ಪುತ್ತೂರು: ಪೆಟ್ರೋಲ್, ಡೀಸಿಲ್, ಗ್ಯಾಸ್ ದರವನ್ನು ಇಳಿಸುವ ಸಾಮರ್ಥ್ಯ ಕೇಂದ್ರ ಸರ್ಕಾರಕ್ಕೆ ಖಂಡಿತಾ ಇದೆ. ಇದರಿಂದ ದೇಶದ ಶೇ. 90ರಷ್ಟು ಮಂದಿಗೆ ಪ್ರಯೋಜನ ಆಗಲಿದೆ ಎಂದು ಆರ್ಯಾಪು ಗ್ರಾಪಂ ಮಾಜಿ ಸದಸ್ಯ ಪುರುಷೋತ್ತಮ್ ರೈ ಬೂಡಿಯಾರ್ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೊಮ್ಮೆ ಧಮ್, ತಾಕತ್ತು ಎನ್ನುವ ಅಂಡರ್ ವರ್ಲ್ಡ್ ಶಬ್ದ ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು. ಇದೀಗ ಮತ್ತೆ ಅದೇ ಮಾತನ್ನು ಹೇಳುವುದಾದರೆ ಅಂತಹ ಧಮ್, ತಾಕತ್ ಇದ್ದರೆ ಪೆಟ್ರೋಲ್, ಡೀಸಿಲ್ ಹಾಗೂ ಗ್ಯಾಸಿನ ಬೆಲೆಯನ್ನು ಕೇಂದ್ರ ಸರಕಾರ ಇಳಿಸಬೇಕು. ಈ ಮೂಲಕ ಉತ್ತಮ ಸರಕಾರ ಎನ್ನುವುದನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ಜನರೂ ಇದನ್ನು ಪ್ರಶ್ನಿಸಬೇಕು. ಜನರು ಕೇಳದೇ ಹೋದರೆ ಸರ್ಕಾರ ನೀಡುವುದೂ ಇಲ್ಲ. ಬೆಲೆ ಏರಿಕೆಯಿಂದ ನಿಜವಾಗಿ ಸಂಕಷ್ಟ ಅನುಭವಿಸುವವರು ಮಧ್ಯಮ ವರ್ಗದವರು. ನಮ್ಮ ಸಂಕಷ್ಟವನ್ನು ಸರಕಾರದ ಮುಂದೆ ಹೇಳುವ ಕೆಲಸ ಆಗಬೇಕಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕುರಿಯ ಶಾಲಾ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ರಾಮಕೃಷ್ಣ ಭಂಡಾರಿ, ಇಬ್ರಾಹಿಂ ನೆಕ್ಕರೆ, ಅನಿಲ್ ಡಿಸೋಜಾ, ಮಾಯಿ ದೇ ದೆವುಸ್ ಚರ್ಚ್ ಸಂಟ್ಯಾರ್ ವಾಳೆಯದ ಮಾಜಿ ಗುರಿಕಾರ ಸುನಿಲ್ ಡಿಸೋಜಾ,