Gl harusha
ಸ್ಥಳೀಯ

ಏ.20ರಂದು ಉದ್ಘಾಟನೆಗೊಳ್ಳಲಿರುವ  ದಕ್ಷಿಣ ಕನ್ನಡದ ಅತಿ ದೊಡ್ಡ ಶೋರೂಂನಲ್ಲಿದೆ ಹಲವು ಹೊಸತನ |ನಾಲ್ಕು ಅಂತಸ್ತಿನ ಬೃಹತ್ ಮಳಿಗೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್’ಗೆ ನಟ ರಮೇಶ್ ಅರವಿಂದ್ ಬ್ರಾಂಡ್ ಅಂಬಾಸಡರ್ |ಹತ್ತೂರಲ್ಲೂ ಹೆಸರು ಮಾಡಲಿದೆ ಪುತ್ತೂರ ಚಿನ್ನ

81 ವರ್ಷಕ್ಕೂ ಅಧಿಕ ಪರಂಪರೆ ಹೊಂದಿರುವ ಮುಳಿಯ ಚಿನ್ನದ ಮಳಿಗೆ ಇದೀಗ ಹೊಸ ಹೆಸರಿನೊಂದಿಗೆ, ಹಲವು ಹೊಸತನಗೊಂದಿಗೆ ಗ್ರಾಹಕರ ಮುಂದೆ ಬರಲು ಸಿದ್ಧವಾಗಿದೆ. ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಹೆಸರಿನೊಂದಿಗೆ ದಕ್ಷಿಣ ಕನ್ನಡದಲ್ಲೇ ಅತೀ ದೊಡ್ಡ ಶೋರೂಂ ಎಂಬ ಹೆಗ್ಗಳಿಕೆಯೊಂದಿಗೆ ಏಪ್ರಿಲ್ 20ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: 81 ವರ್ಷಕ್ಕೂ ಅಧಿಕ ಪರಂಪರೆ ಹೊಂದಿರುವ ಮುಳಿಯ ಚಿನ್ನದ ಮಳಿಗೆ ಇದೀಗ ಹೊಸ ಹೆಸರಿನೊಂದಿಗೆ, ಹಲವು ಹೊಸತನಗೊಂದಿಗೆ ಗ್ರಾಹಕರ ಮುಂದೆ ಬರಲು ಸಿದ್ಧವಾಗಿದೆ. ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಹೆಸರಿನೊಂದಿಗೆ ದಕ್ಷಿಣ ಕನ್ನಡದಲ್ಲೇ ಅತೀ ದೊಡ್ಡ ಶೋರೂಂ ಎಂಬ ಹೆಗ್ಗಳಿಕೆಯೊಂದಿಗೆ ಏಪ್ರಿಲ್ 20ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ.

srk ladders
Pashupathi
Muliya

ಏ. 20ರಂದು ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ದಕ್ಷಿಣ ಭಾರತದ ಜನಪ್ರಿಯ ನಟ, ಸ್ಫೂರ್ತಿದಾಯಕ ಮಾತುಗಾರ ರಮೇಶ್ ಅರವಿಂದ್ ಆಗಮಿಸಲಿದ್ದಾರೆ. ಅಲ್ಲಿಂದ ದೇವರ ದೀಪದೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕೋರ್ಟ್ ರಸ್ತೆಯಲ್ಲಿರುವ ಸುಲೋಚನಾ ಟವರ್ಸ್’ಗೆ ಆಗಮಿಸಿ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಉದ್ಘಾಟಿಸಲಿದ್ದಾರೆ.

ಹೊಸ ಶೋರೂಂನ ಅನಾವರಣ ಪ್ರಯುಕ್ತ ಏಪ್ರಿಲ್ 20ರಿಂದ ಒಂದು ತಿಂಗಳ ಕಾಲ ನೃತ್ಯ, ಸಂಗೀತ, ಹಾಸ್ಯ ನಾಟಕ, ಯಕ್ಷಗಾನ, ಫ್ಯಾಶನ್ ಶೋ, ಗೇಮ್ಸ್ ಹೀಗೆ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವಿವಿಧ ಕಾರ್ಯಕ್ರಮಗಳಲ್ಲಿ ಶಾಸಕರು, ಸಚಿವರು, ಲೋಕಸಭಾ ಸದಸ್ಯರು, ಸಾಹಿತಿಗಳು, ಉದ್ಯಮಿಗಳು ಭಾಗವಹಿಸಲಿದ್ದಾರೆ.

ಸಂಸ್ಥೆಯ ಛೇರ್’ಮೆನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ್ ಮುಳಿಯ ಮಾತನಾಡಿ, 2011ರಲ್ಲಿ ಮುಳಿಯದ ಹೊಸ ಶೋರೂಂ ಉದ್ಘಾಟನೆಗೊಂಡಿತ್ತು. ಇದೀಗ ಅದೇ ಶೋರೂಂ ಅನ್ನು ವಿಸ್ತೃತಗೊಳಿಸಿ, ಹೊಸತನಗಳನ್ನು ಅಳವಡಿಸಿ ಪುನರ್ ನವೀಕರಣ ಗ್ರಾಹಕರ ಮುಂದಿಡುತ್ತಿದ್ದೇವೆ. ಹೊಸ ಹೆಸರು ಮಾತ್ರವಲ್ಲ, ಬ್ರಾಂಡ್ ಕೂಡ ಹೊಸತನದಿಂದ ಕೂಡಿದೆ. ಇಂಗ್ಲೀಷಿನ ಸ್ಮಾಲ್ ಲೆಟರಿನಲ್ಲಿರುವ ಮುಳಿಯ ಹೆಸರಿನಲ್ಲಿ ಹೊಳಪಿನ ಗುರುತು ಇದೆ. ಗ್ರಾಹಕರು ಬದಲಾಗುತ್ತಿದ್ದು, ಅವರ ಆಸೆ – ಆಕಾಂಕ್ಷೆಗಳಿಗೆ ಸರಿಯಾಗಿ ನಾವು ಹೊಸತನ ನೀಡುತ್ತಿದ್ದೇವೆ. ಈ ಹೊಸ ಹಾಗೂ ವಿಶಾಲ ಶೋರೂಂ ನಮ್ಮ ಲಕ್ಷಕ್ಕಿಂತಲೂ ಹೆಚ್ಚಿನ ಪರಂಪರಾಗತ ನಿಷ್ಠಾವಂತ ಗ್ರಾಹಕರನ್ನು ನೆನಪಿಟ್ಟು ಅವರನ್ನೂ ಮತ್ತು ಈಗಿನ ಹೊಸ ಪೀಳಿಗೆಯನ್ನೂ ಆಕರ್ಷಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುಮಾರು 300ಕ್ಕಿಂತಲೂ ಹೆಚ್ಚಿನ ಸಿಬ್ಬಂದಿಗಳನ್ನು ಒಳಗೊಂಡಿರುವ ಮುಳಿಯ, 1 ಸಾವಿರಕ್ಕಿಂತಲೂ ಹೆಚ್ಚಿನ ಕುಟುಂಬಗಳಿಗೆ ಪರೋಕ್ಷವಾಗಿ ಉದ್ಯೋಗ ನೀಡಿದೆ. ಶುದ್ಧ ಹಾಲ್ ಮಾರ್ಕ್ 916 ಹಾಗೂ ಎಚ್.ಯು.ಡಿ. ಚಿನ್ನದ ಆಭರಣಗಳನ್ನು ಮತ್ತು ಐಜಿಐ ಸರ್ಟಿಫೈಡ್ ವಜ್ರಾಭರಣಗಳನ್ನು ಮಾತ್ರ ಇಲ್ಲಿ ಮಾರಾಟ ಮಾಡುತ್ತಿದ್ದೇವೆ. ಈ ಸಂಸ್ಥೆ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಬೇಕು ಎಂದು ನಟ ರಮೇಶ್ ಅರವಿಂದ್ ಅವರನ್ನು ಬ್ರಾಂಡ್ ಅಂಬಾಸಡರ್ ಆಗಿ ನೇಮಿಸಿದ್ದೇವೆ. ರಾಜ್ಯದ ಇನ್ನಷ್ಟು ಪ್ರದೇಶಗಳಿಗೆ ಶೋರೂಂ ವಿಸ್ತರಿಸಲು ಇದು ಸಹಾಯಕವಾಗಲಿದೆ ಎಂದು ಭವಿಷ್ಯದ ಕನಸುಗಳನ್ನು ತೆರೆದಿಟ್ಟರು.

ಶೋರೂಂ ಬಗ್ಗೆ ಮಾತನಾಡಿದ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣ ನಾರಾಯಣ ಮುಳಿಯ, 4 ಅಂತಸ್ತಿನ ಈ ಅತ್ಯಾಧುನಿಕ ಶೈಲಿಯ ವಿನ್ಯಾಸದ ವಿಶಾಲ ಶೋರೂಂನಲ್ಲಿ ಚಿನ್ನ, ಬೆಳ್ಳಿ, ವಜ್ರ, ಆಧುನಿಕ ಬ್ರಾಂಡೆಡ್ ವಾಚುಗಳು, ಗಿಫ್ಟ್ ಐಟಂಗಳು ಹಾಗೂ ವಿವಿಧ ಬಗೆಯ ಚಿನ್ನಾಭರಣ ಕೌಂಟರ್’ಗಳು ಇರಲಿವೆ. 10 ಸಾವಿರ ಚದರ ಅಡಿಯ ಈ ವಿಶಾಲ ಶೋರೂಂನಲ್ಲಿ ವ್ಯಾಲೆಟ್ ಪಾರ್ಕಿಂಗ್ ವ್ಯವಸ್ಥೆಯೂ ಇರಲಿದೆ. ಮಕ್ಕಳ ಆಟಕ್ಕೆ, ಆರೈಕೆಗೆ ವಿಶೇಷ ಕೊಠಡಿ, ಗ್ರಾಹಕರಿಗೆ ತಿಂಡಿ ಊಟದ ವ್ಯವಸ್ಥೆ, ವಾಚ್ ಕೌಂಟರ್, ಬೆಳ್ಳಿಯ ಆಭರಣಗಳ ಸಿಲ್ವರಿಯ ಕೌಂಟರ್, ವಜ್ರಾಭರಣ ಅಮೂಲ್ಯ ಕೌಂಟರ್, ದೇಶದಲ್ಲಿಯೇ ಪ್ರಪ್ರಥಮ ಎನ್ನಬಹುದಾದ ಗೋಲ್ಡ್ ಪ್ಯೂರಿಟಿ ಅನಲೈಸರ್ ಹಾಗೂ ಡೈಮಂಡ್ ಡಿಟೆಕ್ಟರ್ ಟೆಸ್ಟಿಂಗ್ ಮಿಷನ್, ಬಳೆ – ಆಂಟಿಕ್ – ನೆಕ್ಲೆಸ್ – ಪಾರಂಪರಿಕ ಆಭರಣಗಳ ಕೌಂಟರ್’ಗಳು ಇರಲಿವೆ ಎಂದು ವಿವರಿಸಿದರು.

ಧರ್ಮಸ್ಥಳ, ಮೂಡುಬಿದರೆ, ಕಾರ್ಕಳ, ಸುಬ್ರಹ್ಮಣ್ಯ, ಬಂಟ್ವಾಳ, ಕಾಸರಗೋಡು, ಸುಳ್ಯ ಮೊದಲಾದ ಪ್ರದೇಶದ ಗ್ರಾಹಕರು ಪುತ್ತೂರು ಮುಳಿಯಕ್ಕೆ ಆಗಮಿಸುತ್ತಾರೆ. ಮದುವೆ ಹಾಗೂ ಮನೆಯ ಸಮಾರಂಭಕ್ಕೆ ಅವರಿಗೆ ಹೆಚ್ಚಿನ ಆಯ್ಕೆ ಬೇಕಾಗುತ್ತದೆ. ಹಾಗಾಗಿ ಅವರು ಹೆಚ್ಚು ಸಂತೋಷದ / ಆರಾಮದ ವಾತಾವರಣ ಬಯಸುತ್ತಾರೆ. ಈ ರೀತಿಯ ಇಷ್ಟು ವಿಶಾಲ ಶೋರೂಂ ಮಂಗಳೂರು ಸಹಿತವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಹೊಸದು. ಹಾಗಾಗಿ ಜನತೆ ಈ ಹೊಸ ವಿಶಾಲ ಶೋರೂಂ ಹಾಗೂ ಹೆಚ್ಚಿನ ವಿನ್ಯಾಸಗಳ ಆಭರಣಗಳ ಆಯ್ಕೆಗಾಗಿ ಮುಳಿಯವನ್ನು ಇಷ್ಟಪಡುವುದು ಖಂಡಿತ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ರಾಂಚ್ ಮ್ಯಾನೇಜರ್ ರಾಘವೇಂದ್ರ, ಕನ್ಸಲ್ಟೆಂಟ್ ವೇಣು ಶರ್ಮಾ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ