ಕ್ರೀಡೆ

ಈಜು ಸ್ಪರ್ಧೆ: ಫಿಲೋಮಿನಾ ಪ ಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದಲ್ಲಿ ಹಲವು ಪ್ರಶಸ್ತಿಗಳು

GL
ಅಂಡರ್ ವಾಟರ್ ಸ್ಪೋರ್ಟ್ಸ್ ಫೆಡರೇಷನ್ ಆಫ್ ಇಂಡಿಯಾ ಇದರ ಆಯೋಜನೆಯಲ್ಲಿ ನ14 ರಿಂದ 17ರ ವರೆಗೆ ನ್ಯೂ ದೆಹಲಿಯ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಸ್ವಿಮ್ಮಿಂಗ್ ಪೂಲ್ ಸಂಕಿರಣದಲ್ಲಿ ನಡೆದ 'ನಾಲ್ಕನೇ ರಾಷ್ಟ್ರೀಯ ಫಿನ್ ಸ್ವಿಮ್ಮಿಂಗ್  ಚಾಂಪಿಯನ್ ಶಿಪ್' ಸ್ಪರ್ಧೆಯಲ್ಲಿ  ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಮೂರು ವಿದ್ಯಾರ್ಥಿಗಳು  ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು:  ಅಂಡರ್ ವಾಟರ್ ಸ್ಪೋರ್ಟ್ಸ್ ಫೆಡರೇಷನ್ ಆಫ್ ಇಂಡಿಯಾ ಇದರ ಆಯೋಜನೆಯಲ್ಲಿ ನ14 ರಿಂದ 17ರ ವರೆಗೆ ನ್ಯೂ ದೆಹಲಿಯ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಸ್ವಿಮ್ಮಿಂಗ್ ಪೂಲ್ ಸಂಕಿರಣದಲ್ಲಿ ನಡೆದ ‘ನಾಲ್ಕನೇ ರಾಷ್ಟ್ರೀಯ ಫಿನ್ ಸ್ವಿಮ್ಮಿಂಗ್  ಚಾಂಪಿಯನ್ ಶಿಪ್’ ಸ್ಪರ್ಧೆಯಲ್ಲಿ  ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಮೂರು ವಿದ್ಯಾರ್ಥಿಗಳು  ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.
ಪ್ರಥಮ ವಿಜ್ಞಾನ ವಿಭಾಗದ. ಅನ್ವಿತ್ ರೈ ಬರಿಕೆ  ಮೊನೋ – ಫಿನ್ 50ಮೀ, 100ಮೀ  ಮತ್ತು 200ಮೀ ವಿಭಾಗದಲ್ಲಿ ಮೂರು ಬಂಗಾರ ಹಾಗೂ 50ಮೀ ಬೈ – ಫಿನ್ ವಿಭಾಗದಲ್ಲಿ ಕಂಚಿನ ಪದಕದೊಂದಿಗೆ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದುಕೊಂಡಿರುತ್ತಾರೆ.
  ದಿಗಂತ್ ವಿ ಎಸ್  50ಮೀ    ಬೈ ಪಿನ್ಸ್ ವಿಭಾಗದಲ್ಲಿ ಚಿನ್ನದ ಪದಕದೊಂದಿಗೆ ಹೊಸ ಕೂಟ ದಾಖಲೆಯನ್ನು ಮಾಡಿರುತ್ತಾರೆ. ಜೊತೆಗೆ 200ಮೀ ಫಿನ್ಸ್ ನಲ್ಲಿ ಬೆಳ್ಳಿ ಹಾಗೂ 50ಮೀ ಅಪ್ನಿಯದಲ್ಲಿ ಕಂಚಿನ ಪದಕ  ಪಡೆದುಕೊಂಡಿರುತ್ತಾರೆ.  ಅರ್ ಅಮನ್ ರಾಜ್  ಇವರು  100ಮೀ  ಮತ್ತು 200ಮೀ
ಬೈ – ಫಿನ್ ವಿಭಾಗದಲ್ಲಿ ಚಿನ್ನದ ಪದಕ ಮತ್ತು 50 ಮೀ ಬೈ – ಫಿನ್ ಹಾಗೂ 50 ಮೀ ಅಪ್ನಿಯ ದಲ್ಲಿ
ಬೆಳ್ಳಿಯ ಪಡೆದುಕೊಂಡಿರುತ್ತಾರೆ. ಇವರುಗಳಿಗೆ ಪರ್ಲಡ್ಕದ ಬಾಲವನದ ಅಕ್ವೆಟಿಕ್ ಕ್ಲಬ್ ನ ಈಜು ತರಬೇತುದಾರರಾದ ಪಾರ್ಥ ವಾರಣಾಸಿ, ನಿರೂಪ ಜಿ ಆರ್, ದೀಕ್ಷಿತ್ ರಾವ್ ಮತ್ತು ರೋಹಿತ್ ಪ್ರಕಾಶ್ ರವರು ತರಬೇತಿ ನೀಡಿರುತ್ತಾರೆ. ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.

chennai-shopping
maithri

ದಿಗಂತ್ ವಿ ಎಸ್ ರಾಷ್ಟ್ರಮಟ್ಟದ ಫಿನ್ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ  50ಮೀ ಬಿ ಪಿನ್ಸ್ ವಿಭಾಗದಲ್ಲಿ ಹೊಸಕೂಟ ದಾಖಲೆ
ಅನ್ವಿತ್ ರೈ ಬರಿಕೆ ವೈಯಕ್ತಿಕ ಚಾಂಪಿಯನ್ ಶಿಪ್


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರಿನಲ್ಲಿ ಇದೇ ಮೊದಲ ಬಾರಿಗೆ ಕಾರ್ ರೇಸ್ ಚಮತ್ಕಾರ!ಫೆ. 9ರಂದು ಆತೂರಿನಲ್ಲಿ ನಡೆಯಲಿದೆ ಆಟೋ ಕ್ರಾಸ್ ಡರ್ಟ್ ರೇಸಿಂಗ್!

ಮೂಡುಬಿದರೆಯಲ್ಲಿ ನಡೆಯುತ್ತಿದ್ದ ಆಟೋ ಕ್ರಾಸ್ ಡರ್ಟ್ ರೇಸಿಂಗ್ ಈ ಬಾರಿ ಪುತ್ತೂರಿನ ಆತೂರಿನಲ್ಲಿ…

ಪ್ರೀಮಿಯರ್ ಲೀಗ್: ಕ್ರಿಸ್ ಗೇಲ್ ದಾಖಲೆ ಧೂಳೀಪಟ! ಸ್ಫೋಟಕ ದಾಳಿ ನಡೆಸಿದ ರೊಮಾರಿಯೊ ಶೆಫರ್ಡ್’ನಿಂದ ಹೊಸ ದಾಖಲೆ!

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರೊಮಾರಿಯೊ ಶೆಫರ್ಡ್ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ…