ಉಳ್ಳಾಲ: ಸೋಮೇಶ್ವರ ರುದ್ರಪಾದೆಯಿಂದ ಹಾರಿದ ಮಂಗಳೂರಿನ ಪಡೀಲು ವೀರನಗರ ನಿವಾಸಿ ಉದಯ್ ಕುಮಾರ್ (46) ಮೃತದೇಹ ಸಮೀಪದ ಅಲಿಮಕಲ್ಲು ಎಂಬಲ್ಲಿ ಸಂಜೆ ಹೊತ್ತಿಗೆ ಪತ್ತೆಯಾಗಿದೆ.
ಪದವಿನಂಗಡಿಯಲ್ಲಿ ಕಟ್ಟಡ ಕಾಮಗಾರಿಯ ಬಿಡಿಭಾಗಗಳ ಮಾರಾಟದ ಅಂಗಡಿ ಹೊಂದಿರುವ ಅವರು ಮಧ್ಯಾಹ್ನ ಸೋಮೇಶ್ವರ ಸಮುದ್ರ ತೀರಕ್ಕೆ ಬಂದವರು ದ್ವಿಚಕ್ರ ವಾಹನ ಸಹಿತ ತನ್ನ ಬಳಿಯಿದ್ದ ಸೊತ್ತುಗಳನ್ನೆಲ್ಲಾ ಮೇಲಿಟ್ಟು ಸಮುದ್ರಕ್ಕೆ ಹಾರಿದ್ದಾರೆ.
ಸಮುದ್ರ ತೀರದಲ್ಲಿದ್ದ ಯುವಕನೋರ್ವ ಸೊತ್ತುಗಳನ್ನು ಕಂಡು ಸಮೀಪದ ಅಂಗಡಿಯವರಲ್ಲಿ ನೀಡಿದ್ದಾರೆ. ಅವರು ಉಳ್ಳಾಲ ಪೊಲೀಸರಿಗೆ ನೀಡಿದ ಮಾಹಿತಿ ನಂತರ, ಕರಾವಳಿ ಕಾವಲು ಪಡೆಯ ಜೀವರಕ್ಷಕ ಸಿಬ್ಬಂದಿ ಸೇರಿದಂತೆ ಸ್ಥಳೀಯ ಈಜುಗಾರರು ಸಮುದ್ರದಲ್ಲಿ ಉದಯ್ ಗಾಗಿ ಟಯರ್ ಟ್ಯೂಬ್ ಬಳಸಿ ಶೋಧ ನಡೆಸಿದ್ದಾರೆ.ಸಂಜೆ ವೇಳೆ ಮೃತದೇಹ ಪತ್ತೆಯಾಗಿದ್ದು, ಮೃತರು ತಂದೆ, ತಾಯಿ, ಪತ್ನಿ, ಒರ್ವ ಪುತ್ರನನ್ನು ಅಗಲಿದ್ದಾರೆ.