pashupathi
ಕರಾವಳಿರಾಜ್ಯ ವಾರ್ತೆ

ಮೋರಿಯಲ್ಲಿ ಹಣದ ಹೊಳೆ..!ನೋಟುಗಳನ್ನು ಜೇಬಿಗಿಳಿಸಿದ ಊರ ಜನರು!!

tv clinic
ಮಳೆಯ ನೀರು ಸಾಗಿ ಹೋಗುವ ಮೋರಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾದ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಟಪಡಿ ಬಳಿಯ ಮೋರಿಯಲ್ಲಿ ₹500 ನೋಟುಗಳು ತೇಲಾಡುತ್ತಿರುವುದು ವರದಿಯಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮಳೆಯ ನೀರು ಸಾಗಿ ಹೋಗುವ ಮೋರಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾದ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಟಪಡಿ ಬಳಿಯ ಮೋರಿಯಲ್ಲಿ ನಡೆದಿದೆ. ಮೋರಿಯಲ್ಲಿ ₹500 ನೋಟುಗಳು ತೇಲಾಡುತ್ತಿರುವುದು ವರದಿಯಾಗಿದೆ.

akshaya college

ಪ್ರತಿಯೊಬ್ಬರಿಗೂ ₹500 ನೋಟುಗಳು 1 ಸಾವಿರ, 5 ಸಾವಿರ, 10, 50 ಸಾವಿರದವರೆಗೂ ನೋಟುಗಳು ಸಿಕ್ಕಿವೆ

ಎಲ್ಲರ ಮುಖದಲ್ಲೂ ಖುಷಿ, ಇರುಸು ಮುರುಸು ಮೊದಲಿಗೆ ನಕಲಿ ನೋಟು ಅಂದುಕೊಂಡಿದ್ದರು.  ಒಂದು ನೋಟನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಮೇಲೆಯೇ ಇದು ಅಸಲಿ ನೋಟು ಅನ್ನುವುದು ಗೊತ್ತಾಗಿದೆ. ಸಿಕ್ಕಿದ್ದೇ ಅದೃಷ್ಟ ಅಂತ ಹಣವನ್ನು ಜೇಬಿಗೆ ಹಾಕಿಕೊಂಡಿದ್ದಾರೆ.

ಈ ಕ್ಷಣಕ್ಕೂ ಅಲ್ಲಿ ಹಣ ತೆಗೆದುಕೊಂಡವರು ಅಚ್ಚರಿಗೊಂಡಿದ್ದಾರೆ. ಇಷ್ಟೊಂದು ನೋಟುಗಳನ್ನು ನೀರಿಗೆ ಎಸೆದಿದ್ದು ಯಾರು? ಅನ್ನೋ ಯೋಚನೆ ಮಾಡುತ್ತಿದ್ದಾರೆ. ಸುಮಾರು 2 ರಿಂದ 2.5 ಲಕ್ಷದಷ್ಟು ₹500ರ ನೋಟುಗಳು ಮೋರಿಯಲ್ಲಿ ಸಿಕ್ಕಿವೆ. ಕೆಲವರಂತೂ ತಮಗೆ ಸಿಕ್ಕ ಹಣ ಎಷ್ಟು ಅನ್ನುವುದನ್ನೂ ಹೇಳುತ್ತಿಲ್ಲ. ಒಂದು ವೇಳೆ ಪೊಲೀಸರು ಬಂದು ವಾಪಾಸ್‌ ಪಡೆಯಬಹುದು ಅನ್ನುವ ಭಯದಲ್ಲಿದ್ದಾರೆ. ಹಾಗಾಗಿಯೇ ಇಲ್ಲಿ ಅಚಾನಕ್ ಆಗಿ ಸಿಕ್ಕಿರುವ ಹಣ 2.5 ಲಕ್ಷಕ್ಕಿಂತಲೂ ಹೆಚ್ಚು ಎಂದೇ ಭಾವಿಸಲಾಗಿದೆ. ಅಲ್ಲದೇ, ಈ ಹಣದ ವಾರಸುದಾರರು ಯಾರು ಅನ್ನುವ ಪ್ರಶ್ನೆಗೆ ಉತ್ತರವೂ ಸಿಕ್ಕಿಲ್ಲ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಸಾಮಾಜಿಕ ಜಾಲತಾಣದಲ್ಲಿ ಶಾಸಕ ಅಶೋಕ್ ರೈ ಬಗ್ಗೆ ಅಸಭ್ಯ ಸಂದೇಶ ಕ್ಷಮೆ ಕೇಳಿದ ತಾಲೂಕು ಕಚೇರಿ ಸಿಬ್ಬಂದಿ!

ಪುತ್ತೂರು: ಕಳೆದ ಕೆಲವು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರ…