Gl
ಧಾರ್ಮಿಕ

ಗೆಜ್ಜೆಗಿರಿಯಲ್ಲಿ ಮಾತೆ ಮಕ್ಕಳ ಪುನೀತ ಸಮಾಗಮ | ಗರಡಿ ಇಳಿದು ಬಂದ ಕೋಟಿ – ಚೆನ್ನಯರಿಗೆ ತಾಯಿಯ ಅಭಯ

ದೇಯಿ ಬೈದ್ಯೆತಿ, ಕೋಟಿ - ಚೆನ್ನಯರ ಮೂಲ ಕ್ಷೇತ್ರವಾದ ಗೆಜ್ಜೆಗಿರಿ ನಂದನ ಬಿತ್ತ್'ಲ್'ನಲ್ಲಿ ಮಂಗಳವಾರ ರಾತ್ರಿ ಗರಡಿ ನೇಮ ಹಾಗೂ ಮಾತೆ - ಮಕ್ಕಳ ಪುನೀತ ಸಮಾಗಮ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ದೇಯಿ ಬೈದ್ಯೆತಿ, ಕೋಟಿ – ಚೆನ್ನಯರ ಮೂಲ ಕ್ಷೇತ್ರವಾದ ಗೆಜ್ಜೆಗಿರಿ ನಂದನ ಬಿತ್ತ್’ಲ್’ನಲ್ಲಿ ಮಂಗಳವಾರ ರಾತ್ರಿ ಗರಡಿ ನೇಮ ಹಾಗೂ ಮಾತೆ – ಮಕ್ಕಳ ಪುನೀತ ಸಮಾಗಮ ನಡೆಯಿತು.

rachana_rai
Pashupathi
akshaya college
Balakrishna-gowda

ಗಣಪತಿ ಹೋಮ, ಗುರುಪೂಜೆ, ಮೂಲಸ್ಥಾನ ಗರಡಿ, ಬೆಮ್ಮೆರೆ ಗುಂಡ, ಸತ್ಯ ಧರ್ಮ ಚಾವಡಿಯಲ್ಲಿ ನವಕ ಪ್ರಧಾನ, ಹೋಮ, ನವಕ ಕಲಶಾಭಿಷೇಕ, ಅಲಂಕಾರ ಪೂಜೆ ನಡೆದು, ಮಧ್ಯಾಹ್ನ ಗರಡಿಯಲ್ಲಿ ಮಹಾಪೂಜೆ, ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಿತು.

pashupathi

ಸಂಜೆ ಮೂಲಸ್ಥಾನ ಗರಡಿಯಲ್ಲಿ ಶುದ್ಧಹೋಮ ಕಲಶ, ಸಂಜೆ ಧೂಮಾವತಿ ಬಲಿ ಸೇವೆ, ಸತ್ಯಧರ್ಮ ಚಾವಡಿಯಲ್ಲಿ ದೀಪಾರಾಧನೆ ಮಹಾಪೂಜೆ ನಡೆಯಿತು.

ರಾತ್ರಿ ಮೂಲಸ್ಥಾನ ಗರಡಿಯಿಂದ ಒಲಿಮದೆಯಿಂದ ಹೊರಟು, ದೇಯಿಬೈದೆತಿ ನೇಮೋತ್ಸವ, ಮಾತೆ ಮಕ್ಕಳ ಪುನೀತ ಸಮಾಗಮ ಜರಗಿತು. ಬಳಿಕ ದೇಯಿಬೈದೆತಿ ಪ್ರಸಾದ ವಿತರಣೆ, ದೇಯಿ ಬೈದೆತಿ ಸಮಾಧಿಯಲ್ಲಿ ದೀಪಾರಾಧನೆ, ಮೂಲಸ್ಥಾನ ಗರಡಿಯಲ್ಲಿ ಬೈದರ್ಕಳ ದರ್ಶನ ಸೇವೆ ಬೈದರ್ಕಳ ನೇಮೋತ್ಸವ, ಪ್ರಸಾದ ವಿತರಣೆ ನಡೆಯಿತು.

ಸಂಸದ ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಂ, ಕರಾವಳಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪುತ್ತೂರು ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಜಿ.ಪಂ ಮಾಜಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಕಾವು, ಭಾರತ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ,, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಕಾರ್ಯದರ್ಶಿ ಡಾ.ರಾಜಾರಾಮ್ ಕೆ.ಬಿ., ಗೌರವಾಧ್ಯಕ್ಷರಾದ ಪೀತಾಂಬರ ಹೇರಾಜೆ, ಜಯಂತ ನಡುಬೈಲು, ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಮೊಕ್ತೇಸರ ಶ್ರೀಧರ ಪೂಜಾರಿ, ಕೋಶಾಧಿಕಾರಿ ಮೋಹನದಾಸ್ ಬಂಗೇರ, ಉಪಾಧ್ಯಕ್ಷರಾದ ಉಲ್ಲಾಸ್ ಕೋಟ್ಯಾನ್, ದೀಪಕ್ ಕೋಟ್ಯಾನ್ ಗುರುಪುರ, ಸಂಜೀವ ಪೂಜಾರಿ ಕೂಚಿಗುಡ್ಡೆ, ಚಂದ್ರಹಾಸ ಅಮೀನ್, ಅಜಿತ್ ಪಾಲೇರಿ, ಸುಧಾಕರ ಪೂಜಾರಿ, ಶಶಿಧರ ಕಿನ್ನಿಮಜಲು, ಡಾ.ಗೀತಾ ಪ್ರಕಾಶ್, ರಾಜೇಂದ್ರ ಚಿಲಿಂಬಿ, ನಾರಾಯಣ ಮಚ್ಚಿನ, ಜಯವಿಕ್ರಮ್ ಕಲ್ಲಾಪು, ಸೀತಾರಾಮ ರೈ ಕೆದಂಬಾಡಿ ಗುತ್ತು, ಆರ್.ಸಿ. ನಾರಾಯಣ, ಎಸ್.ಟಿ. ಮೋರ್ಚಾ ಜಿಲ್ಲಾ ಅಧ್ಯಕ್ಷ ಹರೀಶ್ ಬಿಜತ್ರೆ, ಅಜಿತ್ ಹೊಸಮನೆ, ಸಂತೋಷ್ ಪಡುಮಲೆ, ನಿತೀಶ್ ಶಾಂತಿವನ, ಜಯರಾಜ್ ಶೆಟ್ಟಿ ಅಣಿಲೆ ಮೊದಲಾದವರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ  ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮಹೇಶ್ ಕುಮಾ‌ರ್ ಕರಿಕ್ಕಳ ಆಯ್ಕೆ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಮಹೇಶ್ ಕುಮಾರ್ ಕರಿಕ್ಕಳ…