ರಾಜ್ಯ ವಾರ್ತೆಸ್ಥಳೀಯ

ತೆರವುಗೊಳಿಸಿದ್ದ ಜಾಗದಲ್ಲೇ ಹನುಮಧ್ವಜ‌ ಹಾರಿಸಿದ ಸಂಸದ ಅನಂತ ಕುಮಾರ್ ಹೆಗಡೆ!!

ಈ ಸುದ್ದಿಯನ್ನು ಶೇರ್ ಮಾಡಿ

ಭಟ್ಕಳ: ಸ್ಥಳೀಯ ಆಡಳಿತ ಧ್ವಜ ತೆರವು‌ ಮಾಡಿದ್ದ ಜಾಗದಲ್ಲೇ ಸೋಮವಾರ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಹನುಮ ಧ್ವಜ ಹಾರಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

SRK Ladders

ಅನಧಿಕೃತವಾಗಿ ಧ್ವಜ ಕಟ್ಟೆ ನಿರ್ಮಾಣ ಮಾಡಲಾಗಿದೆ ಎಂದು ತೆಂಗಿನಗುಂಡಿ ಗ್ರಾಮದಲ್ಲಿ ಕಟ್ಟಲಾಗಿದ್ದ ಧ್ವಜ ಕಟ್ಟೆ ಹಾಗೂ ಸಾವರ್ಕರ್ ಬೊರ್ಡ್ ತೆರವು ಮಾಡಲಾಗಿತ್ತು. ಇದಕ್ಕೆ ಸ್ಥಳೀಯ ಹಿಂದೂ ಕಾರ್ಯಕರ್ತರು ಭಾರೀ ವಿರೋಧ ವ್ಯಕ್ತಪಡಿಸಿದ್ದರು.

ಕಾರ್ಯಕರ್ತರ ಸಭೆಗೆಂದು ಸೋಮವಾರ ಅನಂತ್ ಕುಮಾರ್ ಹೆಗಡೆ ಅವರು ತೆಂಗಿನಗುಂಡಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ “ನಾನಿದ್ದೇನೆ ನಡೀರಿ” ಎಂದು ಹೇಳಿ ಅನಂತ್ ಕುಮಾರ್ ಹೆಗಡೆ ಅವರು ತೆರವು ಮಾಡಲಾಗಿದ್ದ ಸ್ಥಳದಲ್ಲೇ ಹನುಮ ಧ್ವಜ ಹಾರಿಸಿದರು. ಅಲ್ಲದೆ, ಸಾವರ್ಕರ್ ಬೋರ್ಡ್ ಕೂಡ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

1 of 4