Thursday, December 12
Share News

ಚಂದನವನದ ಹಿರಿಯ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾ‌ರ್ ಅವರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ಪತ್ನಿ ಗೀತಾ ಶಿವರಾಜ್ ಕುಮಾ‌ರ್ ಹಾಗೂ ಫ್ಯಾಮಿಲಿ ಜತೆ ತಿರುಪತಿಗೆ ಭೇಟಿ ಕೊಟ್ಟಿದ್ದಾರೆ.

ಅಮೇರಿಕಾಗೆ ಚಿಕಿತ್ಸೆಗೆ ಹೋಗುವ ಮುನ್ನ ತಿಮ್ಮಪ್ಪನ ಹರಕೆ ತೀರಿಸಿದ ಶಿವಣ್ಣ ದಂಪತಿ ತಿರುಪತಿ ತಿಮ್ಮಪ್ಪನಿಗೆ ಮುಡಿ ನೀಡಿದ್ದಾರೆ.

ಶಿವಣ್ಣ ಸೇರಿದಂತೆ ಗೀತಾ ಶಿವರಾಜ್ ಕುಮಾ‌ರ್ ಹಾಗೂ ಕುಟುಂಬಸ್ಥರಿಂದ ಮುಡಿ ಸೇವೆ ನಡೆದಿದೆ. ಇದೇ ತಿಂಗಳ 18ಕ್ಕೆ ಅನಾರೋಗ್ಯದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ನಟ ಶಿವಣ್ಣ ಅಮೇರಿಕಾಗೆ ತೆರಳಲಿದ್ದಾರೆ.

ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಬೈರತಿ ರಣಗಲ್ ಸಿನಿಮಾ ಯಶಸ್ವಿ ಹಿನ್ನಲೆಯಲ್ಲಿ ಇತ್ತೀಚೆಗೆ ಚಿತ್ರದುರ್ಗದ ಪ್ರಸನ್ನ ಟಾಕೀಸ್‌ಗೆ ಭೇಟಿ ಕೊಟ್ಟಿದ್ದರು. ನಟ ಡಾ.ಶಿವರಾಜ್ ಕುಮಾರ್ ಅವರು ಪತ್ನಿ ಗೀತಾ ಜತೆ ಭೇಟಿ ಕೊಟ್ಟಿದ್ದರು. ಶಿವರಾಜ್ ಕುಮಾರ್ ಬರುತ್ತಿದ್ದಂತೆ ಹಾರ ಹಾಕಿ ಅಭಿಮಾನಿಗಳು ಜೈಕಾರ ಹಾಕಿ ಸ್ವಾಗತಿಸಿದ್ದರು.


Share News

Comments are closed.

Exit mobile version