Gl harusha
ದೇಶಸ್ಥಳೀಯ

17 ವರ್ಷ ಬಳಿಕ ಟಿ20 ವರ್ಲ್ಡ್ ಕಪ್ (t20 world cup) ಮುಡಿಗೇರಿಸಿಕೊಂಡ ಭಾರತ!ಕಣ್ಣೀರು ಸುರಿಸಿ ಸಂಭ್ರಮಿಸಿದ ಭಾರತೀಯ ಕ್ರಿಕೆಟ್ ಆಟಗಾರರು!!

ದಕ್ಷಿಣ ಆಫ್ರಿಕಾದ ಪ್ರಬಲ ಪೈಪೋಟಿಯ ನಡುವೆಯೂ ಟಿ20 ವರ್ಲ್ಡ್ ಕಪ್ t20 world cup ಅನ್ನು ಭಾರತ ತನ್ನ ಮುಡಿಗೇರಿಸಿಕೊಂಡಿದೆ. 10 ವರ್ಷದ ಬಳಿಕ ಭಾರತ ಟಿ20 ವರ್ಲ್ಡ್ ಕಪ್ ಗೆದ್ದುಕೊಂಡಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ದಕ್ಷಿಣ ಆಫ್ರಿಕಾದ ಪ್ರಬಲ ಪೈಪೋಟಿಯ ನಡುವೆಯೂ ಟಿ20 ವರ್ಲ್ಡ್ ಕಪ್ t20 world cup ಅನ್ನು ಭಾರತ ತನ್ನ ಮುಡಿಗೇರಿಸಿಕೊಂಡಿದೆ. 17 ವರ್ಷದ ಬಳಿಕ ಭಾರತ ಟಿ20 ವರ್ಲ್ಡ್ ಕಪ್ ಗೆದ್ದುಕೊಂಡಿದೆ.

srk ladders
Pashupathi

ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಭಾರತ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಫೈನಲ್ ಪಂದ್ಯವನ್ನು ಕೈವಶ ಮಾಡಿಕೊಂಡಿದೆ.

20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿದ ಭಾರತ, ಎದುರಾಳಿ ದಕ್ಷಿಣ ಆಫ್ರಿಕಾಕ್ಕೆ 177 ರನ್ ಗಳ ಗುರಿ ನೀಡಿತು. ಇದನ್ನು ಬೆನ್ನತ್ತುವಲ್ಲಿ ವಿಫಲವಾದ ದಕ್ಷಿಣ ಆಫ್ರಿಕಾ ಆಟಗಾರರು 8 ವಿಕೆಟ್ ನಷ್ಟದೊಂದಿಗೆ 169 ರನ್ ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ವಿಜಯಮಾಲೆ ಭಾರತದ ಕೊರಳಿಗೆ ತೊಡಿಸಲ್ಪಟ್ಟಿತು.

ವಿರಾಟ್ ಕೊಹ್ಲಿ 76, ಅಕ್ಷರ್ ಪಟೇಲ್ 46, ಶಿವಂ ದುಬೆ 27 ರನ್ ಗಳಿಸಿ ತಂಡಕ್ಕೆ ಬಲ ನೀಡಿದರು. ಬೌಲರ್ ಗಳಾದ ಹಾರ್ದಿಕ್ ಪಾಂಡ್ಯ 3, ಜಸ್ಪ್ರೀತ್ ಬೂಮ್ರಾ ಹಾಗೂ ಹರ್ಷ ದೀಪ್ ಸಿಂಗ್ ತಲಾ 2 ವಿಕೆಟ್ ಕಬಳಿಸಿದರು.

ಒಂದು ಹಂತದಲ್ಲಿ ದಕ್ಷಿಣ ಆಫ್ರಿಕಾ ಗೆದ್ದೇ ಬಿಟ್ಟಿತು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಸೂರ್ಯ ಕುಮಾರ್ ಯಾದವ್ ಹಿಡಿದ ಕ್ಯಾಚ್, ಪಂದ್ಯದ ಇಡೀಯ ಚಿತ್ರಣವನ್ನೇ ಬದಲಿಸಿತು. ಎದುರಾಳಿಗಳನ್ನು ಉತ್ತಮ ಎಸೆತಗಳ ಮೂಲಕ ಕಟ್ಟಿಹಾಕಿದ ಭಾರತ ತಂಡ 7 ರನ್ ಗಳಿಗೆ ಜಯ ದಾಖಲಿಸಿದರು.

ಪಂದ್ಯ ಗೆಲ್ಲುತ್ತಿದ್ದಂತೆ ಹಾರ್ದಿಕ್ ಪಾಂಡ್ಯ ಆನಂದಭಾಷ್ಪ ಸುರಿಸಿ ಸಂಭ್ರಮಿಸಿದ ದೃಶ್ಯ ಕ್ರೀಡಾಂಗಣದಲ್ಲಿ ಕಂಡುಬಂದಿತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts