ಕರಾವಳಿಸ್ಥಳೀಯ

ರೌಡಿಶೀಟರ್ ಪರ ನಿಂತು ಪೋಲಿಸ್ ಠಾಣೆಗೆ ನುಗ್ಗಿ ಗೂಂಡಾಗಿರಿ ಮಾಡಿದ್ದು ಬಿಜೆಪಿ ಸಂಸ್ಕೃತಿಯೇ? ಶಾಸಕ ಹರೀಶ್ ಪೂಂಜಾಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪ್ರಶ್ನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರು ಪೋಲಿಸ್ ಠಾಣೆಗೆ ನುಗ್ಗಿ ಗೂಂಡಾಗಿರಿ ಮಾಡಿದ್ದು ಅಕ್ಷಮ್ಯ. ಶಾಸಕ ಪೂಂಜಾ ರವರು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ಪೋಲಿಸ್ ಠಾಣೆಗೆ ಹೋಗಿಲ್ಲ. ಬದಲಾಗಿ ಸ್ಫೋಟಕ ಕಾಯಿದೆಯಡಿ ಅಕ್ರಮ ಸ್ಫೋಟಕ ಶೇಖರಣೆ ಮಾಡಿರುವ ಆರೋಪ ಮತ್ತು ಅಕ್ರಮ ಗಣಿಗಾರಿಕೆ ಮಾಡುತ್ತಿರುವ ಒಬ್ಬ ರೌಡಿ ಶೀಟರ್ ನ ಪರ. ಇದು ಬಿಜೆಪಿ ಸಂಸ್ಕೃತಿಯೇ ಎಂದು ಕೆಪಿಸಿಸಿಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪ್ರಶ್ನಿಸಿದ್ದಾರೆ.

ಅಕ್ರಮ ಕಪ್ಪುಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದ ಬಿಜೆಪಿ ಯುವ ಮೋರ್ಛಾದ ನಾಯಕರ ವಿರುದ್ಧ ಸ್ಪೋಟಕ ಕಾಯ್ದೆಯಡಿ ಪ್ರಕರಣದಲ್ಲಿ ಬಂಧಿಸಲ್ಪಟ್ಟ ರೌಡಿ ಶೀಟರ್ ನನ್ನು ಬಲಾತ್ಕಾರವಾಗಿ ಬಿಡಿಸಲು ಮದ್ಯ ರಾತ್ರಿ ಠಾಣೆಗೆ ಬಂದು ಅಧಿಕಾರಿಗಳಿಗೆ ನಿಂದನೆ ಮಾಡಿ ಗೂಂಡಾಗಿರಿ ನಡೆಸಿದ ಶಾಸಕರಿಗೂ , ರೌಡಿ ಶೀಟರ್ ಗೂ ಯಾವುದೇ ವ್ಯತ್ಯಾಸ ಇಲ್ಲ. ತಾಲೂಕಿನ ಅಭಿವೃದ್ಧಿಯೆಂದರೆ ಅಕ್ರಮ ಮರಳು , ಮರ , ಕಪ್ಪುಕಲ್ಲು ಗಣಿಗಾರಿಕೆಯ ದಂಧೆ ಎಂದುಕೊಂಡಿದ್ದಾರೆಯೇ ? ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವ ಬದಲಾಗಿ ರೌಡಿಗಳು , ಅಕ್ರಮ ದಂಧೆಕೋರರ ಪರವಾಗಿ ವಕಾಲತ್ತು ನಡೆಸುವ ಮೂಲಕ ತನ್ನ ನೈಜ ಬಣ್ಣವನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ. ಶಾಸಕರು ಒಮ್ಮೆಯಾದರೂ ಜನಸಾಮಾನ್ಯರ ಪರವಾಗಿ ಪೋಲಿಸ್ ಠಾಣೆಗೆ ಹೋಗಿರುವ ಒಂದೇ ಒಂದು ಉದಾಹರಣೆ ಇದೆಯೇ ?ಎಂದಿದ್ದಾರೆ.

SRK Ladders

ಶಾಸಕ ಹರೀಶ್ ಪೂಂಜಾ ರವರು ಸರ್ಕಾರಿ ಅಧಿಕಾರಿಗಳ ಮಾನಸಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುವ ಮೂಲಕ ಸಂವಿಧಾನದ ಕಗ್ಗೊಲೆ ಮಾಡಿದ್ದಾರೆ. ಪೋಲಿಸ್ ಅಧಿಕಾರಿಗಳಿಗೆ ಅಸಂವಿಧಾನಿಕ ಪದ ಬಳಕೆ ಮಾಡಿ , ಪೋಲಿಸರ ಘನತೆ, ಗೌರವಕ್ಕೆ ಧಕ್ಕೆ ಉಂಟು ಮಾಡಿ , ಕರ್ತವ್ಯಕ್ಕೆ ಅಡ್ಡಿ ಪಡಿಸುವ ಮೂಲಕ ಅಕ್ರಮ ದಂಧೆಕೋರರಿಗೆ ಬೆಂಬಲ ನೀಡಿದ್ದು ಶಾಸಕತ್ವಕ್ಕೆ ಇರುವ ಮಾನ , ಮರ್ಯಾದೆಯನ್ನು ಕಳೆದಿದ್ದಾರೆ. ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಗೂಂಡಾಗಿರಿಗೆ , ಅಕ್ರಮ ದಂಧೆಕೋರರಿಗೆ ಅವಕಾಶ ನೀಡುವುದಿಲ್ಲ. ಅಂತಹುದನ್ನು ಮಟ್ಟ ಹಾಕುತ್ತೇವೆ ಎಂದು ಅವರು ಹೇಳಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2025ನೇ…

1 of 3