Gl jewellers
ಕ್ರೀಡೆ

ವಿಜಯೀಭವ…: ಫೈನಲ್ ತಲುಪಿದ ಪುತ್ತೂರು ಕಂಬಳ | ಕಾಟಿ, ಬೊಲ್ಲೆ, ರಾಬರ್ಟ್, ಪಾಂತೆ, ಚೆನ್ನೆ, ಜಿಂಕೆ… ಯಾರ ಕೊರಳಿಗೆ ವಿಜಯಮಾಲೆ? ದೇವರಮಾರು ಗದ್ದೆಯ ಕಂಬಳದ ಫೈನಲ್’ನಲ್ಲಿದೆ ಘಟಾನುಘಟಿ ಕೋಣಗಳು: ಇಲ್ಲಿದೆ ವಿವರ…

ಮಹಾಲಿಂಗೇಶ್ವರ ದೇವರ ದೇವರಮಾರು ಗದ್ದೆಯಲ್ಲಿ ನಡೆಯುತ್ತಿರುವ ಕೋಟಿ - ಚೆನ್ನಯ ಜೋಡುಕರೆ ಕಂಬಳ ಅಂತಿಮ ಹಂತಕ್ಕೆ ತಲುಪಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರ ದೇವರಮಾರು ಗದ್ದೆಯಲ್ಲಿ ನಡೆಯುತ್ತಿರುವ ಕೋಟಿ – ಚೆನ್ನಯ ಜೋಡುಕರೆ ಕಂಬಳ ಅಂತಿಮ ಹಂತಕ್ಕೆ ತಲುಪಿದೆ.

ವಾದ್ಯಘೋಷದೊಂದಿಗೆ ಸೆಮಿಫೈನಲ್ ಗೆದ್ದ ಕೋಣಗಳನ್ನು ವೈಭವದಿಂದ ಮಂಜೊಟ್ಟಿಯಿಂದ ಕರೆಗೆ ಇಳಿಸಲು ಸಜ್ಜಾಗುತ್ತಿದೆ.

ಸೆಮಿಫೈನಲ್ ಘಟ್ಟದಲ್ಲಿ ಎಲ್ಲಾ ವಿಭಾಗದಲ್ಲಿಯೂ ಕೋಣಗಳು ಮೇಲಾಟ ನಡೆಸಿವೆ. ಸಣ್ಣ ಅಂತರದಲ್ಲಿ ಕೆಲ ಕೋಣಗಳು ಹಿಂದುಳಿಯಿತು. ಇದರಲ್ಲಿ ಗೆದ್ದ ಕೋಣಗಳು ಫೈನಲ್ ಪ್ರವೇಶಿಸಿವೆ. ಇನ್ನೇನು ಕೆಲವೇ ಸಮಯದಲ್ಲಿ ಫೈನಲ್ ಸ್ಪರ್ಧೆ ನಡೆಯಲಿದೆ.

ಈ ಬಾರಿಯ ಕಂಬಳ ಅದ್ದೂರಿಯಾಗಿ ನಡೆದಿದೆ. ಕರಾವಳಿಯ ಕಂಬಳಗಳ ಪೈಕಿ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಪುತ್ತೂರು ಕಂಬಳವನ್ನು ಲಕ್ಷಾಂತರ ಮಂದಿ ವೀಕ್ಷಿಸಿದರು.

ಫೈನಲ್’ನಲ್ಲಿರುವ ಕೋಣಗಳ ವಿವರ:
ಹಗ್ಗ ಹಿರಿಯ: ನಂದಳಿಕೆ ಶ್ರೀಕಾಂತ್ ಭಟ್ ಹಾಗೂ ಕೊಳಕ್ಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ ಅವರ ಕೋಣಗಳಿವೆ.


ಹಗ್ಗ ಕಿರಿಯದಲ್ಲಿ ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಕರ ಶೆಟ್ಟಿ ಹಾಗೂ ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ ಬಿ. ಅವರ ಕೋಣಗಳಿವೆ.

ಅಡ್ಡ ಹಲಗೆಯಲ್ಲಿ ಪುತ್ತೂರು ಸರೋವರ ಹವೀಶ ಹರೀಶ್ ಶಾಂತಿ ಹಾಗೂ ಬೋಳಾರ ತ್ರಿಶಾಲ್ ಕೆ. ಪೂಜಾರಿ ಅವರ ಕೋಣಗಳಿವೆ.

ನೇಗಿಲು ಹಿರಿಯದಲ್ಲಿ ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ ಹಾಗೂ ಬೆಳ್ಳಿಪ್ಪಾಡಿ ಕೈಪ ಕೇಶವ ಮಾಂಕು ಭಂಡಾರಿ ಅವರ ಜೋಣಗಳಿವೆ.

ನೇಗಿಲು ಕಿರಿಯದಲ್ಲಿ ಮಿಜಾರು ಹರಿಮೀನಾಕ್ಷಿ ದೋಟ ಹರಿಯಪ್ಪ ಶೆಟ್ಟಿ ಹಾಗೂ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರ ಕೋಣಗಳಿವೆ.

ಇನ್ನು ಕನಹಲಗೆಯಲ್ಲಿ ನಿಶಾನೆಗೆ ನೀರು ಹಾಯಿಸಿದ ಹಂಕರಜಾಲು ಶ್ರೀನಿವಾಸ ಬಿರ್ಮಣ್ಣ ಶೆಟ್ಟಿ ಪ್ರಥಮ, ಬೈಂದೂರು ಸಸಿಹಿತ್ಲು ವೆಂಕಟ ಪೂಜಾರಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಫೈನಲ್ ಕರೆಗಿಳಿವ ಕೋಣಗಳಿವು:
ಮೋಡೆ – ಕಾಟಿ, ರಾಜೆ – ಶಬರೀಶ, ಬೊಲ್ಲೆ – ಪಾಂತೆ, ಮ್ಯಾಕ್ಸಿ – ಕಾಳೆ, ಬಾಬು – ಕರ್ಣೆ, ದೂಜೆ – ರಾಬರ್ಟ್, ಚೆನ್ನೆ – ಗುಂಡು, ದಾಸ – ಹೊನ್ನು, ಬೊಲ್ಲೆ – ಕಾಲೆ, ಅಪ್ಪು – ಜಿಂಕೆ ಕೋಣಗಳು ಕರೆಗಿಳಿದಿವೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts