ಬೆಂಗಳೂರು: ಕೆಇಎ ನಡೆಸುವ ಪರೀಕ್ಷೆಗಳ ಸಮಯದಲ್ಲಿ ವಸ್ತ್ರಸಂಹಿತೆ ವಿಚಾರದಲ್ಲಿ ಗೊಂದಲ ಉಂಟಾಗದಂತೆ ನೋಡಿಕೊಳ್ಳಲು ಏಕರೂಪ ವಸ್ತ್ರಸಂಹಿತೆ ಸಿದ್ಧಪಡಿಸಿದೆ.
ರಾಜ್ಯದಲ್ಲಿ ಸಿಇಟಿ ಸೇರಿದಂತೆ ಕೆಇಎ ನಡೆಸುವ ಎಲ್ಲಾ ಸ್ಪರ್ಧಾತ್ಮಕ ಮತ್ತು ನೇಮಕಾತಿ ಪರೀಕ್ಷೆಗಳಲ್ಲಿ ಮಂಗಳಸೂತ್ರ, ಕಾಲುಂಗುರ ಧರಿಸಲು ಅನುಮತಿ ನೀಡಿದೆ.
ಪುರುಷ ಅಭ್ಯರ್ಥಿಗಳಿಗೆ ಅರ್ಧ ತೋಳಿನ ಶರ್ಟ್, ಕಾಲರ್ ಇಲ್ಲದ ಶರ್ಟ್ ಧರಿಸಬೇಕು. ಆದರೆ ಜಿಪ್ ಪ್ಯಾಕೇಟ್, ದೊಡ್ಡ ಬಟನ್ ಇರಬಾರದು. ಪೂರ್ಣ ತೋಳಿನ ಶರ್ಟ್, ಕುರ್ತಾ, ಜೀನ್ಸ್ ಪ್ಯಾಂಟ್‌ಗೆ ಅವಕಾಶ ಇಲ್ಲ. ಶೂ ನಿಷೇಧ. ಚಪ್ಪಲಿಗೆ ಮಾತ್ರ ಅವಕಾಶ. ಲೋಹದ ಸರ, ಕಿವಿಯೋಲೆಗಳು, ಉಂಗುರ, ಕಡಗಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
ಮಹಿಳಾ ಅಭ್ಯರ್ಥಿಗಳು ಮಂಗಲಸೂತ್ರ, ಕಾಲುಂಗರ ಬಿಟ್ಟು ಇತರೆ ಆಭರಣ ನಿಷೇಧಿಸಲಾಗಿದೆ. ವಿಸ್ತಾರವಾದ ವಿನ್ಯಾಸ ಹೊಂದಿರುವ ಬಟ್ಟೆಗೆ ನಿಷೇಧ. ಪೂರ್ಣ ತೋಳಿನ ಬಟ್ಟೆ/ಜೀನ್ಸ್ ಪ್ಯಾಂಟ್ ನಿಷೇಧ. ತೆಳು ಚಪ್ಪಲಿ ಕಡ್ಡಾಯ ಎಂದು ಕೆಇಎ ತಿಳಿಸಿದೆ.