ಪುತ್ತೂರು: ವರ್ಷಂಪ್ರತಿಯಂತೆ ಕಲ್ಲೇಗ ಶ್ರೀ ಕಲ್ಕುಡ – ಕಲ್ಲುರ್ಟಿ ದೈವದ ನೇಮ ಮಂಗಳವಾರ ರಾತ್ರಿ ಹಾಗೂ ಬುಧವಾರ ಹಗಲು ವೈಭವದಿಂದ ನಡೆದಿದೆ.
ಮಂಗಳವಾರ ಸಂಜೆ ಕಾರ್ಜಾಲಿನಿಂದ ಭಂಡಾರ ದೈವಸ್ಥಾನಕ್ಕೆ ಆಗಮಿಸಿತು. ಬಳಿಕ ಕಲ್ಲೇಗ ದೈವಸ್ಥಾನದಲ್ಲಿ ಮಹಾಮ್ಮಾಯಿಗೆ ಗೊಂದೋಲು ಪೂಜೆ ನಡೆದು, ಕಲ್ಕುಡ – ಕಲ್ಲುರ್ಟಿ ದೈವಗಳಿಗೆ ನೇಮ ಜರಗಿತು.
ಸಾವಿರಾರು ಭಕ್ತರು ದೈವಗಳ ಗಂಧ ಪ್ರಸಾದ ಸ್ವೀಕರಿಸಿದರು.