ಪುತ್ತೂರು: 2025-26ನೇ ಸಾಲಿನ ಕಂಬಳ ವೇಳಾಪಟ್ಟಿಯನ್ನು ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಕಂಬಳ ಸಮಿತಿ ಹಾಗೂ ದಕ್ಷಿಣ ಕನ್ನಡ ಉಡುಪಿ ಕಂಬಳ ವ್ಯವಸ್ಥಾಪಕರ ಜಂಟಿ ಸಭೆಯಲ್ಲಿ ಅಂತಿಮಗೊಳಿಸಲಾಗಿದೆ. ಸೆಪ್ಟೆಂಬರ್ 28ರಂದು ಮೂಡುಬಿದಿರೆ ಕಂಬಳ ಕ್ರೀಡಾಂಗಣದ ಸಮೀಪದ ಸೃಷ್ಟಿ ಗಾರ್ಡನ್ ಸಭಾಂಗಣದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಅವರು ಅಧ್ಯಕ್ಷತೆ ವಹಿಸಿದ್ದರು.
ಕಂಬಳಕ್ಕೆ ರಾಜ್ಯ ಸರಕಾರದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾ ಪ್ರಾಧಿಕಾರದಲ್ಲಿ ಮಾನ್ಯತೆ ನೀಡಿ ಪ್ರೋತ್ಸಾಹಿಸಿರುವುದಕ್ಕಾಗಿ ಮುಖ್ಯಮಂತ್ರಿ ಮತ್ತು ಇಡೀ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಡಾ. ದೇವಿಪ್ರಸಾದ್ ಶೆಟ್ಟಿ. ಕಂಬಳವನ್ನು ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಬೆಳೆಸಲು ‘ಕಂಬಳ ಫೆಡರೇಶನ್ ಆಫ್ ಇಂಡಿಯಾ’ ಸಂಸ್ಥೆಯನ್ನು ಸ್ಥಾಪಿಸಿರುವುದಾಗಿ ಘೋಷಿಸಿದರು. ಇದು ಕಂಬಳದ ಭವಿಷ್ಯಕ್ಕೆ ಹೊಸ ದಿಕ್ಕನ್ನು ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟರು
ಕಳೆದ ವರ್ಷ ಕಂಬಳಗಳಿಗೆ ಸರ್ಕಾರದಿಂದ ತಲಾ 2 ಲಕ್ಷ ರೂ. ಅನುದಾನ ಒದಗಿಸಿರುವುದನ್ನು ಸ್ಮರಿಸಿದ ಅವರು, ಕಂಬಳದ ಉನ್ನತಿಗೆ ಎಲ್ಲರ ಸಹಕಾರ ಅನಿವಾರ್ಯ ಎಂದು ಒತ್ತಿ ಹೇಳಿದರು. ಸಭೆಯಲ್ಲಿ ಕಂಬಳ ಸಮಿತಿ ಗೌರವಾಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ, ಮಾಜಿ ಅಧ್ಯಕ್ಷ ಪಿ.ಆರ್. ಶೆಟ್ಟಿ, ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ ಸುಬ್ಬಯ್ಯ ಕೊಟ್ಯಾನ್, ಕಾರ್ಯಾಧ್ಯಕ್ಷ ಗುಣಪಾಲ ಕಡಂಬ, ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚೂರು, ತೀರ್ಪುಗಾರರ ಸಮಿತಿ ಸಂಚಾಲಕ ವಿಜಯ ಕುಮಾರ್ ಕಂಗಿನಮನೆ, ಶಾಂತರಾಮ್ ಶೆಟ್ಟಿ. ಶ್ರೀಕಾಂತ್ ಭಟ್. ಚಂದ್ರಹಾಸ್, ಸಾಧು ಸನಿಲ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಫೆಬ್ರವರಿ 7ರಂದು ಪುತ್ತೂರು ಕಂಬಳ: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ!
ನವೆಂಬರ್ 15: ಪಣಪಿಲ
ನವೆಂಬರ್ 22: ಕೊಡಂಗೆ
ನವೆಂಬರ್ 29: ಕಕ್ಕೆಪದವು
- ಡಿಸೆಂಬರ್ 6: ಹೊಕ್ಕಾಡಿ
ಡಿಸೆಂಬರ್ 7: ಬಳ್ಳಮಂಜ
ಡಿಸೆಂಬರ್13:ಬಾರಾಡಿ
ಡಿಸೆಂಬರ್ 20: ಮೂಲ್ಕಿ
ಡಿಸೆಂಬರ್ 27: ಮಂಗಳೂರು
ಜನವರಿ 3: ಮಿಯ್ಯಾರು
ಜನವರಿ 10: ನರಿಂಗಾಣ
- ಜನವರಿ 17: ಅಡ್ಡೆ
ಜನವರಿ 21: ಮೂಡುಬಿದಿರೆ
ಜನವರಿ 31: ಐಕಳ
ಫೆಬ್ರವರಿ 7: ಪುತ್ತೂರು
ಫೆಬ್ರವರಿ 14: ಜಪ್ಪು
ಫೆಬ್ರವರಿ 21: ವಾಮಂಜೂರು
ಫೆಬ್ರವರಿ 28: ಎರ್ಮಾಳು
ಮಾರ್ಚ್ 7: ಬಂಟ್ವಾಳ
ಮಾರ್ಚ್15: ಬಂಗಾಡಿ
ಮಾರ್ಚ್ 21: ವೇಣೂರು
- ಮಾರ್ಚ್ 28: ಉಪ್ಪಿನಂಗಡಿ
ಏಪ್ರಿಲ್ 4: ಗುರುಪುರ
ಏಪ್ರಿಲ್ 11: ಬಕ್ಕುಂಜೆ
ಏಪ್ರಿಲ್ 18: ಹರೇಕಳ
ಏಪ್ರಿಲ್ 25: ಬಡಗಬೆಟ್ಟು