ದೇಶದಲ್ಲಿ ಇದೇ ಮೊದಲ ಬಾರಿಗೆ ಜಗತ್ತಿನ ಎರಡನೇ ಅತಿ ಉದ್ದದ ಅಂದರೆ ನಾಲ್ಕೂವರೆ ಕಿಮೀ ಉದ್ದದ ಸರಕು ಸಾಗಣೆ ರೈಲು ‘ರುದ್ರಾಸ್ತ್ರ ಮೊದಲ ಸಂಚಾರದಲ್ಲಿ ಯಶಸ್ಸು ಕಂಡಿದೆ.
ಭಾರತೀಯ ರೈಲ್ವೆಯು ಏಳು ಎಂಜಿನ್, 345 ಬೋಗಿಗಳನ್ನು ಒಳಗೊಂಡಿರುವ ತನ್ನ ಅತಿ ಉದ್ದದ ಸರಕು ರೈಲು ‘ರುದ್ರಾಸ್ತ್ರ’ವನ್ನು ಓಡಿಸುವ ಮೂಲಕ ಹೊಸ ದಾಖಲೆಯೊಂದನ್ನು ನಿರ್ಮಾಣ ಮಾಡಿದೆ.
ನಾಲ್ಕೂವರೆ ಕಿಮೀ ಉದ್ದದ ಇದು ಏಷ್ಯಾದ ಅತಿ ಉದ್ದದ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪೂರ್ವ ಮಧ್ಯ ರೈಲ್ವೆಯ ಪಂಡಿತ್ ದೀನದಯಾಳ್ ಉಪಾಧ್ಯಾಯ ವಿಭಾಗ (ಡಿಡಿಯು)ವು ತಯಾರಿಸಿದ 4.5 ಕಿಮೀ ಉದ್ದದ ರೈಲಾದ ‘ರುದ್ರಾಸ್ತ್ರ’ವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಮೈಲಿಗಲ್ಲು ಸಾಧಿಸಿದೆ.
‘ರುದ್ರಾಸ್ತ್ರ’ವನ್ನು ಡಿಡಿಯು ವಿಭಾಗದ ಗಂಜ್‌ಗ್ವಾಜ ನಿಲ್ದಾಣದಿಂದ ಯಶಸ್ವಿಯಾಗಿ ಓಡಿಸಲಾಯಿತು. ಇದು ಗಂಜ್‌ಗ್ವಾಜ ನಿಲ್ದಾಣದಿಂದ ಗರ್ವಾ ರಸ್ತೆ ನಿಲ್ದಾಣದವರೆಗಿನ 200 ಕಿ.ಮೀ ದೂರವನ್ನು 5 ಗಂಟೆಗಳಲ್ಲಿ ಸರಾಸರಿ 40 ಕಿ.ಮೀ. ವೇಗದಲ್ಲಿ ಕ್ರಮಿಸಿತು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಭಾಗೀಯ ರೈಲ್ವೆ ವ್ಯವಸ್ಥಾಪಕ (DRM) ಉದಯ್ ಸಿಂಗ್ ಮೀನಾ ಅವರ ಪ್ರಕಾರ, ‘ಸರಕುಗಳನ್ನು ತ್ವರಿತವಾಗಿ ಲೋಡ್ ಮಾಡಲು ಮತ್ತು ಸಾಗಿಸಲು ಸರಕು ರೈಲುಗಳನ್ನು DDU ವಿಭಾಗದಿಂದ ಧನ್ವಾದ್ ವಿಭಾಗಕ್ಕೆ ಕಳುಹಿಸಲಾಗುವುದು. ಇದು ಹೊಸ ಪ್ರಯೋಗವಾಗಿದ್ದು, ಸರಕು ಸಾಗಣೆ ಮತ್ತು ಲೋಡಿಂಗ್ ಅನ್ನು ತ್ವರಿತಗೊಳಿಸುತ್ತದೆ. ಇದು ಸಂಪನ್ಮೂಲಗಳನ್ನು ಮಾತ್ರವಲ್ಲದೇ ಸಮಯವನ್ನು ಸಹ ಉಳಿಸುತ್ತದೆ. ಭಾರತೀಯ ರೈಲ್ವೆಗೆ ಇದರಿಂದ ಪ್ರಯೋಜನವಾಗುತ್ತದೆ ಎಂದು ಹೇಳಿದ್ದಾರೆ.
ರುದ್ರಾಸ್ತ್ರ ರೈಲನ್ನು ಮೂರು ದೀರ್ಘ – ಪ್ರಯಾಣದ (ತಲಾ ಎರಡು ಸರಕು ರೈಲುಗಳು) ಬ್ಯಾಕ್‌ಗಳನ್ನು ಸೇರಿಸುವ ಮೂಲಕ ತಯಾರಿಸಲಾಗಿದೆ. ಒಟ್ಟು 345 ವ್ಯಾಗನ್‌ಗಳನ್ನು ಇದರಲ್ಲಿ ಸೇರಿಸಲಾಗಿದ್ದು, ಒಂದು ಖಾಲಿ ವ್ಯಾಗನ್ ನಲ್ಲಿ 72 ಟನ್ ಸರಕುಗಳನ್ನು ಲೋಡ್ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
‘ಎರಡು ಇಂಜಿನ್‌ಗಳನ್ನು ಮುಂಭಾಗದಲ್ಲಿ ಜೋಡಿಸಲಾಗಿದೆ ಮತ್ತು ಪ್ರತಿ 59 ಬೋಗಿಗಳ ನಂತರ ಪ್ರತಿ ಯಾಕ್‌ನೊಂದಿಗೆ ಒಂದನ್ನು ಜೋಡಿಸಲಾಗಿದೆ. ಒಟ್ಟಾರೆಯಾಗಿ, ಏಳು ಇಂಜಿನ್‌ಗಳನ್ನು ಈ ಅತಿ ಉದ್ದದ ರೈಲ್ವೆಗೆ ಬಳಸಲಾಗಿದೆ. ಒಂದು ರ್ಯಕ್‌ನಲ್ಲಿ 59 ಬೋಗಿಗಳಿದ್ದವು. ಒಂದು ರೀತಿಯಲ್ಲಿ, ಐದು ಸರಕು ರೈಲುಗಳು ಒಂದರ ನಂತರ ಒಂದರಂತೆ ಸಾಲಾಗಿ ನಿಂತಿದ್ದವು. ಮೊದಲ ಸರಕು ರೈಲು ಎರಡು ಇಂಜಿನ್‌ಗಳನ್ನು ಹೊಂದಿದೆ’ ಎಂದು ಹೇಳಿದ್ದಾರೆ.
ಇದುವರೆಗಿನ ಅತಿ ಉದ್ದದ ಸರಕು ರೈಲು 7.353 km ಉದ್ದ ಅಂದರೆ ಸುಮಾರು 24,123 ಅಡಿ 11.61 ಅಂಗುಲ ಉದ್ದವಿದ್ದು, 8 ಶಕ್ತಿಶಾಲಿ ಡೀಸೆಲ್ – ವಿದ್ಯುತ್ ಲೋಕೋಮೋಟಿವ್‌ಗಳನ್ನು ಹೊಂದಿದೆ. ಈ ರೈಲಿನಲ್ಲಿ ಸುಮಾರು 682 ಬೋಗಿಗಳು ಇವೆ. ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ ಆಸ್ಟ್ರೇಲಿಯಾದ ಬಿಎಚ್‌ಪಿ ಕಬ್ಬಿಣದ ಅದಿರಿನ ಸಾಗಣೆಗೆ ಇದನ್ನು ಬಳಸಲಾಗುತ್ತಿದೆ.
ಈ ರೈಲು ಕಂಪನಿಯ ನ್ಯೂಮನ್ ಮತ್ತು ಯಾಂಡಿ ಗಣಿಗಳಿಂದ ಪಶ್ಚಿಮ ಆಸ್ಟ್ರೇಲಿಯಾದ ಪೋರ್ಟ್ ಹೆಸ್ಟ್ಯಾಂಡ್‌ಗೆ ಜೂನ್ 21, 2001 ರಂದು 275 ಕಿ.ಮೀ ಪ್ರಯಾಣ ಮಾಡಿತ್ತು. 99,732.1 ಮೆಟ್ರಿಕ್ ಟನ್ ತೂಕದ ಈ ರೈಲು ಇದುವರೆಗಿನ ಭಾರದ ರೈಲಾಗಿತ್ತು. ಇದು ಅದ್ಭುತವಾದ 5,648 ಚಕ್ರಗಳನ್ನು ಹೊಂದಿತ್ತು’ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವೆಬ್‌ಸೈಟ್ನಲ್ಲಿ ನಮೂದಿಸಲಾಗಿದೆ.