ಪುತ್ತೂರು: ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಸಪ್ತದಶ ಸಂಭ್ರಮ ಶನಿವಾರ ಬೆಳಗ್ಗಿನಿಂದಲೇ ಆರಂಭಗೊಂಡಿತು.
ಬೆಳಿಗ್ಗೆ ಗಣಹೋಮ, ನಾಗದೇವರ ತಂಬಿಲ, ಬ್ರಹ್ಮೆರೆ ಗುಂಡದಲ್ಲಿ ಬ್ರಹ್ಮೆರೆ ಪೂಜೆ, ತಂಬಿಲ, ಕೋಟಿ – ಚೆನ್ನಯರಿಗೆ ನವಕ ಕಲಶ ಪೂಜೆ, ತಂಬಿಲ ಸೇವೆ, ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು. ಬಳಿಕ ಅನ್ನಸಂತರ್ಪಣೆ ಆರಂಭಗೊಂಡಿತು.
ಸಂಜೆ 4 ಗಂಟೆಗೆ ಕೂರೇಲು ತರವಾಡು ಮನೆಯಿಂದ ಭಂಡಾರ ಆಗಮನವಾಗಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಅನ್ನಸಂತರ್ಪಣೆ ಜರಗಲಿದೆ. ಬಳಿಕ ಬೈದೇರುಗಳು ಗರಡಿ ಇಳಿಯುವುದು, ಸುಡುಮದ್ದು ಪ್ರದರ್ಶನ, ಬೈದೇರುಗಳ ಮೀಸೆ ಧರಿಸುವುದು, ಮಾಯಂದಾಲೆ ಗರಡಿ ಇಳಿಯುವುದು, ಬಳಿಕ ಚಾ ಪರ್ಕ ಕಲಾವಿದರಿಂದ ‘ಏರ್ಲಾ ಗ್ಯಾರೆಂಟಿ ಅತ್ತ್’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.