ಬೃಹ್ಮ ವಿಷ್ಣು ಮಹೇಶ್ವರ ರೂಪದಲ್ಲಿ ನಿರಂತರವಾಗಿ ಉರಿಯುತ್ತಿದ್ದ ಆಧಿಶಕ್ತಾತ್ಮಕ ಶ್ರೀ ಶ್ರೀ ಶ್ರೀ ದೀಪನಾಥೇಶ್ವರ ದೇವಾಲಯದ ಮೂರು ದೀಪಗಳು ಹಠಾತ್ ನಂದಿ ಹೋಗಿವೆ. ಇದು ಕೆಡುಕಿನ ಸೂಚನೆ ಎಂಬ ಕಾರಣಕ್ಕೆ ಜನ ಭಯಭೀತರಾಗಿದ್ದಾರೆ.
ಕಾರವಾರ ಜಿಲ್ಲೆಯ, ಮುಂಡಗೋಡ ತಾಲೂಕಿನ, ಚಿಗಳ್ಳಿ ಗ್ರಾಮದಲ್ಲಿ ಸುಮಾರು 43 ವರ್ಷಗಳಿಂದ ನಿರಂತರವಾಗಿ 3 ದೀಪಗಳು ವಿಸ್ಮಯ ರೀತಿಯಲ್ಲಿ ಉರಿಯುತ್ತಿತ್ತು. ಈ ಮೂರು ದೀಪಗಳು ಯಾವುದೇ ಎಣ್ಣೆ, ಬತ್ತಿ ಇಲ್ಲದೆ ಉರಿಯುತ್ತಿದ್ದುದೇ ವಿಸ್ಮಯ. ಈ ಗ್ರಾಮವು ಮುಂಡಗೋಡ ಮತ್ತು ಶಿರಸಿ ಮಾರ್ಗದ ಮಧ್ಯ ಬರುವ ಕಾವಲಕೊಪ್ಪ ಗ್ರಾಮದಿಂದ ಸುಮಾರು 1 ಕಿ.ಮೀ ಸಮೀಪ ಪವಿತ್ರವಾದ ಆಧಿಶಕ್ತಾತ್ಮಕ ಶ್ರೀ ಶ್ರೀ ಶ್ರೀ ದೀಪನಾಥೇಶ್ವರ ದೇವಾಲಯದ ಸ್ಥಳಕ್ಕೆ ಬರುತ್ತದೆ.
ಈ 3 ವಿಸ್ಮಯ ದೀಪಗಳು ನೋಡಲು ಹೊರ ರಾಷ್ಟ್ರಗಳಿಂದ ಮತ್ತು ಹೊರ ರಾಜ್ಯಗಳಿಂದ ಬರುತ್ತಿದ್ದರು.
ಆದರೆ ಈಗ ಸುಮಾರು ನಾಲ್ಕೂವರೆ ದಶಕದಿಂದ ಎಣ್ಣೆ ಮತ್ತು ಬತ್ತಿ ಇಲ್ಲದೆ ನಿರಂತರವಾಗಿ ಉರಿಯುತ್ತಿದ್ದ ಮೂರು ದೀಪಗಳು ಹಠಾತ್ ನಂದಿಹೋಗಿದ್ದು, ಇದು ಯಾವುದೋ ಕೆಡುಕಿನ ಸೂಚನೆ ಎಂದು ಈ ಊರಿನ ಜನ ಭಯಭೀತರಾಗಿದ್ದಾರೆ.
ದೀಪಗಳ ಉಸ್ತುವಾರಿಯನ್ನು ಅರ್ಚಕ ವೆಂಕಟೇಶ್ ಎಂಬವರು ನೋಡಿಕೊಳ್ಳುತ್ತಿದ್ದರು. ಅವರು 14 ದಿನದ ಹಿಂದೆ ಮೃತಪಟ್ಟಿದ್ದಾರೆ. ಈ ಸೂತಕದ ಹಿನ್ನೆಲೆಯಲ್ಲಿ ದೇವಸ್ಥಾನದ ಬಾಗಿಲು ಮುಚ್ಚಲಾಗಿತ್ತು. ಬುಧವಾರ ದೇವಸ್ಥಾನದ ಬಾಗಿಲು ತೆರೆದಾಗ ಮೂರು ದೀಪಗಳು ಆರಿ ಹೋಗಿದ್ದವು. 1979ರಿಂದ 2025ರ ಫೆಬ್ರವರಿವರೆಗೆ ನಿರಂತರವಾಗಿ ಉರಿದುಕೊಂಡು ಬಂದಿದ್ದ ದೀಪಗಳು ಆರಿ ಹೋಗಿರುವುದು ಕಂಡುಬಂದಿದೆ.
ಇದರಿಂದ ಆತಂಕಗೊಂಡ ಗ್ರಾಮಸ್ಥರು ಕೆಡುಕಾಗುವ ಭಯದಲ್ಲಿ ದೇವಸ್ಥಾನದ ಬಾಗಿಲು ಮುಚ್ಚಿಸಿ ಸಾರ್ವಜನಿಕರಿಗೆ ದೇವಸ್ಥಾನ ಪ್ರವೇಶ ನಿರ್ಬಂಧಿಸಿದ್ದಾರೆ.
ಬೃಹ್ಮ ವಿಷ್ಣು ಮಹೇಶ್ವರ ದೈವ ರೂಪದಲ್ಲಿರುವ ಈ ವಿಸ್ಮಯ ದೀಪಗಳನ್ನೂ ನೋಡಲು ಪ್ರತಿ ನಿತ್ಯವೂ ನೂರಾರು ಭಕ್ತರು ಮತ್ತು ಪ್ರವಾಸಿಗರು ಬರುತ್ತಾರೆ. ಈ ದೀಪವನ್ನು ಹಚ್ಚಿದವರು ದಿವಂಗತ ಶಾರದಾ ಅಣ್ಣಪ್ಪಯ್ಯ ದೈವಜ್ಞ ಎಂಬ ಪರಮ ಭಕ್ತ. ದೇವರಲ್ಲಿ ಅಪಾರವಾದ ಭಕ್ತಿ ಮತ್ತು ನಂಬಿಕೆ ಇಟ್ಟವರು. 1979 ರಲ್ಲಿ ಶಾರದಮ್ಮ ಅಣ್ಣಪ್ಪಯ್ಯ ದೈವಜ್ಞ ಅಮ್ಮನವರು ಒಂದು ದೀಪವನ್ನು ಬೆಳಗಿಸಿದ್ದರು. ನಿರಂತರವಾಗಿ ಉರಿಯುವುದನ್ನು ಕಂಡು 1980ರಲ್ಲಿ 2ನೇ ದೀಪ ಮತ್ತೆ 15 ದಿನಗಳ ನಂತರ 3ನೇ ದೀಪ ಬೆಳಗಿಸಿದರು.
ಆ ಮೂರು ದೀಪಗಳು ನಿರಂತರವಾಗಿ ಉರಿಯುತ್ತಿರುವುದನ್ನು ಆ ಭಾಗದ ಜನರು ಕಂಡು ಇದು ಬ್ರಹ್ಮ, ವಿಷ್ಣು ಮಹೇಶ್ವರ ಎಂಬ ದೇವರುಗಳು ಪ್ರತಿರೂಪ ಎಂದು ಬಲವಾಗಿ ನಂಬಿ ಈಗಲೂ ದೇವರ ಆರಾದನೆ ಮಾಡುತ್ತಿದ್ದಾರೆ. ಈ ಹಿಂದೆ ಆಧಿಶಕ್ತಾತ್ಮಕ ಶ್ರೀ ಶ್ರೀ ಶ್ರೀ ದೀಪನಾಥೇಶ್ವರ ದೇವಾಲಯ ಆಗುವ ಮೊದಲು ಇದು ಒಂದು ಶಾರದಮ್ಮನವರ ವಾಸಿಸುವ ಸಣ್ಣ ಮನೆಯಾಗಿತ್ತು. ಶಾರದಮ್ಮನವರು ದೇವರಲ್ಲಿ ಅಪಾರವಾದ ನಂಬಿಕೆ ಮತ್ತು ಶ್ರದ್ದೆ ಹೊಂದಿದ್ದರು. ಸದಾ ದೇವರ ಆರಾಧನೆಯಲ್ಲಿ ತೊಡಗಿದ್ದರು.
ಇವರ ಮನೆ ಮುಂದೆ ಇರುವ ಪರಮ ಪೂಜ್ಯ ಸದ್ಗುರು ಕಲ್ಮಶ್ವರ ಮಹಾಸ್ವಾಮಿ ಮಠದಲ್ಲಿ ಪ್ರತಿದಿನ ಪೂಜೆ ಮತ್ತು ಭಜನೆ ಮಾಡುತ್ತಿದ್ದರು.
ಒಂದು ದಿನ ಪರಮ ಪೂಜ್ಯ ಗೋವಿಂದ ಭಟ್ಟರವರು ಶ್ರೀ ಸಂತ ಶಿಶುನಾಳ ಶರೀಫರ ಪಾರಾಯಣ ನಡೆಸಿದ್ದರು. ಶಾರದಮ್ಮನವರ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಮನೆಯಲ್ಲಿ ಸ್ವಲ್ಪ ಉಳಿದ ಎಣ್ಣೆಯಿಂದ ದೀಪ ಬೆಳಗಿಸಿ ಪರಮ ಪೂಜ್ಯ ಸದ್ಗರು ಕಲ್ಮಶ್ವರ ಮಹಾಸ್ವಾಮಿ ಮಠಕ್ಕೆ ಪುರಾಣ ಕೇಳಲು ಹೋಗಿದ್ದರು. ರಾತ್ರಿಯೆಲ್ಲಾ ಉರಿದು 2ನೇ ದಿವಸದವರೆಗೂ ಪ್ರಶಾಂತ ಮತ್ತು ಪ್ರಸನ್ನವಾಗಿ ಒಂದು ದೀಪ ಉರಿಯುವುದನ್ನು ಕಂಡು ವಿಸ್ಮಿತರಾಗಿ ಮತ್ತು ಆಶ್ಚರ್ಯಗೊಂಡು ಊರ ಜನರಿಗೆ ತಿಳಿಸಿದರು. ಆಗ ಊರಿನ ಜನರು ಈ ಉರಿಯುವ ದೀಪ ಕಂಡು ದಿಗ್ಭ್ರಮೆಗೊಂಡಿದ್ದರು.
ತದನಂತರ ಸ್ವಲ್ಪ ದಿನಗಳ ನಂತರ ಆ ಮನೆಯನ್ನು ತೆಗೆದು ಅದೆ ಸ್ಥಳದಲ್ಲಿ ಆಧಿಶಕ್ತಾತ್ಮಕ ಶ್ರೀ ಶ್ರೀ ಶ್ರೀ ದೀಪನಾಥೇಶ್ವರ ದೇವಾಲಯದ ನಿರ್ಮಾಣ ಮಾಡಲು ಊರಿನವರು ಮತ್ತು ದಾನಿಗಳ ಸಹಾಯದೊಂದಿಗೆ ನಿರ್ಮಿಸುತ್ತಿದ್ದಾರೆ. ಇನ್ನು ಮುಕ್ತಾಯ ಹಂತದಲ್ಲಿ ಬಾಕಿ ಇದೆ. ದೀಪವನ್ನು ವೀಕ್ಷಿಸಲು ಗಣ್ಯರು ಮತ್ತು ಆಧ್ಯಾತ್ಮಿಕ ಗುರುಗಳ ದಂಡು ಬಂದಿತ್ತು. 1994 ರಲ್ಲಿ ಜುಲೈ 31 ರಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೆಂದ್ರ ಹೆಗ್ಗಡೆಯವರು ಸಹ ಬಂದು ಸ್ವತಃ ವೀಕ್ಷಿಸಿ ಮುಂದೊಂದು ದಿನ ಈ ಸ್ಥಳ ಪುಣ್ಯ ಸ್ಥಳವಾಗುವುದೆಂದು ಸಲಹೆ ನೀಡಿದ್ದರು.
2001 ರಲ್ಲಿ ಟಿಬೇಟ್ ಧರ್ಮಗುರುಗಳಾದ ಶ್ರೀ ದಲಾಯಿ ಲಾಮಾರವರು ಆಗಮಿಸಿ ವೀಕ್ಷಿಸಿ ನಾನು ಸಹಜವಾಗಿ ಯಾವುದೇ ದೇವಸ್ಥಾನಕ್ಕೆ ಹೋಗುವುದಿಲ್ಲ. ಇಲ್ಲಿ ಬಂದು ಆಶ್ಚರ್ಯವಾಯಿತು ಇದು ಕೂಡಾ ಪುಣ್ಯ ಸ್ಥಳವಾಗುತ್ತದೆ ಎಂದು ಹೇಳಿದ್ದರು. ಇನ್ನು ಹಲವು ಆಧ್ಯಾತ್ಮಿಕ ಗುರುಗಳು ಎಣ್ಣೆಯಿಲ್ಲದೆ ಉರಿಯುವ ದೀಪಗಳನ್ನು ಬಂದು ವೀಕ್ಷಿಸಿದ್ದಾರೆ. ಈ ಸ್ಥಳವನ್ನು ಪರೀಕ್ಷಿಸಿದವರಿಗೆ ಮತ್ತು ಅನುಮಾನ ವ್ಯಕ್ತಪಡಿಸಿದವರಿಗೆ ಆರೋಗ್ಯದಲ್ಲಿ ಏರು ಪೇರು ಆಗಿದೆ.
ಗುಲ್ಬರ್ಗಾದ ಖ್ಯಾತ ಕಾಲೇಜಿನ ವಿಜ್ಞಾನ ವಿಭಾಗದ ವಿಧ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರು ಬಂದು ಈ 3 ದೀಪಗಳ ಬಗ್ಗೆ ಪರೀಕ್ಷಿಸಲು ಮುಂದಾಗಿದ್ದರು.
ಅವರು ಆ 3 ವಿಸ್ಮಯ ದೀಪಗಳ ಪಕ್ಕದಲಿ ಎಣ್ಣೆ ಮತ್ತು ಬತ್ತಿ ಹಾಕಿ ದೀಪವನ್ನು ತಾವೆ ಬೆಳಗಿಸಿ ಇಟ್ಟರು. ಸತತ 1 ದಿನಗಳ ಕಾಲ ಉರಿದು ಅವರು ಹಚ್ಚಿದ ದೀಪ ಆರಿ ಹೋಯಿತು. ಮತ್ತೊಂದು ದಿನ ಅದೇ ರೀತಿ ಮಾಡಲು ಮುಂದಾದಾಗ ಅಲ್ಲಿ ಬಂದಿರುವ ಎಲ್ಲರಿಗೂ ಆರೊಗ್ಯದಲ್ಲಿ ಏರು-ಪೇರು ಪ್ರಾರಂಭವಾಯಿತು. ತದನಂತರ ಅವರೆಲ್ಲರೂ ನಾವು ಮಾಡಿದ್ದು ತಪ್ಪಾಯಿತೆಂದು ಕ್ಷಮೆಯಾಚಿಸಿದಾಗ ಅವರು ಹುಷಾರಾಗಿದ್ದರು. ಹಾಗೆ ಇನ್ನು ಹಲವರು ಆ ದೀಪಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದವರಿಗೂ ಹಲವು ಬಾರಿ ಅವರಿಗೂ ಸಹ ಆರೋಗ್ಯದಲ್ಲಿ ಏರು-ಪೇರು ಸಹ ಆಗಿದೆ ಮತ್ತು ದೇವರಲ್ಲಿ ನಂಬಿಕೆ ಇಲ್ಲದ ನಾಸ್ತಿಕರು ಸಹ ಇಲ್ಲಿ ಬಂದು ದೈವ ಆರಾಧಕರಾಗಿ ಹೋಗಿದ್ದು ಸಹ ಇದೆ ಎಂದು ಇಲ್ಲಿ ಜನರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಗ ದೇವಸ್ಥಾನದ ಪೂಜಾ ವಿಧಿ ವಿಧಾನಗಳನ್ನು ಪ್ರತಿದಿನ ದಿವಗಂತ ಶಾರದಮ್ಮನವರ ತಮ್ಮನ ಮಗನಾದ ವೆಂಕಟೇಶ ರಾಯ್ಕರ್ ರವರು ಮಾಡುತ್ತಿದ್ದಾರೆ ಮತ್ತು ಪ್ರವಾಸಿಗರು ಭಕ್ತಾಧಿಗಳು ಯಾವ ಸಮಯದಲ್ಲೂ ಬಂದರು ದೇವರ ದರ್ಶನ ಮಾಡಲು ಸಹಕರಿಸುತ್ತಾರೆ.