ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 14ರ ಹಾಗೂ 17ರ ವಯೋಮಾನದ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಕ್ರೀಡಾಕೂಟ ಅ. 8ರಂದು ವಿಟ್ಲ ವಿಠಲ ಪಪೂ ಕಾಲೇಜಿನಲ್ಲಿ ನಡೆಯಿತು.
17ರ ವಯೋಮಾನದ ಬಾಲಕರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಗಣಪತಿ ಕೈರಂಗಳ, ದ್ವಿತೀಯ ಬಹುಮಾನವನ್ನು ಪುತ್ತೂರು ಬೆಥನಿ ತಂಡ ಪಡೆದುಕೊಂಡಿತು. ಬಾಲಕಿಯರ ವಿಭಾಗದಲ್ಲಿ ಮುಂಡಾಜೆ ವಿವೇಕಾನಂದ ಪ್ರಥಮ ಹಾಗೂ ಪಾಪೆಜಾಲ್ ದ್ವಿತೀಯ ಬಹುಮಾನ ಪಡೆದುಕೊಂಡಿತು.
14ರ ವಯೋಮಾನದ ಹುಡುಗರ ವಿಭಾಗದಲ್ಲಿ ಪ್ರಥಮ ಪುತ್ತೂರು, ದ್ವಿತೀಯ ಬೆಳ್ತಂಗಡಿ, ಹುಡುಗಿಯರ ವಿಭಾಗದಲ್ಲಿ ಪ್ರಥಮ ಬೆಳ್ತಂಗಡಿ, ದ್ವಿತೀಯ ಬಂಟ್ವಾಳ ಪಡೆದುಕೊಂಡಿತು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ವಿಠಲ ಎಜುಕೇಶನ್ ಸೊಸೈಟಿ ಇದರ ಸಹಯೋಗದಲ್ಲಿ ವಿಠಲ ಪ.ಪೂ. ವಿಟ್ಲ ಇದರ ಅಮೃತ ಮಹೋತ್ಸವದ ಸಲುವಾಗಿ ಕ್ರೀಡಾಕೂಟ ಜರಗಿತು. ಒಟ್ಟು 24 ತಂಡಗಳು ಭಾಗವಹಿಸಿದ್ದವು.
ಮಾಜಿ ಸಚಿವ ಬಿ. ರಮಾನಾಥ ರೈ, ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್. ಮೊಹಮ್ಮದ್, ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕದ ಇದರ ಉಪಾಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ, ರಾಷ್ಟ್ರಮಟ್ಟದ ವಾಲಿಬಾಲ್ ತರಬೇತುದಾರ ಪಿ.ವಿ. ನಾರಾಯಣ, ಬಂಟ್ವಾಳ ಶಿಕ್ಷಣ ಪರೀಕ್ಷಣಾಧಿಕಾರಿ ಆಶಾ ನಾಯಕ್ ಶುಭಹಾರೈಸಿದರು. ವಿಟ್ಲ ಎಜುಕೇಷನ್ ಸೊಸೈಟಿಯ ಸಂಚಾಲಕ ರಾಧಾಕೃಷ್ಣ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ರಾಜ್ಯ ವಿಶ್ವವಿದ್ಯಾಲಯ ಮಟ್ಟದ ವಾಲಿಬಾಲ್ ಆಟಗಾರರಾಗಿ ಗುರುತಿಸಿಕೊಂಡಿದ್ದ ಉದ್ಯಮಿ ಅಬೂಬಕ್ಕರ್ ವಿಟ್ಲ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಆಟಗಾರ, ನಿವೃತ್ತ ಉಪ ಪ್ರಾಂಶುಪಾಲ ಎಚ್. ಸುಬ್ರಹ್ಮಣ್ಯ ಭಟ್ ಅವರು ಸನ್ಕಾನಿಸಿ, ಗೌರವಿಸಿದರು.