Gl
ಸ್ಥಳೀಯ

ಕುಮಾರಮಂಗಲ ಶಾಲೆಗೆ ಕೊಳವೆ ಬಾವಿ, ನೀರಿನ ಟ್ಯಾಂಕ್, ಸ್ಟ್ಯಾಂಡ್, ಮೇಜು ಕೊಡುಗೆ | ಸವಣೂರು ಗ್ರಾ.ಪಂ., ಶಾಲಾ ಹಿರಿಯ ವಿದ್ಯಾರ್ಥಿ ಸಂಘ ನೀಡಿದ ಕೊಡುಗೆಗಳ ಉದ್ಘಾಟನೆ

ಕುಮಾರ ಮಂಗಲ ಶಾಲೆಗೆ ಸವಣೂರು ಗ್ರಾಮ ಪಂಚಾಯತ್ ನಿಂದ ಕೊಳವೆಬಾವಿ ಮತ್ತು ಹಿರಿಯ ವಿದ್ಯಾರ್ಥಿ ಸಂಘದಿಂದ ನೀರಿನ ಟ್ಯಾಂಕ್ ಮತ್ತು ಸ್ಟಾಂಡ್ ಉದ್ಘಾಟನಾ ಸಮಾರಂಭ ಹಾಗೂ  ಮೇಜುಗಳ ಹಸ್ತಾಂತರ ಕಾರ್ಯಕ್ರಮ ಏ. 9ರಂದು ಕುಮಾರ ಮಂಗಲ ಶಾಲೆಯಲ್ಲಿ ಜರಗಿತು.

ಈ ಸುದ್ದಿಯನ್ನು ಶೇರ್ ಮಾಡಿ

ಸವಣೂರು: ಕುಮಾರ ಮಂಗಲ ಶಾಲೆಗೆ ಸವಣೂರು ಗ್ರಾಮ ಪಂಚಾಯತ್ ನಿಂದ ಕೊಳವೆಬಾವಿ ಮತ್ತು ಹಿರಿಯ ವಿದ್ಯಾರ್ಥಿ ಸಂಘದಿಂದ ನೀರಿನ ಟ್ಯಾಂಕ್ ಮತ್ತು ಸ್ಟಾಂಡ್ ಉದ್ಘಾಟನಾ ಸಮಾರಂಭ ಹಾಗೂ  ಮೇಜುಗಳ ಹಸ್ತಾಂತರ ಕಾರ್ಯಕ್ರಮ ಏ. 9ರಂದು ಕುಮಾರ ಮಂಗಲ ಶಾಲೆಯಲ್ಲಿ ಜರಗಿತು.

rachana_rai
Pashupathi
akshaya college
Balakrishna-gowda

ಕೊಳವೆಬಾವಿಯನ್ನು ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಬಿ.ಎಸ್. ಉದ್ಛಾಟಿಸಿ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಗ್ರಾಪಂ ನಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಸರಕಾರಿ ಶಾಲೆಯನ್ನು ಉಳಿಸುವ ಪ್ರಯತ್ನವನ್ನು ಪೋಷಕರು,ಗ್ರಾಮಸ್ಥರು ಮಾಡಬೇಕು ಎಂದರು.

pashupathi

ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ನೀಡಿದ ನೀರಿನ ಟ್ಯಾಂಕನ್ನು ಉದ್ಘಾಟನೆ ಮಾಡಿ ಮಾತನಾಡಿದ ವಕೀಲ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹೇಶ್ ಕೆ ಸವಣೂರು, ಹಿರಿಯ ವಿದ್ಯಾರ್ಥಿ, ಪೋಷಕರು, ಗ್ರಾಮ ಪಂಚಾಯತ್ ಹಾಗೂ ದಾನಿಗಳ, ಶಿಕ್ಷಕರ ಸಹಕಾರದೊಂದಿಗೆ ಶಾಲೆಯ ಅಭಿವೃದ್ಧಿಯನ್ನು ಮಾಡುವ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ಮುಖ್ಯ ಅತಿಥಿಗಳಾದ ಗ್ರಾಪಂ ಸದಸ್ಯ ಗಿರಿಶಂಕರ ಸುಲಾಯ ಮಾತನಾಡಿ, ಸರಕಾರಿ ಶಾಲೆಗಳ  ಬಗ್ಗೆ  ನಾವು ವಿಶೇಷ ಒತ್ತನ್ನು ನೀಡಬೇಕು. ಪ್ರತಿಯೊಬ್ಬ ಪೊಷಕರು ತಮ್ಮ ಮಕ್ಕಳೊಂದಿಗೆ ಶಾಲೆಯ ಅಭಿವೃದ್ಧಿ ತೊಡಗಿಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು, ಗ್ರಾಮ ಪಂಚಾಯತ್ ಸದಸ್ಯರಾದ ಶೀನಪ್ಪ ಶೆಟ್ಟಿ ನೆಕ್ರಾಜೆ, ಯಶೋಧ ನೂಜಾಜೆ, ಬೆಂಚ್ ಡೆಸ್ಕ್ ಕೊಡುಗೆಯಾಗಿ ನೀಡಿದ ಸವಣೂರು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೈ ಸುಡಿಮೂಳ್ಳು, ವಿದ್ಯಾರ್ಥಿ ಸಂಘದಿಂದ ನೀಡಿದಂತಹ ಕೊಡುಗೆಯಾದ ನೀರಿನ ಟ್ಯಾಂಕ್ ನ್ನು ಉದ್ಘಾಟನೆಯನ್ನು ಮಾಡಿದರು.

ದಾನಿಗಳಾದ ಸುರೇಶ ರೈ ಸೂಡಿಮುಳ್ಳು, ಹಿರಿಯ ವಿದ್ಯಾರ್ಥಿ ಸಂಘದ ಜತೆ ಕಾರ್ಯದರ್ಶಿ ಉಮೇಶ್ ಬೇರಿಕೆ ಕುಮಾರ ಮಂಗಲ, ಎಸ್ ಡಿ ಎಂ ಸಿಯ ಅಧ್ಯಕ್ಷೆ ಎಸ್. ಹೇಮಲತಾ ಕುಮಾರಮಂಗಲ, ಉಪಾಧ್ಯಕ್ಷ ಗಂಗಾಧರ ಕನ್ಯಾಮಂಗಲ, ಎಸ್‌.ಡಿ.ಎಂ.ಸಿ. ಸದಸ್ಯರಾದ ಸುಂದರ ಕೆ. ಕನ್ಯಾಮಂಗಲ, ರಮೇಶ್ ಕುಮಾರಮಂಗಲ, ವೇದಾವತಿ, ಸುರೇಖಾ, ರೇಖಾ, ಸರಿತಾ, ಸ್ಮಿತಾ, ಜಯಂತಿ, ಮಮತ, ಶ್ಯಾಮಲಾ, ಜಗದೀಶ್, ಅಕ್ಕು , ಶಾಲೆಯ ಅತಿಥಿ ಶಿಕ್ಷಕರಾದ ಶ್ಯಾಮ್, ಕಾವ್ಯಶ್ರೀ, ರಾಜೇಶ್ವರಿ ಕನ್ಯಾಮಂಗಲ, ಅಂಗನವಾಡಿ ಶಿಕ್ಷಕಿ ಜಾನಕಿ, ಅಡುಗೆ ಸಿಬ್ಬಂದಿ ಸೇಸಮ್ಮ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಶಾಲೆಯ ಮುಖ್ಯಗುರು ಸಂತೋಷ್ ಎನ್.ಟಿ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಪುತ್ತೂರು ಹಿಂಜಾವೇ ಪ್ರತಿಭಟನೆಯಲ್ಲಿ ಶಾಸಕರ ನಿಂದನೆ ಆರೋಪ! | ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್’ನಿಂದ ಪೊಲೀಸರಿಗೆ ದೂರು

ಪುತ್ತೂರು: ಪುತ್ತೂರಿನಲ್ಲಿ ನಡೆದ ಹಿಂಜಾವೇ ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಶಾಸಕ ಅಶೋಕ್ ರೈ…

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

1 of 101