ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳ ಹಿಂಭಾಗದಲ್ಲಿದ್ದ ವಿವಾದಿತ ಮನೆಗಳ ತೆರವು ಕಾರ್ಯ ಸೋಮವಾರ ನಡೆಯಿತು.
ದೇವಳ ಕೆರೆ ಸಮೀಪದಲ್ಲಿದ್ದ ಒಂದು ಮನೆಯನ್ನು ಹೊರತುಪಡಿಸಿ ಉಳಿದ ಐದು ಮನೆಗಳನ್ನು ಜೆಸಿಬಿ ಮೂಲಕ ತೆರವು ಮಾಡಲಾಯಿತು.
ಮರ ತೆರವು ವೇಳೆ ಮನೆಗಳ ಮೇಲೆ ಮರ ಬಿದ್ದ ಘಟನೆ ನಡೆದಿತ್ತು. ಬಳಿಕ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಅವರು, ಮರ ತೆರವು ಮಾಡುವಾಗ ಅನಿರೀಕ್ಷಿತವಾಗಿ ಮರ ಮನೆಗಳ ಮೇಲೆ ಬಿದ್ದಿದೆ. ಮನೆಯಲ್ಲಿ ಯಾರೂ ಇರಲಿಲ್ಲ. ಅವರೆಲ್ಲ ನಿನ್ನೆ ಸಂಜೆಯೇ ಮನೆಗಳನ್ನು ಖಾಲಿ ಮಾಡಿದ್ದಾರೆ ಎಂದರು.
ಬಾಡಿಗೆ ಮನೆಯಲ್ಲಿ ಒಟ್ಟು 11 ಮನೆಗಳಿತ್ತು. ಅವರೆಲ್ಲರಿಗೆ ಮನೆ ನಿರ್ಮಿಸಿ ಕೊಡಲಾಗುವುದು. ಇದುವರೆಗೆ 17 ಲಕ್ಷ ರೂ.ವರೆಗೆ ಪರಿಹಾರ ನೀಡಲಾಗಿದೆ. ಆತ್ಮೀಯರಾದ ರಾಜೇಶ್ ಬನ್ನೂರು ಅವರ ಮನೆಯನ್ನು ಬಿಟ್ಟು ಉಳಿದೆಲ್ಲಾ ಮನೆಗಳು ತೆರವಾಗಿದೆ ಎಂದರು.
ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ ಉಪಸ್ಥಿತರಿದ್ದರು.
,.
ಪ
,,.,..,,.