ಪುತ್ತೂರು: ಜೀವನದಲ್ಲಿ ಒಮ್ಮೆಯಾದರೂ ವಿಮಾನದಲ್ಲಿ ಪಯಣಿಸಿ ಆಗಸದಲ್ಲಿ ಹಾರಾಡಿದ ಅನುಭವ ಪಡೆಯಬೇಕೆಂಬುದು ಬಹುತೇಕರ ಹೆಬ್ಬಯಕೆ. ಆದರೆ ಬಡ ಮತ್ತು ಮಧ್ಯಮ ವರ್ಗದವರಿಗೆ ತುಸು ಕಷ್ಟವೇ ಸರಿ. ಆದರೆ ಇಲ್ಲೊಬ್ಬರು ತಮ್ಮ ಸಂಸ್ಥೆಯ ಕಾರ್ಮಿಕರೆಲ್ಲರನ್ನು ಮೇ ೧ರ ಕಾರ್ಮಿಕರ ದಿನಾಚರಣೆಯ ಸಂದರ್ಭ ವಿಮಾನದಲ್ಲಿ ಬೆಂಗಳೂರಿಗೆ ಪ್ರವಾಸಕ್ಕೆ ಕರೆದೊಯ್ಯಲಿದ್ದಾರೆ. ಈ ಕುರಿತು ಈಗಾಗಲೇ ಟಿಕೆಟ್ ಕಾಯ್ದಿರಿಸಿದ್ದಾರೆ.
ಇಂಥ ಹೃದಯವಂತಿಕೆ ತೋರಿದವರು ಪುತ್ತೂರಿನ ಎಸ್.ಅರ್.ಕೆ.ಲ್ಯಾರ‍್ಸ್ನ ಮಾಲಕ ಕೇಶವ ಅಮೈ ಅವರು. ಇವರು ದೃಷ್ಟಿಯನ್ನು ಕಳೆದು ಕೊಂಡರೂ ಅನೇಕ ಬಾರಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಆದರೆ ನಾ ಕಂಡು ಕಾಣದ ಜಗತ್ತನ್ನು ಕಾರ್ಮಿಕರಿಗೆ ಬಾನಂಗಳದಿಂದ ತೋರಿಸುವ ಪ್ರಯತ್ನ ಮಾಡಬೇಕೆಂಬ ಮಹದಾಸೆಯಿಟ್ಟುಕೊಂಡಿದ್ದರು.
ಪ್ರತಿ ವರ್ಷ ಹಲವು ಹೊಸತನವನ್ನು ಪರಿಚಯಿಸುತ್ತಿರುವ ಕೇಶವ ಅಮೈ ಮಾಲಕತ್ವದ ಎಸ್‌ಆರ್‌ಕೆ ಲ್ಯಾಡರ್ಸ್ ಕಳೆದ ವರ್ಷ ರಜತ ಸಂಭ್ರಮವನ್ನು ಆಚರಿಸಿ ಕಾರ್ಮಿಕರಿಗೆ ಕ್ರೀಡಾಕೂಟ ಎರ್ಪಡಿಸಿತ್ತು. ಇದೀಗ ಮೇ 1 ಕಾರ್ಮಿಕರ ದಿನದ ಅಂಗವಾಗಿ ಕಾರ್ಮಿಕರಿಗೆ ಬಾನಂಗಳದಿAದ ಜಗತ್ತನ್ನು ನೋಡುವ ಅವಕಾಶ ‘ವಿಮಾನಯಾನ’ ಪ್ರವಾಸದ ಯೋಜನೆ ರೂಪಿಸಿದ್ದಾರೆ.
ಮೇ 1 ರಂದು ತನ್ನ ಸಂಸ್ಥೆಯ ೫೧ ಕಾರ್ಮಿಕ ಸಿಬ್ಬಂದಿಗಳೊAದಿಗೆ ತಾನೂ ಬೆಂಗಳೂರಿಗೆ ವಿಮಾನ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಿಗ್ಗೆ ಪುತ್ತೂರಿನಿಂದ ಮಂಗಳೂರಿಗೆ ಬಸ್‌ನಲ್ಲಿ ತೆರಳಿ ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ತೆರಳಿ ಅಲ್ಲಿ ಸಂಸ್ಥೆಗೆ ಸಂಬAಧಿಸಿ ಇತರ ಪ್ಯಾಕ್ಟರಿಗಳಲ್ಲಿ ಮಾಹಿತಿ ಕಾರ್ಯಕ್ರಮ, ಸಂಜೆ ಸಂಗೀತ ರಸಮಂಜರಿ, ಕ್ಯಾಂಪ್ ಪೈಯರ್ ಮೂಲಕ ಸಂಭ್ರಮಿಸಿ ಮೇ ೨ಕ್ಕೆ ಮೈಸೂರಿಗೆ ತೆರಳಿ ಅಲ್ಲಿ ಪ್ರವಾಸಿ ತಾಣಗಳನ್ನು ಸುತ್ತಾಡಿ ರಾತ್ರಿ ಮರಳಿ ಪುತ್ತೂರಿಗೆ ಬರುವ ಎರಡು ದಿನದ ಪ್ರವಾಸ ಪೂರ್ಣಗೊಳ್ಳಲಿದೆ.
ಸಿಬ್ಬಂದಿಗಳ ಸಂತೋಷವೇ ನನ್ನ ಸಂತೋಷ:
ನನ್ನ ಎಸ್‌ಆರ್‌ಕೆಯ ಕಾರ್ಮಿಕ ಸಿಬ್ಬಂದಿಗಳು ಸಂಸ್ಥೆಯ ಸದಸ್ಯರು. ಅವರು ಸೀಸನ್ ಸಂದರ್ಭದಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ರಾತ್ರಿಯೂ ಕೆಲಸ ಮಾಡಿ ಗ್ರಾಹಕರ ಬೇಡಿಕೆಯನ್ನು ಈಡೇರಿಸಿದ್ದಾರೆ. ಅಂತಹ ಸದಸ್ಯರಿಗೆ ನನ್ನಿಂದ ಏನಾದರೂ ಸಂತೋಷದ ದಿನ ಸಿಗಬೇಕು. ಹಾಗಾಗಿ ಅವರಲ್ಲಿ ಹಿರಿಯ ಸಿಬ್ಬಂದಿಗಳನ್ನು ನಾಲ್ಕೆöÊದು ಆಯ್ಕೆಯನ್ನು ಮುಂದಿಟ್ಟೆ. ಅವರು ಪ್ರವಾಸವನ್ನು ಆರಿಸಿಕೊಂಡರು. ಅಗ ನಾನು ಅದಕ್ಕೆ ವಿಮಾನ ಪ್ರವಾಸ ಮಾಡೋಣ ಎಂದೆ. ಅದಕ್ಕೆ ಅವರು ಒಪ್ಪಿಕೊಂಡರು. ಸಿಬ್ಬಂದಿಗಳ ಸಂತೋಷವೇ ನನ್ನ ಸಂತೋಷ.
ಕೇಶವ ಅಮೈ, ಮಾಲಕರು ಎಸ್.ಆರ್.ಕೆ.ಲ್ಯಾರ‍್ಸ್ ಪುತ್ತೂರು