Thursday, December 12
Share News

ಬೆಂಗಳೂರು: ರಾಷ್ಟ್ರೀಯ ಕಾನೂನು ಕಾಲೇಜುಗಳಿಗೆ (ನ್ಯಾಷನಲ್‌ ಲಾ ಸ್ಕೂಲ್‌) ಪ್ರವೇಶ ಪಡೆಯಲು ಇರುವ ಸಾಮಾನ್ಯ ಪರೀಕ್ಷೆ ‘ಕ್ಲ್ಯಾಟ್‌’ನಲ್ಲಿ ಬೆಂಗಳೂರು ಕೆಂಗೇರಿ ರಾಮೋಹಳ್ಳಿಯ ಯುನಿವರ್ಸಲ್‌ ಪಿಯು  ಕಾಲೇಜ್‌ನ ಶೇಖ್‌ ಎಹ್ಸಾನ್‌ ಖಲೀಲುಲ್ಲಾ ಅವರು 120 ಅಂಕಗಳ ಪೈಕಿ 95.25ರಷ್ಟು ಅಂಕ ಗಳಿಸಿ ಅಖಿಲ ಭಾರತ ಒಬಿಸಿ ವಿಭಾಗದಲ್ಲಿ 5ನೇ ರ‍್ಯಾಂಕ್‌ ಹಾಗೂ ಸಾಮಾನ್ಯ ವಿಭಾಗದಲ್ಲಿ 100ನೇ ರ‍್ಯಾಂಕ್‌ ಗಳಿಸಿದ್ದಾರೆ.

ಇದೇ ಕಾಲೇಜ್‌ನ ಭುವನ್ ಸಾಯಿ ಎಸ್‌. (76.75) ಒಬಿಸಿ ವಿಭಾಗದಲ್ಲಿ 520 ಮತ್ತು ಸಾಮಾನ್ಯ ವಿಭಾಗದಲ್ಲಿ 4,397ನೇ ರ‍್ಯಾಂಕ್‌ ಗಳಿಸಿದ್ದಾರೆ ಹಾಗೂ ಸಮ್ಯಮಿ ಸಂಕೇತ್‌ (76.50) 4,573ನೇ ರ‍್ಯಾಂಕ್‌ ಗಳಿಸಿದ್ದಾರೆ.


Share News

Comments are closed.

Exit mobile version