Gl
ಧಾರ್ಮಿಕ

ದೇಗುಲ ಉತ್ಸವದ ವೇಳೆ ಕೆರಳಿದ ಆನೆ: ಮೂವರ ಸಾವು, 30 ಕ್ಕಿಂತಲೂ ಅಧಿಕ ಜನರಿಗೆ ಗಂಭೀರ

ದೇವಸ್ಥಾನದ ಉತ್ಸವದ ವೇಳೆ ಎರಡು ಆನೆಗಳು ಕೆರಳಿ ಕಾದಾಡಿಕೊಂಡು ಕನಿಷ್ಠ ಮೂವರು ಸಾವನ್ನಪ್ಪಿ 30ಕ್ಕೂ ಹೆಚ್ಚು ಮಂದಿ  ಗಂಭೀರ  ಗಾಯಗೊಂಡ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ತಿರುವನಂತಪುರಂ: ಕೇರಳದ ಕೊಯಿಲಾಂಡಿ ಬಳಿಯ ಮನಕುಲಂಗರ ಭಗವತಿ ದೇವಸ್ಥಾನದ ಉತ್ಸವದ ವೇಳೆ ಎರಡು ಆನೆಗಳು ಕೆರಳಿ ಕಾದಾಡಿಕೊಂಡು ಕನಿಷ್ಠ ಮೂವರು ಸಾವನ್ನಪ್ಪಿ 30ಕ್ಕೂ ಹೆಚ್ಚು ಮಂದಿ  ಗಂಭೀರ  ಗಾಯಗೊಂಡ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.

rachana_rai
Pashupathi

ಗುರುವಾರ ರಾತ್ರಿ ಐದು ದಿನಗಳ ವಾರ್ಷಿಕ ಉತ್ಸವದ ಕೊನೆಯ ದಿನವಾಗಿತ್ತು. ದೇವಾಲಯದ ಉತ್ಸವಕ್ಕೆ ದೇವಾಲಯದ ಉತ್ಸವಕ್ಕಾಗಿ ಆನೆಗಳನ್ನು ತರಲಾಗಿತ್ತು. ಉತ್ಸವದ ಅಂಗವಾಗಿ ಸಿಡಿಮದ್ದು ಸಿಡಿಸಿದಾಗ ಆನೆಗಳು ಬೆದರಿ ಕೆರಳಿ ಅಡ್ಡಾದಿಡ್ಡಿ ಚಲಿಸಿವೆ. ಇದರ ಪರಿಣಾಮದಿಂದ ಉಂಟಾದ ಕಾಲ್ತುಳಿತದಲ್ಲಿ ಮೂವರು ವೃದ್ಧರು ಸಾವನ್ನಪ್ಪಿದ್ದಾರೆ.

akshaya college

ಆನೆಗಳು ದೇವಾಲಯದ ಕಟ್ಟಡಕ್ಕೆ ಡಿಕ್ಕಿ ಹೊಡೆದಾಗ, ಅದರ ಗೋಡೆಯ ಒಂದು ಭಾಗ ಕುಸಿದು ಬಿದ್ದಿದೆ. ಕೆಲವರು ಅದರ ಕೆಳಗೆ ಸಿಲುಕಿಕೊಂಡರು. ಉತ್ಸವದ ಕಚೇರಿಯೂ ಆನೆಗಳ ಕಾದಾಟದಿಂದಾಗಿ ನಾಶವಾಗಿದೆ. ಜನರು ಚೆಲ್ಲಪಿಲ್ಲಿಯಾಗಿ ಓಡಿದಾಗ ಕಾಲ್ತುಳಿತದಂಥ ಪರಿಸ್ಥಿತಿ ಉಂಟಾಗಿ ಸುಮಾರು 30 ಜನರು ಗಾಯಗೊಂಡಿದ್ದಾರೆ. ಈ ಪೈಕಿ ಒಂಭತ್ತು ವರ್ಷದ ಓರ್ವ ಬಾಲಕಿಯ ಸಹಿತ 9 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.

ಇದುವರೆಗೆ ಬಂದಿರುವ ಮಾಹಿತಿಯ ಪ್ರಕಾರ, ಗೋಡೆ ಕುಸಿದು ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಸಾವನ್ನಪ್ಪಿದ್ದಾರೆ. ಸುಮಾರು30 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮೃತರಿಗೆ ಸಂತಾಪ ಸೂಚಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts