ಸೃಜನ್ ಲೋಕೇಶ್ ಅವರು ‘ಮಜಾ ಟಾಕೀಸ್’ ಶೋ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು. ಈ ಶೋಗೆ ದೊಡ್ಡ ಅಭಿಮಾನಿ ಬಳಗ ಇದೆ. ಕಾರಣಾಂತರಗಳಿಂದ ಇದನ್ನು ನಿಲ್ಲಿಸಿದ್ದರು ಸೃಜನ್. ಈಗ ಅವರು ಮತ್ತೆ ನಗಿಸೋಕೆ ಬರುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಪ್ರೋಮೋ ಹಂಚಿಕೊಳ್ಳಲಾಗಿದೆ. ಇದನ್ನು ಕೇಳಿ ಫ್ಯಾನ್ಸ್ ಭರ್ಜರಿ ಖುಷಿಪಟ್ಟಿದ್ದಾರೆ. ಇದರ ಆರಂಭದ ದಿನಾಂಕಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ವರಲಕ್ಷ್ಮಿ ಆಗಿ ಮಿಂಚಿದ್ದ ಅಪರ್ಣಾ ಅವರು ಈ ಬಾರಿ ಇರೋದಿಲ್ಲ ಎಂಬುದು ಬೇಸರದ ಸಂಗತಿ.
‘ಮಜಾ ಟಾಕೀಸ್’ 2015ರಲ್ಲಿ ಆರಂಭಿಸಲಾಯಿತು. ಇನ್ನು ಕೆಲವೇ ದಿನಗಳಲ್ಲಿ ಈ ಶೋ ಆರಂಭ ಆಗಿ 10 ವರ್ಷ ತುಂಬಲಿದೆ. ಇದೇ ಖುಷಿಯಲ್ಲಿ ಸೃಜನ್ ಲೋಕೇಶ್ ಅವರು ಹೊಸ ಸೀಸನ್ ಆರಂಭಿಸೋ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಈ ಶೋಗಾಗಿ ನಾವು ಕಾಯ್ತಾ ಇದ್ವಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
‘ಮಜಾ ಟಾಕೀಸ್’ ಶೋ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. 2015ರಲ್ಲಿ ಆರಂಭ ಆದ ಈ ಶೋ 2017ರವರೆಗೆ ಇತ್ತು. 2018ರಲ್ಲಿ ‘ಮಜಾ ಟಾಕೀಸ್ ಸೂಪರ್ ಸೀಸನ್’ ಆರಂಭ ಆಯಿತು. 2020ರಲ್ಲಿ ಮತ್ತೆ ‘ಮಜಾ ಟಾಕೀಸ್’ ಹೆಸರಲ್ಲಿ ಶೋ ಶುರುವಾಯಿತು. ಈ ವೇಳೆ ಸೃಜನ್ ಅವರು ಈ ಶೋನಿಂದ ಬ್ರೇಕ್ ಪಡೆಯುವ ನಿರ್ಧಾರ ಮಾಡಿದರು.
ವಿವಿಧ ರೀತಿಯ ರಿಯಾಲಿಟಿ ಶೋಗಳ ಜಡ್ಜ್ ಆಗಿ ಬ್ಯುಸಿ ಆದರು ಸೃಜನ್. ‘ರಾಜಾ ರಾಣಿ’, ‘ನನ್ನಮ್ಮ ಸೂಪರ್ಸ್ಟಾರ್’, ‘ಗಿಚ್ಚಿ ಗಿಲಿಗಿಲಿ’, ‘ಫ್ಯಾಮಿಲಿ ಗ್ಯಾಂಗ್ಸ್ಟರ್’ ರೀತಿಯ ಶೋಗಳಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸಿದರು ಸೃಜನ್. ಅವರ ಗಮನ ಸಂಪೂರ್ಣವಾಗಿ ಇದರ ಮೇಲೆ ಇತ್ತು. ಈಗ ಅವರು ನಿರೂಪಣೆಗೆ ಕಂಬ್ಯಾಕ್ ಮಾಡಿದ್ದಾರೆ.
‘ಮಜಾ ಟಾಕೀಸ್’ ಎಂದಾಗ ನೆನಪಿಗೆ ಬರೋದು ಕುರಿ ಪ್ರತಾಪ್, ಇಂದ್ರಜಿತ್ ಲಂಕೇಶ್, ರೆಮೋ, ಶ್ವೇತಾ ಚಂಗಪ್ಪ. ಅವರು ಈ ಹೊಸ ಸೀಸನ್ನಲ್ಲಿ ಇರ್ತಾರಾ ಎನ್ನುವ ಕುತೂಹಲ ಮೂಡಿದೆ. ಈ ಮೊದಲು ಅಪರ್ಣಾ ಅವರು ವರಲಕ್ಷ್ಮೀ ಹೆಸರಿನ ಪಾತ್ರ ಮಾಡುತ್ತಿದ್ದರು. ಅವರು ನಿಧನ ಹೊಂದಿರುವುದರಿಂದ ಅವರು ಮಿಸ್ ಆಗಲಿದ್ದಾರೆ. ಅವರ ಬದಲಿಗೆ ಯಾರನ್ನು ಕರೆತರುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ.
‘