pashupathi
ಕ್ರೀಡೆ

ತಡರಾತ್ರಿಯ ಕಬಡ್ಡಿಗೆ ಅವಕಾಶ ಬೇಡ: ಪೊಲೀಸ್ ಇಲಾಖೆಗೆ ಮನವಿ

tv clinic

ಈ ಸುದ್ದಿಯನ್ನು ಶೇರ್ ಮಾಡಿ

ತಡರಾತ್ರಿವರೆಗೆ ನಡೆಯುವ ಕಬಡ್ಡಿ ಪಂದ್ಯಾಟಗಳಿಂದ ಕ್ರೀಡಾಪಟುಗಳಿಗೆ ತೊಂದರೆಯಾಗುತ್ತಿದ್ದು, ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇದೆ. ಆದ್ದರಿಂದ ತಡರಾತ್ರಿ ನಡೆಯುವ ಕಬಡ್ಡಿ ಪಂದ್ಯಾಟಗಳಿಗೆ ಅನುಮತಿ ನೀಡದಂತೆ ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಮತ್ತು ಕಬಡ್ಡಿ ತೀರ್ಪುಗಾರರ ಮಂಡಳಿ ಮನವಿ ನೀಡಿದೆ.

akshaya college

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ನೀಡಿದ ಬಳಿಕ ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಪೂಂಜಾಲಕಟ್ಟೆ, ವಿಟ್ಲ ಪೋಲಿಸ್ ಠಾಣೆಗಳಿಗೂ ತೆರಳಿ ಮನವಿ ಸಲ್ಲಿಸಿತು.

ತಡರಾತ್ರಿ ತನಕದ ಪಂದ್ಯಾಟಗಳಿಂದ ಕ್ರೀಡಾಪಟುಗಳಿಗೆ ಆಗುವ ತೊಂದರೆ, ಪಂದ್ಯಾಟದ ವೇಳೆ ನಡೆಯುವ ಅಹಿತಕರ ಘಟನೆಗಳ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗೆ ಹಾಗೂ ಠಾಣಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಪುಷ್ಪರಾಜ್ ಚೌಟ, ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ತೀರ್ಪುಗಾರರ ಮಂಡಳಿ ಅಧ್ಯಕ್ಷ ಸುರೇಶ್ ಮೈರಡ್ಕ, ಸಂಚಾಲಕ ಹಬೀಬ್ ಮಾಣಿ, ಸದಸ್ಯರಾದ ದೀಪಕ್ ಪೆರಾಜೆ, ಸಿದ್ದಿಕ್ ಕುಕ್ಕಾಜೆ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಸವಾಲು, ಸಮಸ್ಯೆ ಬದುಕಿನ ಸಾಧನೆಗೆ ಸ್ಫೂರ್ತಿ | ರಾಮಕುಂಜದಲ್ಲಿ ಮೈಸೂರು ವಿಭಾಗ ಮಟ್ಟದ ಕಬಡ್ಡಿ ಉದ್ಘಾಟಿಸಿ ಭಾಗೀರಥಿ ಮುರುಳ್ಯ

ಕ್ರೀಡೆಯಲ್ಲಿ ಭಾಗವಹಿಸುವುದು ಬಹುಮಾನ ಗಿಟ್ಟಿಸಿಕೊಳ್ಳುವ ಲೆಕ್ಕಚಾರಕ್ಕೆ ಸೀಮಿತವಾಗದೆ ಪ್ರತಿಭೆ…