Gl
ರಾಜ್ಯ ವಾರ್ತೆ

ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ:9ಸಾಧಕರಿಗೆ ಗೌರವ ಪ್ರಶಸ್ತಿ ಪ್ರಕಟ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 2022 ಹಾಗೂ 2023 ಮತ್ತು 2024 ರ ಸಾಲಿನ ಪ್ರಶಸ್ತಿಯನ್ನು 9 ಮಂದಿ ಸಾಧಕರಿಗೆ ಘೋಷಿಸಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 2022 ಹಾಗೂ 2023 ಮತ್ತು 2024 ರ ಸಾಲಿನ ಪ್ರಶಸ್ತಿಯನ್ನು 9 ಮಂದಿ ಸಾಧಕರಿಗೆ ಘೋಷಿಸಲಾಗಿದೆ.

rachana_rai
Pashupathi

2022 ನೇ ಸಾಲಿನ ಸಂಶೋಧನೆ ಹಾಗೂ ಸಾಹಿತ್ಯ ಕ್ಷೇತ್ರದ ಪ್ರಶಸ್ತಿಗೆ ಡಾ| ರಘಪತಿ ಕೆಸ್ತೂರು (71), ಇದೇ ಸಾಲಿನ ತುಳು ನಾಟಕ ಸಿನಿಮಾ ಕ್ಷೇತ್ರದ ಪ್ರಶಸ್ತಿಗೆ ರತ್ನಮಾಲ ಪುರಂದರ ಬೆಂಗಳೂರು (65), ಜಾನಪದ ಕ್ಷೇತ್ರದ ಪ್ರಶಸ್ತಿಗೆ ಪ್ರಭಾಕರ ಶೇರಿಗಾರ ಉಡುಪಿ (65) ಆಯ್ಕೆಯಾಗಿದ್ದಾರೆ.

akshaya college

2023 ನೇ ಸಾಲಿನ ತುಳು ಸಾಹಿತ್ಯ ಕ್ಷೇತ್ರದ ಪ್ರಶಸ್ತಿಗೆ ಸಿಮಂತೂರು ಚಂದ್ರಹಾಸ ಸುವರ್ಣ ಮುಂಬಯಿ (70) ಆಯ್ಕೆಯಾಗಿದ್ದಾರೆ. ಇದೇ ಸಾಲಿನ ನಾಟಕ ಕ್ಷೇತ್ರದ ಪ್ರಶಸ್ತಿಗೆ ನೆಕ್ಕಿದ ಪುಣಿ ಗೋಪಾಲಕೃಷ್ಣ ಬೆಂಗಳೂರು (77) ಆಯ್ಕೆಯಾಗಿದ್ದಾರೆ. ಜಾನಪದ ಕ್ಷೇತ್ರದ ಪ್ರಶಸ್ತಿಗೆ ಲಕ್ಷ್ಮಣ ಕಾಂತ ಕಣಂತೂರು (65) ಆಯ್ಕೆಯಾಗಿದ್ದರೆ.

2024 ನೇ ಸಾಲಿನ ಸಾಹಿತ್ಯ ಕ್ಷೇತ್ರದ ಪ್ರಶಸ್ತಿಗೆ ಯಶವಂತ ಬೋಳೂರು (70) ಆಯ್ಕೆಯಾಗಿದ್ದಾರೆ. ಇದೇ ಸಾಲಿನ ನಾಟಕ, ಸಿನಿಮಾ ಕ್ಷೇತ್ರದ ಪ್ರಶಸ್ತಿಗೆ ಸರೋಜಿನಿ ಎಸ್‌. ಶೆಟ್ಟಿ (65) ಆಯ್ಕೆಯಾಗಿದ್ದಾರೆ. ಕೃಷಿ ಜನಪದ ಕ್ಷೇತ್ರದ ಪ.ಶಸಿಗೆ ಬೆಳಂಗಡಿಯ ಬಿ.ಕೆ. ದೇವರಾವ್ (80) ಆಯ್ಕೆಯಾಗಿದ್ದಾರೆ

ಪ್ರಶಸ್ತಿಯು ಐವತ್ತು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರಧಾನ ಸಮಾರಂಭವು ಮಾ.15 ರಂದು ಮಂಗಳೂರಿನ ಉರ್ವಾಸ್ಟೋರ್‌ನಲ್ಲಿರುವ ತುಳುಭವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ತಿಳಿಸಿದ್ದಾರೆ.

.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಜಾತ್ರೆ, ರ್ಯಾಲಿ, ಸಮಾವೇಶ, ಸಾಮೂಹಿಕ ಕಾರ್ಯಕ್ರಮಗಳಿಗೆ ಹೊಸ ಕಾನೂನು! ಅನುಮತಿ ಪಡೆಯುವುದೇಗೆ? ಹೊಸ ಮಸೂದೆಯಲ್ಲಿ ಏನಿದೆ?

ಬೆಂಗಳೂರು: ರಾಜಕೀಯ ರ್ಯಾಲಿ, ಸಮಾವೇಶ, ಸಾಮೂಹಿಕ ವಿವಾಹ ಮೊದಲಾದ ಸಮಾರಂಭಗಳಿಗೆ ಇನ್ನು ಅನುಮತಿ…