ಉಡುಪಿ: ಮಹಾಶಿವರಾತ್ರಿ ಹಬ್ಬದ ಸಂದರ್ಭ ಜನರ ವಿಶೇಷ ಬೇಡಿಕೆಯಂತೆ ಯಶವಂತಪುರ- ಮಡಗಾಂವ್ ಜಂಕ್ಷನ್- ಯಶವಂತಪುರ ನಡುವೆ ಕೊಂಕಣ ರೈಲ್ವೆಯ ಸಹಯೋಗದೊಂದಿಗೆ ನೈರುತ್ಯ ರೈಲ್ವೆ ವಿಶೇಷ ರೈಲನ್ನು ಓಡಿಸಲು ನಿರ್ಧರಿಸಿದೆ.
ಈ ರೈಲಿಗೆ ಚಿಕ್ಕಬಾಣಾವರ, ಚೆನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಬಾರಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟ, ಗೋಕರ್ಣ ರೋಡ್, ಅಂಕೋಲ ಹಾಗೂ ಕಾರವಾರಗಳಲ್ಲಿ ನಿಲುಗಡೆ ಇರಲಿದೆ.
ರೈಲು ನಂ. 06507 ಯಶವಂತಪುರ – ಮಡಗಾಂವ್ ಜಂಕ್ಷನ್ ಎಕ್ಸ್‌ಪ್ರೆಸ್ ವಿಶೇಷ ರೈಲು ಫೆ. 13ರಂದು ಶುಕ್ರವಾರ ಅಪರಾಹ್ನ 12:30ಕ್ಕೆ ಯಶವಂತಪುರ ದಿಂದ ಹೊರಟು ಮರುದಿನ ಮುಂಜಾನೆ 6:45ಕ್ಕೆ ಮಡಗಾಂವ್ ತಲುಪಲಿದೆ.
ರೈಲು ನಂ.06508 ಮಡಗಾಂವ್ ಜಂಕ್ಷನ್- ಯಶವಂತಪುರ ಎಕ್ಸ್‌ಪ್ರೆಸ್ ರೈಲು ಫೆ.16ರ ಸೋಮವಾರ ಬೆಳಗ್ಗೆ 11 ಗಂಟೆಗೆ ಮಡಗಾಂವ್ ಜಂಕ್ಷನ್‌ನಿಂದ ಹೊರಟು ಮರುದಿನ ಮುಂಜಾನೆ 4:45ಕ್ಕೆ ಯಶವಂತಪುರ ತಲುಪಲಿದೆ.
ಈ ರೈಲು ಒಟ್ಟು 20 ಕೋಚ್‌ಗಳನ್ನು ಹೊಂದಿರಲಿದೆ. ಇವುಗಳಲ್ಲಿ ಫಸ್ಟ್ ಕ್ಲಾಸ್ 2ಟಯರ್ 1ಕೋಚ್, 2ಟಯರ್ ಎಸಿ-2, 3ಟಯರ್ ಎಸಿ-2, ಸ್ಲೀಪರ್ ಕೋಚ್-9, ಜನರಲ್-4 ಹಾಗೂ ಎಸ್‌ಎಲ್‌ಆರ್-2 ಕೋಚ್‌ಗ ಳಿರುತ್ತವೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
























