Thursday, December 12
Share News

ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನಲ್ಲಿ ಎರಡನೇ ವರ್ಷದ ವೈಭವದ  ಶ್ರೀನಿವಾಸ ಕಲ್ಯಾಣೋತ್ಸವ ಡಿ.28-29ರಂದು  ನಡೆಯಲಿದ್ದು, ಪುತ್ತೂರಿನಲ್ಲಿ ಗ್ರಾಮ ಮಟ್ಟದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯುತ್ತಿದೆ. 

ಕಡಬ ತಾಲೂಕಿನಲ್ಲಿ ಡಿ.6 ರಂದು ಆಮಂತ್ರಣ ಪತ್ರಿಕೆ ಬಿಡುಗಡೆ ನಡೆದು ಕಡಬ ತಾಲೂಕು ಘಟಕದ  ಶ್ರೀನಿವಾಸ ಕಲ್ಯಾಣೋತ್ಸವ ಪದಾಧಿಕಾರಿಗಳ ಆಯ್ಕೆ  ಮಾಡಲಾಯಿತು.

ಕಾರ್ಯಾಧ್ಯಕ್ಷರಾಗಿ  ವೆಂಕಟ್ರಮಣ ಕಡಬ, ಅಧ್ಯಕ್ಷ ರಾಗಿ ಜನಾರ್ದನ ರಾವ್ ಕಡಬ , ಪ್ರಧಾನಕಾರ್ಯದರ್ಶಿಯಾಗಿ ರವೀಂದ್ರ ದಾಸ್ ಪೂಂಜಾ ಕೂನ್ತೂರು ಹಾಗೂ ಕಾರ್ಯದರ್ಶಿಯಾಗಿ ಗಿರೀಶ್ ಕಡಬ ರವರನ್ನು ಆಯ್ಕೆ ಮಾಡಲಾಯಿತು.

ಈ  ಸಂದರ್ಭದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್  ಇದರ ಅಧ್ಯಕ್ಷರಾದ ಮಹೇಂದ್ರ ವರ್ಮ ಬಜತ್ತೂರು, ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಾಧ್ಯಕ್ಷರಾದ ಉಮೇಶ್ ಕೊಡಿಬೈಲು, ಹಾಗೂ  ಪ್ರದಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ ಮಠ ಉಪಸ್ಥಿತರಿದ್ದರು.


Share News

Comments are closed.

Exit mobile version