Gl
ಸ್ಥಳೀಯ

ಬೆಳ್ಳಿಪ್ಪಾಡಿ: ಗಜರಾಜನ ಬಂಧಿಸಲು ಬಂದ ಹಾಸನ, ಕುಶಾಲನಗರದ ತಂಡ! ಎರಡಾನೆ ಗದ್ದಲಕ್ಕೆ ಬೆಚ್ಚಿಬಿದ್ದ ಗ್ರಾಮಸ್ಥರು!

ಗ್ರಾಮ, ತೋಡಕ್ಕೆ ನುಗ್ಗಿ ದಾಂಧಲೆ ಎಬ್ಬಿಸುತ್ತಿರುವ ಎರಡು ಆನೆಗಳ ಬಂಧಿಸುವ ಕಾರ್ಯಾಚರಣೆಗೆ ಹಾಸನ ಹಾಗೂ ಕುಶಾಲನಗರದ ಮಾವುತರ ತಂಡ ಪುತ್ತೂರಿಗೆ ಆಗಮಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಗ್ರಾಮ, ತೋಡಕ್ಕೆ ನುಗ್ಗಿ ದಾಂಧಲೆ ಎಬ್ಬಿಸುತ್ತಿರುವ ಎರಡು ಆನೆಗಳ ಬಂಧಿಸುವ ಕಾರ್ಯಾಚರಣೆಗೆ ಹಾಸನ ಹಾಗೂ ಕುಶಾಲನಗರದ ಮಾವುತರ ತಂಡ ಪುತ್ತೂರಿಗೆ ಆಗಮಿಸಿದೆ ಎಂದು ತಿಳಿದುಬಂದಿದೆ.

rachana_rai
Pashupathi
akshaya college
Balakrishna-gowda

ಕಳೆದ ಕೆಲ ದಿನಗಳಿಂದ ಪುತ್ತೂರು ಆಸುಪಾಸಿನ ಪ್ರದೇಶಗಳ ತೋಟಗಳಿಗೆ ನುಗ್ಗಿ ಅಟ್ಟಹಾಸ ಮೆರೆಯುತ್ತಿದ್ದ ಆನೆಗಳು ಮಂಗಳವಾರ ಬೆಳಿಗ್ಗೆ ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಪತ್ತೆಯಾಗಿವೆ

pashupathi

ಕೆಲ ತೋಟಗಳಿಗೆ ನುಗ್ಗಿ ಕೃಷಿ ನಾಶ ಮಾಡಿವೆ. ತೋಟದಲ್ಲಿ ಆನೆ ಲದ್ದಿಯೂ ಪತ್ತೆಯಾಗಿದೆ.

ಪರಪ್ಪೆ ಅಭಯಾರಣ್ಯದಿಂದ ದಾರಿ ತಪ್ಪಿ ಬಂದಿದೆ ಎನ್ನಲಾದ ಸಲಗ ಇದೆಂದು ಹೇಳಲಾಗುತ್ತಿದ್ದು, ಸುಳ್ಯ, ಪುತ್ತೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಹೆಜ್ಜೆ ಹಾಕುತ್ತಿದೆ ಎಂದು ಕೆಲ ದಿನಗಳಿಂದ ವರದಿಯಾಗಿತ್ತು. ಆದರೆ ಈಗ ಒಂಟಿ ಆನೆ ಅಲ್ಲ ಎರಡು ಆನೆಗಳು ಎಂದು ಸ್ಥಳೀಯರು ತಿಳಿಸಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಕೊಳ್ತಿಗೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಭಾರೀ ಗದ್ದಲ ಎಬ್ಬಿಸಿದ ಕಾಡಾನೆಯನ್ನು ಅರಣ್ಯ ಇಲಾಖೆಯವರು ಅಲ್ಲಿಂದ ಬೆನ್ನಟ್ಟುವಲ್ಲಿ ಯಶಸ್ವಿಯಾಗಿದ್ದರು. ಅದಾದ ಬಳಿಕ ಕೆಲವು ತಿಂಗಳು ಕಳೆದ ನಂತರ ಆನೆ ಸವಣೂರು ಗ್ರಾಮದ ಕುಮಾರಮಂಗಲ, ಪುಣ್ಚಪ್ಪಾಡಿ ಪ್ರದೇಶದಲ್ಲಿ ಕಾಣಿಸಿಕೊಂಡು ಜನರನ್ನು ಭಯಭೀತರನ್ನಾಗಿಸಿತ್ತು.

ಜೂ. 5 ರಂದು ಸವಣೂರು ಗ್ರಾಮದಿಂದ ಆನೆ ಕೆಯ್ಯೂರು ಗ್ರಾಮದ ತೆಗ್ಗು, ಓಲೆಮುಂಡೋವು ಪರಿಸರಕ್ಕೆ ತೆರಳಿತ್ತು. ಅಲ್ಲಿಯೂ ಒಂದಷ್ಟು ಕೃಷಿ ಹಾನಿಯುಂಟು ಮಾಡಿತ್ತು. ತೆಗ್ಗು ಎರಬೈಲು ಗುಡ್ಡದಲ್ಲಿದ್ದ ಆನೆಯನ್ನು ಅರಣ್ಯ ಇಲಾಖೆಯವರು ಮತ್ತೆ ಹಿಂದಿರುಗುವಂತೆ ಮಾಡಿದ್ದರು. ಆ ಬಳಿಕ ನರಿಮೊಗರು ಗ್ರಾಮದ ವೀರಮಂಗಲಕ್ಕೆ ಕಾಲಿಟ್ಟಿತ್ತು. ಜೂ.10 ಕ್ಕೆ ಶಾಂತಿಗೋಡು ಗ್ರಾಮಕ್ಕೆ ತಲುಪಿತ್ತು. ಶಾಂತಿಗೋಡಿನ ಗೇರು ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದ ಗೇರು ತೋಪಿನೊಳಗೂ ನುಗ್ಗಿತ್ತು. ಅಲ್ಲಿಂದ ಜೂ.11 ರ ನಸುಕಿನ ಜಾವ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದ ಬಾರ್ತೋಲಿ ಎಂಬಲ್ಲಿ ತೋಟದಲ್ಲಿ ಕಂಡು ಬಂದಿದೆ ಎಂದು ಹೇಳಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

ಕ್ರಿಯಾಶೀಲ ವ್ಯಕ್ತಿ ಮರಣದ ಬಳಿಕವೂ ಸಜೀವ | ಕಲಾಸಿರಿ ಗೊಂಬೆ ಬಳಗದ ಅಣ್ಣಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಉದಯ್

ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಯಾರ ಮನಸ್ಸು ಮಿಡಿಯುತ್ತದೆಯೋ ಅವರು ಸಜೀವ ಆಗಿರುತ್ತದೆ ಎಂದು…

ಪುತ್ತೂರು ಹಿಂಜಾವೇ ಪ್ರತಿಭಟನೆಯಲ್ಲಿ ಶಾಸಕರ ನಿಂದನೆ ಆರೋಪ! | ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್’ನಿಂದ ಪೊಲೀಸರಿಗೆ ದೂರು

ಪುತ್ತೂರು: ಪುತ್ತೂರಿನಲ್ಲಿ ನಡೆದ ಹಿಂಜಾವೇ ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಶಾಸಕ ಅಶೋಕ್ ರೈ…

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ್‌ ಪಾಟೀಲ್‌ ಅವರಿಗೆ ಪುತ್ತೂರು ವಕೀಲ ಸಂಘದಿಂದ ಸ್ವಾಗತ, ಅಭಿನಂದನೆ

ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ್ ಪಾಟೀಲ್‌ ಅವರು ಜೂನ್‌ 26…

1 of 100