Gl harusha
ರಾಜ್ಯ ವಾರ್ತೆಸ್ಥಳೀಯ

ಆಕಸ್ಮಿಕವಾಗಿ ಗುಂಡು ತಗುಲಿ ಯೋಧ ಸಾವು!

ಈ ಸುದ್ದಿಯನ್ನು ಶೇರ್ ಮಾಡಿ

ಆಕಸ್ಮಿಕವಾಗಿ ಗುಂಡು ತಗುಲಿ ಮಾನ್ವಿ ತಾಲೂಕಿನ ಆರ್ಜಿ ಕ್ಯಾಂಪ್‌ ಸಿಐಎಸ್ಎಫ್ ಯೋಧ ರವಿಕಿರಣ್ (37) ಮೃತಪಟ್ಟಿದ್ದಾರೆ.

srk ladders
Pashupathi
Muliya

ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಯೋಧ ರವಿಕಿರಣ್ ಚೆನೈನ ಕಲ್ಪಕಂ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡಿತ್ತಿದ್ದರು. ಸೋಮವಾರ (ಮೇ 20) ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ತಮ್ಮದೇ ಸರ್ವಿಸ್ ರೈಫಲ್ನಿಂದ ಸಿಡಿದ ಗುಂಡು ತಾಗಿ ರವಿಕಿರಣ್ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೆ ಅವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಯೋಧ ರವಿಕಿರಣ ಮೃತಪಟ್ಟಿದ್ದಾರೆ.

ಯೋಧ ರವಿಕಿರಣ್ ಪಾರ ಪಾರ್ಥಿವ ಶರೀರ ಇಂದು (ಮೇ 21) ಆರ್ಜಿ ಕ್ಯಾಂಪ್ಗೆ ತಲುಪಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಮಾನ್ವಿ ಪಟ್ಟಣದ ಆರ್ಜಿ ಕ್ಯಾಂಪ್ನಲ್ಲಿ ಯೋಧನ ಅಂತ್ಯಕ್ರಿಯೆ ನೆರವೇರಿದೆ. ಯೋಧ ರವಿಕಿರಣ್ ಅಂತ್ಯಕ್ರಿಯೆಯಲ್ಲಿ ಮಾನ್ವಿ ಶಾಸಕ ಹಂಪಯ್ಯ ನಾಯಕ್ ಮತ್ತು ಗ್ರಾಮಸ್ಥರು ಯೋಧನಿಗೆ ಅಂತಿಮ‌ ನಮನ ಸಮರ್ಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts