ಉಳಿದವರು ಕಣ್ಣು ಮುಚ್ಚಿ ಪ್ರಾರ್ಥನೆಯಲ್ಲಿ ಭಾಗಿಯಾದರು.

ಕತ್ರಿನಾ ಕೈಫ್ ಕಚೇರಿಯಲ್ಲಿ ಇರುವ ಭಾವಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮ್ಯಾಂಗ್ಲೋರ್ ಮೇರಿ ಜಾನ್ ಆಫೀಷಿಯಲ್ ಪೇಜ್ ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.

ಹಿಂದಿನಿಂದಲೂ ಕೊರಗಜ್ಜನ ಕ್ಷೇತ್ರದಲ್ಲಿ ಚಿತ್ರೀಕರಣಕ್ಕೆ ಅವಕಾಶ ಇಲ್ಲ. ಆದರೂ ಸೆಲೆಬ್ರಿಟಿಗಳು ಬಂದಾಗ ಕ್ಷೇತ್ರದ ದ್ವಾರದ ಮುಂಭಾಗ ಹಾಗೂ ಕಚೇರಿ ಒಳಗೆ ಇದಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದ್ರೆ, ಇಂದು ಬಾಲಿವುಡ್ ನ ದೊಡ್ಡ ತಂಡವೇ ಆಗಮಿಸಿದ ಕಾರಣದಿಂದ ಯಾರಿಗೂ ಫೋಟೋ ವೀಡಿಯೋಕ್ಕೆ ಅವಕಾಶವನ್ನು ನೀಡಿಲ್ಲ. ಇದರ ನಡುವೆಯೂ ಕ್ಷೇತ್ರದಲ್ಲಿದ್ದ ಕತ್ರಿನಾ ಕೈಫ್ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts