ಬೆಂಗಳೂರು: ನಗರದ ಸನ್‌ಸ್ಟಾರ್ ಪಬ್ಲಿಷರ್ಸ್‌ನವರು ಆರ್.ಆರ್.ನಗರದ ನೇತಾಜಿ ಸುಭಾಶ್ಚಂದ್ರ ಬೋಸ್ ಟ್ರಸ್ಟ್ ಸಹಯೋಗದಲ್ಲಿ ಪ್ರೊ.ಕೆ.ಇ.ರಾಧಾಕೃಷ್ಣ ಅವರು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಿರುವ ಸುಭಾಶ್ಚಂದ್ರ ಬೋಸ್ ಕುರಿತು ಮೂರು ಕೃತಿಗಳು ಆಗಸ್ಟ್ 30 ಶನಿವಾರ ಸಂಜೆ 3.30ಕ್ಕೆ ನಗರದ Town ಹಾಲ್ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಲೋಕಾರ್ಪಣೆಗೊಳ್ಳಲಿವೆ.
ಪುಸ್ತಕ ಬಿಡುಗಡೆ ಸಮಾರಂಭವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾಗಿರುವ ಶ್ರೀ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸಮಾರಂಭದಲ್ಲಿ ಗ್ರಹ ಸಚಿವ ಡಾ.ಜಿ..ಪರಮೇಶ್ವರ್ , ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಹೆಸರಾಂತ ಲೇಖಕ ಪ್ರೊ.ಸುಮಂತ್ರ ಬೋಸ್ ಭಾಗವಹಿಸುವರು ಎಂದು ನೇತಾಜಿ ಸುಭಾಶ್ಚಂದ್ರ ಬೋಸ್ ಅಧ್ಯಕ್ಷ ಎಂ ರಾಜಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಸಮಾರಂಭದಲ್ಲಿ ಟ್ರಸ್ಟ ಪ್ರಧಾನ ಕಾರ್ಯ ದರ್ಶಿ ಜಿ.ಆರ್ ಶಿವಶಂಕರ್, ಲೆ.ಜನರಲ್ ರಮೇಶ್ ಹಲಗಲಿ, ರೋನಾಲ್ಡ್ ಕೊಲಾಸೊ, ಭಾಗವಹಿಸುವ ರು.
ಪ್ರೊ.ಕೆ.ಈ.ರಾಧಾಕೃಷ್ಣ ಅವರು ಸತತ ಮೂರು ವರ್ಷಗಳ ಕಾಲ ಅಧ್ಯಯನದಿಂದ ನೇತಾಜಿ ಸುಭಾಶ್‌ಚಂದ್ರಬೋಸ್‌ರೇ ಬರೆದ ಎರಡು ಗ್ರಂಥಗಳನ್ನು, ಅಜಾದ್ ಸೇನೆಯಲ್ಲಿ ಯೋಧಿಣಿಯಾಗಿದ್ದ ತನ್ನ ಹೆಸರು ಪ್ರಕಟಿಸಲು ಇಚ್ಛಿಸದ ಶ್ರೀಮತಿ ಎಂ. ಎಂಬುವವರು ಬರೆದ ಅಸಮಾನ್ಯ ದಿನಚರಿಯನ್ನು ಕನ್ನಡಿಗರ ಪುಸ್ತಕ ಮನೆಗೆ ಕೊಡುಗೆ ನೀಡಿದ್ದಾರೆ ಎಂದರು.
ತನ್ನನ್ನು ಟೀಸಿದವರನ್ನೂ ದ್ವೇಷಿಸದವರು ಗಾಂಧೀಜಿ, ತನ್ನನ್ನು ಖಂಡಿಸಿದವರನ್ನೂ ದ್ವೇಷಿಸದವರು ನೇತಾಜಿ. ಇಬ್ಬರೂ ಸತ್ಯಾನ್ವೇಷಕರೇ. ಗಾಂಧೀಜಿ ಶತಮಾನದ ದೂರದೃಷ್ಟಿಯುಳ್ಳ ಸಾವಧಾನ ನಡೆಯುವವರು. ಆದರೆ, ನೇತಾಜಿಯವರದ್ದು ಅವಸರದ ನಡೆ. ಬಹುಶಃ ಅವರಿಬ್ಬರಿಗೂ ಇತ್ತು ಅದರ ಅರಿವು. ತಮ್ಮ ಬದುಕಿನಲ್ಲಿ ಮತ್ತು ಹೋರಾಟ ಮಾರ್ಗದಲ್ಲಿ ಇಬ್ಬರನ್ನೂ ಅನೇಕ ಬಾರಿ ಅನೇಕ ದ್ವಂದ್ವಗಳು ಕಾಡಿದ್ದುಂಟು. ಸಂತ-ರಾಜಕಾರಣಿ, ಯುಗಪ್ರವರ್ತಕ ಗಾಂಧೀಜಿ, ರಾಜಕೀಯ ವಿಚಕ್ಷಣರೂ ಕೂಡಾ. ಬೆಂಗಾಲದ ಭಾವವಿಚಾರಗಳ ಮಣ್ಣಿನಲ್ಲಿ ಜನಿಸಿದ ನೇತಾಜಿ ನೇರ ಹೋರಾಟಗಾರ. ಇಬ್ಬರ ಸತ್ಯಗಳೂ ಬೇರೆ ಬೇರೆ ಅಲ್ಲ. ಅದು ಒಂದೇ ಎಂಬ ವಿಚಾರ ಈ ಕೃತಿಯಿಂದ ಸ್ಪಷ್ಟವಾಗುತ್ತದೆ ಎಂದು ಲೇಖಕ ಪ್ರೊ.ಕೆ.ಇ.ರಾಧಾಕೃಷ್ಣ ಬಣ್ಣಿಸಿದರು.
ನೇತಾಜಿಯವರ 100ನೇ ಜನ್ಮ ದಿನೋತ್ಸವದಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಸುಭಾಶ್‌ಚಂದ್ರ ಬೋಸ್ ಸಂಶೋಧನಾ ಮತ್ತು ಬರಹಗಳ ಅಭಿವೃದ್ಧಿ ಟ್ರಸ್ಟ್ ಸ್ಥಾಪನೆಯಾಯಿತು. ಈ ರಾಜ್ಯದ ಮತ್ತು ದೇಶದ ಯುವ ಜನರಲ್ಲಿ ನೇತಾಜಿಯವರ ದೇಶಾಭಿಮಾನದ ಆದರ್ಶ ಸಮಾಜನಿಷ್ಠೆ, ದೇಶಪ್ರೇಮವನ್ನು ಪ್ರಸರಿಸುವ ಆದರ್ಶ, ನೇತಾಜಿಯವರ ಬಗೆಗಿನ ಪುಸ್ತಕಗಳನ್ನು ರಾಜ್ಯದ ಗ್ರಂಥಾಲಯಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ಸಿಗುವಂತೆ ಮಾಡಬೇಕೆನ್ನುವ ಪ್ರೇರಣೆಯಲ್ಲಿ ಈ ಟ್ರಸ್ಟ್ ಸ್ಥಾಪಿತವಾಗಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಡಿ.ಬಿ.ಕಲ್ಮಣಕರ್ ಅವರಿಂದ ಆರ್.ಆರ್.ನಗರದಲ್ಲಿ ಶಂಕುಸ್ಥಾಪನೆಯಾದ ನೇತಾಜಿ ಭವನ ಈಗ ಸುಸಜ್ಜಿತ ವ್ಯವಸ್ಥೆಗಳೊಂದಿಗೆ ನಿರ್ಮಾಣಗೊಂಡಿದೆ. ಮುಂಬರುವ ದಿನಗಳಲ್ಲಿ ನೇತಾಜಿ ಸುಭಾಶ್‌ಚಂದ್ರ ಬೋಸರ ಹೆಸರಿನಲ್ಲಿ ವಿದ್ಯಾ ಸಂಸ್ಥೆಗಳನ್ನು, ಕ್ರೀಡಾ ಸಂಸ್ಥೆಗಳನ್ನು, ನೇತಾಜಿ ಚೇತನ ಯಾತ್ರೆಗಳನ್ನು ಹಮ್ಮಿಕೊಳ್ಳಲು ನಮ್ಮ ಟ್ರಸ್ಟ್ ಉದ್ದೇಶಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಎಂ.ರಾಜಕುಮಾರ್, ಅಧ್ಯಕ್ಷರು, ನೇತಾಜಿ ಸುಭಾಶ್‌ಚಂದ್ರಬೋಸ್ ಟ್ರಸ್ಟ್ ಆರ್.ಆರ್.ನಗರ,
ಬೆಂಗಳೂರು.
ಡಿ.ಎನ್.ಶೇಖರ ರೆಡ್ಡಿ, ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಸನ್‌ಸ್ಟಾರ್ ಪಬ್ಲಿಷರ್ಸ್ ಹಾಗೂ ಟ್ರಸ್ಟಿ ಸಂಜಯ ಜೋಷಿ ಇದ್ದರು.