Gl jewellers
ವಿಶೇಷ

ಅಟಲ್ ಜನ್ಮ ಶತಾಬ್ದಿ ಹಿನ್ನೆಲೆಯಲ್ಲಿ ಅಶಕ್ತ ಕುಟುಂಬದ ಮನೆ ನವಿಕರಣ! ಪುತ್ತಿಲ ಪರಿವಾರ ಸೇವಾ ಟ್ರಸ್ಟ್’ನಿಂದ ಮತ್ತೊಂದು ಮಹತ್ವದ ಹೆಜ್ಜೆ

ಅಟಲ್ ಜನ್ಮ ಶತಾಬ್ದಿ ಪ್ರಯುಕ್ತ ಪಾಣಾಜೆಯ ಅಶಕ್ತ ಕುಟುಂಬವೊಂದರ ಮನೆ ನವಿಕರಣಕ್ಕೆ ಮಾಡಲು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಿರ್ಣಯಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಅಟಲ್ ಜನ್ಮ ಶತಾಬ್ದಿ ಪ್ರಯುಕ್ತ ಪಾಣಾಜೆಯ ಅಶಕ್ತ ಕುಟುಂಬವೊಂದರ ಮನೆ ನವಿಕರಣ ಮಾಡಲು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಿರ್ಣಯಿಸಿದೆ.

Papemajalu garady
Karnapady garady

ಪಾಣಾಜೆ ಗ್ರಾಮದ ದೇವಸ್ಯ ಉದಯ ಕುಮಾರ್ ಮಣಿಯಾಣಿ ಅವರ ಮನೆಯ ಮೇಲ್ಚಾವಣಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ವಾಸಕ್ಕೂ ಯೋಗ್ಯವಲ್ಲದ ಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಮನೆ ದುರಸ್ತಿಯ ಕಾರ್ಯವನ್ನು ಅಟಲ್ ಜನ್ಮ ಶತಾಬ್ದಿಯ ಪ್ರಯುಕ್ತ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಡೆಸಲು ಸಂಕಲ್ಪ ಮಾಡಿದೆ.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಭಾ.ಜ.ಪ. ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ಕೋಡಿಬೈಲು, ನೆಕ್ಕಿಲಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಶಾಂತ್ ನೆಕ್ಕಿಲಾಡಿ, ಭಾ.ಜ.ಪ ಎಸ್.ಸಿ. ಮೋರ್ಛಾ ಪ್ರದಾನ ಕಾರ್ಯದರ್ಶಿ ಸುಜಿತ್ ಕಜೆ, ಪಾಣಾಜೆ ಭಾ.ಜ.ಪ. ಶಕ್ತಿ ಕೇಂದ್ರ ಸಂಚಾಲಕ ಪ್ರೇಮ್ ರಾಜ್ ಆರ್ಲಪದವು, ಭಾ.ಜ.ಪ. ಮಂಡಲ ಯುವ ಮೋರ್ಛಾ ಕಾರ್ಯಕಾರಿಣಿ ಸದಸ್ಯ ಪ್ರದೀಪ್ ಪಾಣಾಜೆ, ಪಾಣಾಜೆ ಭಾ.ಜ.ಪ. ಬೂತ್ ಪ್ರಮುಖರಾದ ಪುಷ್ಪರಾಜ ರೈ ಕೋಟೆ, ಸಂದೀಪ್ ಕೆ., ಕೀರ್ತಿರಾಜ್ ಉಡ್ಡಂಗಳ,
ಪಾಣಾಜೆ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕ ಹರೀಶ್ ಕಡಮಾಜೆ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸದಸ್ಯರಾದ ವಸಂತ ಕುಮಾರ್ ಭರಣ್ಯ, ಸುಖಿನ್ ರಾಜ್ ಪಾಣಾಜೆ, ಜಾನು ನಾಯ್ಕ ಭರಣ್ಯ,
ಮುಂತಾದ ಪ್ರಮುಖರು ಮನೆಗೆ ಬೇಟಿ ನೀಡಿ ಯೋಜನೆಯ ಬಗ್ಗೆ ಪರಿಶೀಲನೆ ನಡೆಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ನಿದ್ದೆ ಮಾಡಿದ್ದಕ್ಕೆ 4 ಕೋಟಿ ರೂ. ಪರಿಹಾರ ಸಿಕ್ತು!!ಮರುಮಾತನಾಡದೇ ಕಂಪೆನಿ ಪರಿಹಾರ ನೀಡಬೇಕೆಂದು ಕೋರ್ಟ್ ಹೇಳಿದ್ದಾದರೂ ಯಾಕೆ?

ಕಚೇರಿಯಲ್ಲಿ ತೂಕಡಿಸುತ್ತಿದ್ದ ಉದ್ಯೋಗಿ ಕೆಲಸದ ನಡುವೆ ಡೆಸ್ಕ್ ಮೇಲೆ ಮಲಗಿದ್ದಾನೆ. ಕಂಪನಿ…