ವಿಶೇಷಸ್ಥಳೀಯ

ಕುಶಲಕರ್ಮಿಗಳಿಗೆ ನೆರವಾಗುವ ‘ಪಿಎಂ ವಿಶ್ವಕರ್ಮ ಯೋಜನೆ’; ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ನೋಂದಣಿ ಹೇಗೆ?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ದೇಶದಲ್ಲಿನ ಕುಶಲಕರ್ಮಿಗಳಿಗೆ ನೆರವಾಗುವ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳೆದ ವರ್ಷ ಸೆಪ್ಟೆಂಬರ್‌ 17ರಂದು ವಿಶ್ವಕರ್ಮ ಜಯಂತಿಯಂದು ಜಾರಿಗೆ ತಂದ ಯೋಜನೆಯೇ ಪಿಎಂ ವಿಶ್ವಕರ್ಮ ಯೋಜನೆ. ಈ ಯೋಜನೆಯ ಮೂಲಕ ಕರಕುಶಲಕರ್ಮಿಗಳಿಗೆ ಹಲವು ಸೌಲಭ್ಯ ಸಿಗಲಿದೆ. ಹಾಗಾದರೆ ಏನಿದು ಈ ಯೋಜನೆ? ಯಾರೆಲ್ಲ ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಮುಂತಾದ ನಿಮ್ಮ ಸಂಶಯಗಳಿಗೆ ಮನಿಗೈಡ್‌ ಇಲ್ಲಿದೆ ಉತ್ತರ.

ವಿಶ್ವಕರ್ಮ ಯೋಜನೆ ಅಡಿಯಲ್ಲಿ ಕರಕುಶಲಕರ್ಮಿಗಳಿಗೆ ಹಲವು ಸೌಲಭ್ಯಗಳು ಸಿಗಲಿವೆ. ಕರಕುಶಲ ವೃತ್ತಿಯಲ್ಲಿ ತೊಡಗಿದವರಿಗೆ ತರಬೇತಿಯೂ ನೀಡಲಾಗುತ್ತದೆ. ಹೀಗೆ ತರಬೇತಿ ಪಡೆಯುವವರಿಗೆ ಗೌರವ ಧನ ನೀಡಲಾಗುತ್ತದೆ. ತರಬೇತಿ ನಂತರ ಪ್ರಮಾಣ ಪತ್ರದೊಂದಿಗೆ 15,000 ರೂ. ಬೆಲೆಬಾಳುವ ಉಪಕರಣ ನೀಡಲಾಗುತ್ತದೆ. ಹಾಗೆಯೇ ಸ್ವಯಂ ಉದ್ಯೋಗದಲ್ಲಿ ತೊಡಗಲು ಮೊದಲ ಕಂತಿನಲ್ಲಿ 1 ಲಕ್ಷ ರೂ.ವರೆಗೆ ಹಾಗೂ ಎರಡನೇ ಕಂತಿನಲ್ಲಿ 2 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ. ಮಾತ್ರವಲ್ಲ ಬ್ಯಾಂಕ್‌ ಖಾತರಿ ರಹಿತ ಸಾಲ ಒದಗಿಸುವುದು ಈ ಯೋಜನೆಯ ವೈಶಿಷ್ಟ್ಯ.

SRK Ladders

*ಬಿಜೆಪಿ ಅಭ್ಯರ್ಥಿಗಳ ಪಟ್ಟಿ: ಮಂಗಳೂರಿಗೆ ಕ್ಯಾಪ್ಟನ್ ಚೌಟ, ರಾಜ್ಯಕ್ಕೆ ಯಾರ್ಯಾರು? ವಿವರ ಇಲ್ಲಿದೆ…*

ಯಾರಿಗೆಲ್ಲ ಲಭ್ಯ?

ದೇಶಾದ್ಯಂತದ ಗ್ರಾಮೀಣ ಮತ್ತು ನಗರ ಪ್ರದೇಶದ 18 ವರ್ಷದ ನಂತರದ ಕುಶಲಕರ್ಮಿಗಳಿಗೆ ಈ ಯೋಜನೆಯ ಪ್ರಯೋಜನ ಲಭಿಸಲಿದೆ. ಮರ ಕೆಲಸದವರು, ದೋಣಿ ತಯಾರಕರು, ಸಾಂಪ್ರದಾಯಿಕ ಶಸ್ತ್ರ ತಯಾರಿಸುವವರು, ಕುಂಬಾರರು, ಸುತ್ತಿಗೆ ಮತ್ತು ಇತರ ವಸ್ತುಗಳ ತಯಾರಕರು, ಬೀಗ ಮತ್ತು ಕೀಲಿ ತಯಾರಕರು, ಅಕ್ಕ ಸಾಲಿಗರು, ಶಿಲ್ಪಿಗಳು ಮತ್ತು ಕಲ್ಲು ಒಡೆಯುವವರು, ಸಾಂಪ್ರದಾಯಿಕವಾಗಿ ಪಾದರಕ್ಷೆ ತಯಾರಿಸುವವರು, ರಾಜಮೇಸ್ತ್ರಿಗಳು, ಸಾಂಪ್ರದಾಯಿಕ ಬುಟ್ಟಿ, ಚಾಪೆ, ಪೊರಕೆ, ತೆಂಗಿನನಾರಿನ ಹಗ್ಗ ತಯಾರಕರು, ಸಾಂಪ್ರದಾಯಿಕ ಗೊಂಬೆ ಮತ್ತು ಆಟಿಕೆ ತಯಾರಕರು, ಕ್ಷೌರಿಕರು, ಹೂ ಮಾಲೆ ತಯಾರಕರು, ಅಗಸರು, ದರ್ಜಿಗಳು ಮತ್ತು ಮೀನಿನ ಬಲೆ ತಯಾರಕರು ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರು.

*ಮಾರುಕಟ್ಟೆಗೂ ಆವರಿಸಲಿದೆ ‘ಮೌಢ್ಯ’: ಶುಭ ಸಮಾರಂಭಗಳಿಗೆ “ಮೇ” ತಿಂಗಳಿನಿಂದ ಬಿಡುವು!!*

ನೋಂದಣಿ ಹೇಗೆ?

ವಿಶ್ವಕರ್ಮ ಯೋಜನೆಯ ವೆಬ್‌ ಪೋರ್ಟಲ್‌ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು.

ಹೌ ಟು ರಿಜಿಸ್ಟರ್‌ (How To Register) ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

ಮೊಬೈಲ್‌ ಹಾಗೂ ಆಧಾರ್‌ ಸಂಖ್ಯೆ ನಮೂದಿಸಿ ರಿಜಿಸ್ಟ್ರೇಷನ್‌ ಫಾರಂ ತುಂಬಿ.

ವಿಶ್ವಕರ್ಮ ಡಿಜಿಟಲ್‌ ಐಡಿ ಹಾಗೂ ಸರ್ಟಿಫಿಕೇಟ್‌ ಡೌನ್‌ಲೋಡ್‌ ಮಾಡಿಕೊಳ್ಳಿ.

ಯಾರೆಲ್ಲ ಅರ್ಹರು?

ಮೇಲೆ ಸೂಚಿಸಿದ 18 ವೃತ್ತಿಗಳಲ್ಲಿ ಯಾವುದಾದರೂ ಒಂದರಲ್ಲಿ ಸ್ವಯಂ ಉದ್ಯೋಗಿಯಾಗಿದ್ದು, 18 ವರ್ಷ ಮೇಲ್ಪಟ್ಟವವರು ಅರ್ಹರು. ಒಂದು ಕುಟುಂಬದಲ್ಲಿ ಒಬ್ಬ ಸದಸ್ಯ ಮಾತ್ರ ನೊಂದಣಿಗೆ ಅರ್ಹರು. ಜತೆಗೆ ಕುಟುಂಬದಲ್ಲಿ ಯಾವುದೇ ಸದಸ್ಯರು ಸರ್ಕಾರಿ ಉದ್ಯೋಗದಲ್ಲಿರಬಾರದು. ಕಳೆದ 5 ವರ್ಷಗಳಲ್ಲಿ ಪಿಎಂ ಇಜಿಪಿ/ಮುದ್ರಾ ಮತ್ತು ಪಿಎಂ-ಸ್ವನಿಧಿ ಸಾಲಗಳನ್ನು ಪಡೆದಿರಬಾರದು. ಮುದ್ರಾ ಮತ್ತು ಪಿಎಂ-ಸ್ವನಿಧಿ ಯೋಜನೆಗಳಲ್ಲಿ ಸಾಲ ಪಡೆದು ಪೂರ್ಣ ಮರುಪಾವತಿ ಮಾಡಿದ ಕುಶಲಕರ್ಮಿಗಳು ಯೋಜನೆಯ‌ ಲಾಭ ಪಡೆಯಬಹುದು.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ www.pmvishwakarma.gov.inಗೆ ಭೇಟಿ ನೀಡಿ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2