ಸ್ಥಳೀಯ

ನಿಂತಿದ್ದ ರಿಕ್ಷಾ ಹಿಮ್ಮುಖವಾಗಿ ಚಲಿಸಿ ಅಪಘಾತಗೊಂಡು, ಗಂಭೀರ ಗಾಯಗೊಂಡಿದ್ದ ರಫೀಕ್ ಮೃತ್ಯು!!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರಿಕ್ಷಾ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕೂರ್ನಡ್ಕ ಮರೀಲ್ ಐ.ಕೆ.ಕಂಫೌಂಡ್ ನಿವಾಸಿ ದಿ.ಇಬ್ರಾಹಿಂ ರವರ ಮಗ ರಫೀಕ್ ರವರು ಮಾ. 2ರಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ksrtc ಬಸ್ ನಿಲ್ದಾಣದ ಅಂದಿನ A M ಕಾಂಪ್ಲೆಕ್ಸ್ ನಲ್ಲಿ SKY ಮೊಬೈಲ್ ಅಂಗಡಿ ಯನ್ನು ಹೊಂದ್ದಿದ್ದ ಇವರು, ನಂತರ ರಿಕ್ಷಾ ಚಾಲಕರಾಗಿ ದುಡಿಯುತಿದ್ದರು.

SRK Ladders

ಕೆಲ ದಿನಗಳ ಹಿಂದೆ ಸಾಮೆತ್ತಡ್ಕದ ತನ್ನ ಅಣ್ಣನ ಮನೆಗೆ ರಿಕ್ಷಾದಲ್ಲಿ ತೆರಳಿದ್ದ ರಫೀಕ್ ಅವರು, ರಿಕ್ಷಾವನ್ನು ಶೆಡ್ ನಲ್ಲಿ ಪಾರ್ಕ್ ಮಾಡಿ ಗೇಟ್ ಹಾಕಲೆಂದು ತೆರಳಿದ್ದರು. ಅಷ್ಟರಲ್ಲಿ ನಿಲ್ಲಿಸಿದ್ದ ರಿಕ್ಷಾ ಹಠಾತ್ ಹಿಮ್ಮುಖವಾಗಿ ಚಲಿಸಿ, ಗೇಟ್ ಹಾಕುತ್ತಿದ್ದ ರಫೀಕ್ ಅವರಿಗೆ ಢಿಕ್ಕಿ‌ ಹೊಡೆದಿದೆ. ಗೇಟ್ ಹಾಗೂ ರಿಕ್ಷಾ ನಡುವೆ ಸಿಲುಕಿದ ರಫೀಕ್ ಅವರು, ಗಂಭೀರ ಗಾಯಗೊಂಡಿದ್ದರು.

ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮಾ. 2ರಂದು ರಾತ್ರಿ ಕೊನೆಯುಸಿರೆಳೆದಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸದಾ ನಗುಮೊಗದ ರಫೀಕ್ ಅವರು, ಎಲ್ಲರನ್ನು ನಗಿಸುತ್ತಾ, ಅವರ ನಗುವಲ್ಲೇ ಖುಷಿ ಕಂಡವರು. ಎಲ್ಲರೊಂದಿಗೆ ಸಮಾನವಾಗಿ ಬೆರೆಯುತ್ತಿದ್ದ ರಫೀಕ್, ಕೊನೆಯುಸಿರೆಳೆದಿದ್ದಾರೆ. ಅವರ ಮೃತದೇಹವನ್ನು ಭಾನುವಾರ ಮಧ್ಯಾಹ್ನ ಮರೀಲಿನ ತಮ್ಮ ಸ್ವಗೃಹಕ್ಕೆ ತರಲಾಗುವುದು ಎಂದು ಕುಟುಂಭಿಕರು ತಿಳಿಸಿದ್ದಾರೆ.

ಮೃತರು ಪತ್ನಿ, ಮೂವರು ಗಂಡು ಮಕ್ಕಳು ಮತ್ತು ಸಹೋದರರಾದ ಅಬ್ದುಲ್ ಅಝೀಝ್, ಅಬ್ದುಲ್ ರಝಾಕ್, ಅಕಾಶ್ ಪೂಟ್ ವೇರ್ ಮಾಲಕ ಲತೀಫ್ ಮತ್ತು ಝೀಯಾದ್ ಅವರನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2