Gl harusha
ಕರಾವಳಿಸ್ಥಳೀಯ

ಮಂಗಳೂರು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಎಚ್ ವಿ ರಾಘವೇಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು ವಕೀಲರ ಸಂಘದ 2024-26ರ ಪದಾಧಿಕಾರಿಗಳ ಆಯ್ಕೆ, ಚುನಾವಣೆ ಮೂಲಕ ಜೂನ್ 07ರಂದು ಮಂಗಳೂರು ವಕೀಲರ ಸಂಘದ ಕಛೇರಿಯ ಆವರಣದಲ್ಲಿ ನಡೆದಿದ್ದು, ಅಧ್ಯಕ್ಷರಾಗಿ ಎಚ್. ವಿ ರಾಘವೇಂದ್ರ ನೇಮಕಗೊಂಡರು.

srk ladders
Pashupathi
Muliya

ಉಪಾಧ್ಯಕ್ಷರಾಗಿ ಸುಜಿತ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಧರ್ ಎಚ್, ಜತೆ ಕಾರ್ಯದರ್ಶಿಯಾಗಿ ಜ್ಯೋತಿ ಮತ್ತು ಖಜಾಂಚಿಯಾಗಿ ಗಿರೀಶ್ ಶೆಟ್ಟಿ ಇವರು ಆಯ್ಕೆಯಾದರು.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಶಾ ದೀಪ ಪೈ ಎಚ್, ದೇವದಾಸ್ ರಾವ್, ಪುರುಷೋತ್ತಮ ಭಟ್ ಎಮ್, ಚಂದ್ರಹಾಸ ಕೊಟ್ಟಾರಿ, ಕುಶಾಲಪ್ಪ ಕೆ. ಪ್ರವೀಣ್ ಕುಮಾರ್ ಅಧ್ಯಪಾಡಿ, ಶ್ರೀಮತಿ ಸುಮನಾ ಶರಣ್, ಕುಮಾರಿ ಆರತಿ, ಹರೀಶ್ ಕೆ., ರವಿಕುಮಾರ್ ವಿ., ರವಿರಾಜ್, ಗಿರೀಶ, ಕೃಷ್ಣಪ್ರಸಾದ್ ಕೆ.ವಿ., ಮಹಮ್ಮದ್ ಅಸ್ಗರ್ ಹಾಗೂ ಕುಮಾರಿ ಅಕ್ಷತಾ ಇವರು ಆಯ್ಕೆಯಾದರು.

ಚುನಾವಣೆಯನ್ನು ಮಂಗಳೂರು ವಕೀಲರ ಸಂಘದ ಚುನಾವಣಾ ಅಧಿಕಾರಿ ಹಾಗೂ ಹಿರಿಯ ವಕೀಲ ಡೆರಿಲ್ ಅಂದ್ರಾದೆ ನಡೆಸಿಕೊಟ್ಟರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts