ಸ್ಥಳೀಯ

ಪುತ್ತೂರಲ್ಲಿ ಕುಮಾರ್ ಪೆರ್ನಾಜೆ – ಸೌಮ್ಯ ದಂಪತಿಗೆ ಗಾನಶಾರದೆ ಗಾಯನ ಸ್ಪರ್ಧೆ ಸೀಸನ್ 04 ಗ್ರಾಂಡ್ ಫಿನಾಲೆಯಲ್ಲಿ ಅಂತರಾಜ್ಯ ಮಟ್ಟದ ”ಕೃಷಿ ರತ್ನ ಪ್ರಶಸ್ತಿ” ಪ್ರಧಾನ

ಆರ್ ಪಿ ಕಲಾ ಸೇವಾ ಟ್ರಸ್ಟ್ ಪಾಂಬಾರ್ ಇದರ ವತಿಯಿಂದ ಅಂತರ್ ರಾಜ್ಯ ಮಟ್ಟದ ಗಾನ ಶಾರದೆ ಗಾಯನ ಸ್ಪರ್ಧೆ ಸೀಸನ್ 04 ಗ್ರಾಂಡ್ ಫಿನಾಲೆ ಕಾರ್ಯಕ್ರಮವು ಲಯನ್ಸ್ ಸೇವಾ ಮಂದಿರ ಪುತ್ತೂರಲ್ಲಿ ಜೂನ್ 15 ರಂದು ಸಮಾರೋಪ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ನಡೆಯಲಿರುವುದು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಆರ್ ಪಿ ಕಲಾ ಸೇವಾ ಟ್ರಸ್ಟ್ ಪಾಂಬಾರ್ ಇದರ ವತಿಯಿಂದ ಅಂತರ್ ರಾಜ್ಯ ಮಟ್ಟದ ಗಾನ ಶಾರದೆ ಗಾಯನ ಸ್ಪರ್ಧೆ ಸೀಸನ್ 04 ಗ್ರಾಂಡ್ ಫಿನಾಲೆ ಕಾರ್ಯಕ್ರಮವು ಲಯನ್ಸ್ ಸೇವಾ ಮಂದಿರ ಪುತ್ತೂರಲ್ಲಿ ಜೂನ್ 15 ರಂದು ಸಮಾರೋಪ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ನಡೆಯಲಿರುವುದು.

akshaya college

ಆ ವೇದಿಕೆಯಲ್ಲಿ ವಿಶಿಷ್ಟ ವಿಶೇಷ ಬರಹಗಾರ ತಮ್ಮ ಕೃಷಿ ಜೇನು ಕೃಷಿ ಜೇನುಗಡ್ಡ ಸಂಶೋಧನೆ ಬರಹ ಕಲಾ ಸೇವೆಗಾಗಿ ಅಂತರ್ ರಾಜ್ಯ ಮಟ್ಟದ ಕೃಷಿ ರತ್ನ ಪ್ರಶಸ್ತಿಗೆ, ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗಳನ್ನು ಆರ್ ಪಿ ಕಲಾ ಸೇವಾ ಟ್ರಸ್ಟ್ ಪಾಂಬರ್ ಸಂಚಾಲಕರಾದ ರವಿ ಪಾಂಬರ್ ಮತ್ತು ಅಧ್ಯಕ್ಷರಾದ ಶ್ರೀಧರ್ ಎಕ್ಕಡ್ಕ ಪ್ರಶಸ್ತಿ ಪ್ರಧಾನವನ್ನು ಮಾಡಿದರು.

ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ನಿಮಗೆ ಅಭಿನಂದನೆಗಳೊಂದಿಗೆ ಇನ್ನಷ್ಟು ಸಾಧನೆಗಳು ನಿಮ್ಮದಾಗಲಿ ಎಂದು ಶುಭ ಹಾರೈಸಿದರು.

ಪೇಟ ಶಾಲು ಸ್ಮರಣಿಕೆ ಅಭಿನಂದನ ಪತ್ರಗಳನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ರಾಮಚಂದ್ರ ಅಮಳ (ಪೂಡಾ) ಅಧ್ಯಕ್ಷರು ನಗರ ಪ್ರಾಧಿಕಾರ ಪುತ್ತೂರು ಸದಾನಂದ ಮಾವಾಜಿ ಪದ್ಮರಾಜ ರಾಜ್ ಬಿ ಸಿ ಚಾರ್ವಾಕ ವಿಜಯಕುಮಾರ್ ಸುಳ್ಯ ,ರಾಮ ಪಾoಬಾರು ಮಮತಾ ಮಡಿಕೇರಿ, ಸನತ್ ಕೆ, ಪ್ರಜ್ವಲ್ ಕೆ ನವ್ಯ ಕೆ ಹರೀಶ್ ಪಂಜಿ ಕಲ್ಲು ಸಂದೀಪ್ ಅಡ್ಯನಡ್ಕ ಮಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇತ್ತೀಚೆಗೆ ದಾವಣಗೆರೆಯಲ್ಲಿ ಇಬ್ಬರನ್ನು ಗೌರವಿಸಿದ್ದು. ಇವರ ಸಾಧನೆಗೆ ಸಾಕ್ಷಿ ಹಾಗೆ ಬೆಂಗಳೂರು ವಿಶ್ವ ಹವ್ಯಕ ಸಮ್ಮೇಳನದಲ್ಲಿ ಗಡಿನಾಡ ಧ್ವನಿ ಸಮ್ಮೇಳನದಲ್ಲಿ ,ಮಧುಭೂಷಣ ಜಿಲ್ಲಾ ರಾಜ್ಯೋತ್ಸವ ,ಶಿವಮೊಗ್ಗ ಬೆಂಗಳೂರು ಸಂಘ ಹಲವಾರು ಸಂಘ ಸಂಸ್ಥೆಗಳು ಗೌರವಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 107