Gl
ರಾಜ್ಯ ವಾರ್ತೆ

ನಿನ್ನ ಹೆಂಡತಿಗೆ ಬಟ್ಟೆ ಸರಿಯಾಗಿ ಧರಿಸಲು ಹೇಳು! ಇಲ್ಲದಿದ್ದರೆ ಆಕೆಯ ಮುಖಕ್ಕೆ ಆ್ಯಸಿಡ್ ಎರಚುವೆ!! ಸಹೋದ್ಯೋಗಿಗೆ ಬೆದರಿಕೆ ಹಾಕಿದ ನಿಕಿತ್ ಶೆಟ್ಟಿ!!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಸರಿಯಾಗಿ ಬಟ್ಟೆ ಧರಿಸದಿದ್ದರೆ ಮಹಿಳಾ ಸಹೋದ್ಯೋಗಿಯ ಮುಖಕ್ಕೆ ಆ್ಯಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯೊಬ್ಬನನ್ನು ಕಂಪನಿಯಿಂದ ವಜಾಗೊಳಿಸಲಾಗಿದೆ ಎಂದು ಶುಕ್ರವಾರ ಮೂಲಗಳು ತಿಳಿಸಿವೆ.

Pashupathi

ಪೊಲೀಸರು ಆರೋಪಿ ನಿಕಿತ್ ಶೆಟ್ಟಿ ವಿರುದ್ಧ ತನಿಖೆ ಆರಂಭಿಸಿದ್ದಾರೆ.

akshaya college

ವಿಶೇಷವಾಗಿ ಕರ್ನಾಟಕದಲ್ಲಿ, ನಿಮ್ಮ ಹೆಂಡತಿಗೆ ಒಳ್ಳೆಯ ಡ್ರೆಸ್ ಧರಿಸಲು ಹೇಳಿ, ಇಲ್ಲದಿದ್ದರೆ ಆಕೆಯ ಮುಖದ ಮೇಲೆ ಆಸಿಡ್ ಎರಚಬೇಕಾಗುತ್ತದೆ ಎಂದು ಶೆಟ್ಟಿ ಅವರು ಅಕ್ಟೋಬರ್ 9 ರಂದು ಅನ್ಸಾರ್‌ಗೆ ಮೇಸೆಜ್ ಕಳುಹಿಸಿದ್ದರು. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಮೇಸೆಜ್ ಸ್ಕ್ರೀನ್ ಶಾಟ್ ನ್ನು ಹಂಚಿಕೊಂಡಿದ್ದರು.

ನನ್ನ ಹೆಂಡತಿಯ ಬಟ್ಟೆಯ ಆಯ್ಕೆಯನ್ನು ಪ್ರಶ್ನೆ ಮಾಡಿರುವ ಈ ವ್ಯಕ್ತಿ, ನನ್ನ ಹೆಂಡತಿಯ ಮುಖದ ಮೇಲೆ ಆಸಿಡ್ ಎರಚುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಈ ರೀತಿಯ ಯಾವುದೇ ಘಟನೆ ನಡೆಯದಂತೆ ಈ ವ್ಯಕ್ತಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ’ ಎಂದು ಶಹಬಾಜ್ ಅನ್ಸಾರ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದು. ಇದನ್ನು ಡಿಜಿಪಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್ ಅವರಿಗೆ ಟ್ಯಾಗ್ ಕೂಡಾ ಮಾಡಿದ್ದಾರೆ.

ಈ ಸಂಸ್ಥೆಯಲ್ಲಿ (ಶೆಟ್ಟಿ ಕೆಲಸ ಮಾಡುತ್ತಿದ್ದ ಖಾಸಗಿ ಸಂಸ್ಥೆ) ಮಹಿಳೆಯರು ಸುರಕ್ಷಿತವಾಗಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

ನೆಟ್ಟಿಗರು ಈ ವಿಷಯವನ್ನು ಗಮನಕ್ಕೆ ತಂದ ನಂತರ ಶೆಟ್ಟಿ ಅವರನ್ನು ಕಂಪನಿಯಿಂದ ವಜಾಗೊಳಿಸಿದೆ. ನನ್ನ ಪತ್ನಿಗೆ ಆಸಿಡ್ ದಾಳಿಯ ಬೆದರಿಕೆ ಹಾಕಿದ ವ್ಯಕ್ತಿ ಕೆಲಸ ಕಳೆದುಕೊಂಡಿದ್ದಾನೆ. ಕಂಪನಿಯು ಕೂಡಲೇ ಕಾರ್ಯಪ್ರವೃತ್ತರಾಗಿ ಅವರನ್ನು ವಜಾಗೊಳಿಸಿದೆ. ಇದನ್ನು ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಅನ್ಸಾರ್ ಬರೆದುಕೊಂಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಒಲ್ಲದ ಮದುವೆ, ನಿಲ್ಲದ ಪ್ರೇಮ | ತಾಳಿ ಕಟ್ಟೋ ವೇಳೆ ಮುರಿದ ಮದುವೆ, ಸಂಜೆಗೆ ಪ್ರೇಮಿ ಜೊತೆ ನೆರವೇರಿತು

ಹಾಸನ: ಮೂರು ತಿಂಗಳ ಹಿಂದೆ ನಿಶ್ಚಯವಾಗಿ ಇಂದು ನಡೆಯಬೇಕಿದ್ದ ಮದುವೆಯನ್ನು ತಾಳಿ ಕಟ್ಟುವ ವೇಳೆ…