ಪುತ್ತೂರು: ಕುರಿಯ ಅಮ್ಮುಂಜ ಪಾಲಿಂಜೆ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿ ನೇತೃತ್ವದಲ್ಲಿ ಮಾ. 8ರ ಶನಿವಾರ ಸಂಜೆ 5ರಿಂದ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ 9ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ, ದುರ್ಗಾ ಪೂಜೆ, ಕಾರ್ತಿಕ ಪೂಜೆ, ಭಜನೆ ನಡೆಯಲಿದೆ.
ಕ್ಷೇತ್ರದ ಪುರೋಹಿತರಾದ ಸೂರ್ಯಪ್ರಕಾಶ್ ಅಂಗಿಂತ್ತಾಯ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಜರಗಲಿದೆ.
ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಶ್ರೀ ಶನೈಶ್ಚರ ಪೂಜೆ ಮಾಡಿಸುವವರು ಶುದ್ಧರಾಗಿ ಸಂಜೆ ಗಂಟೆ 5ಕ್ಕೆ ಪೂಜಾ ಸ್ಥಳಕ್ಕೆ ತಲುಪಬೇಕಾಗಿ ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ: 9686473789, 9148528349, 9740537282, 9740552038.