Gl harusha
ಧಾರ್ಮಿಕ

ಪರ್ಪುಂಜ: ರಾಮಜಾಲು ಗರಡಿ ಜಾತ್ರೆ ಆರಂಭ;ಸಂಜೆ ಭಂಡಾರ ಆಗಮಿಸಿ, ಬ್ರಹ್ಮಬೈದರ್ಕಳ ನೇಮೋತ್ಸವ

ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಸಪ್ತದಶ ಸಂಭ್ರಮ ಶನಿವಾರ ಬೆಳಗ್ಗಿನಿಂದಲೇ ಆರಂಭಗೊಂಡಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಸಪ್ತದಶ ಸಂಭ್ರಮ ಶನಿವಾರ ಬೆಳಗ್ಗಿನಿಂದಲೇ ಆರಂಭಗೊಂಡಿತು.

ಸಂಜೆ 4 ಗಂಟೆಗೆ ಕೂರೇಲು ತರವಾಡು ಮನೆಯಿಂದ ಭಂಡಾರ ಆಗಮನವಾಗಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಅನ್ನಸಂತರ್ಪಣೆ ಜರಗಲಿದೆ. ಬಳಿಕ ಬೈದೇರುಗಳು ಗರಡಿ ಇಳಿಯುವುದು, ಸುಡುಮದ್ದು ಪ್ರದರ್ಶನ, ಬೈದೇರುಗಳ ಮೀಸೆ ಧರಿಸುವುದು, ಮಾಯಂದಾಲೆ ಗರಡಿ ಇಳಿಯುವುದು, ಬಳಿಕ ಚಾ ಪರ್ಕ ಕಲಾವಿದರಿಂದ ‘ಏರ್ಲಾ ಗ್ಯಾರೆಂಟಿ ಅತ್ತ್’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ಬೆಳಿಗ್ಗೆ ಗಣಹೋಮ, ನಾಗದೇವರ ತಂಬಿಲ, ಬ್ರಹ್ಮೆರೆ ಗುಂಡದಲ್ಲಿ ಬ್ರಹ್ಮೆರೆ ಪೂಜೆ, ತಂಬಿಲ, ಕೋಟಿ – ಚೆನ್ನಯರಿಗೆ ನವಕ ಕಲಶ ಪೂಜೆ, ತಂಬಿಲ ಸೇವೆ, ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು. ಬಳಿಕ ಅನ್ನಸಂತರ್ಪಣೆ ಆರಂಭಗೊಂಡಿತು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ದೇವಸ್ಥಾನಕ್ಕೆ ತೆರಳುವ ರಸ್ತೆ ಬದಿ ಕಲ್ಲು ಹಾಕಿದ ವಿಚಾರ:ಸೋಶಿಯಲ್ ಮೀಡಿಯಾ ದೂರಿಗೆ ಸ್ಪಂದಿಸಿದ ಶಾಸಕರು

ಪುತ್ತೂರು: ಪುತ್ತೂರಿನ‌ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಯ ಅಂಚೆ ಕಚೇರಿ ಬಳಿ…

ಮಹಾಕುಂಭಮೇಳ: 90 ಸಾವಿರ ಖೈದಿಗಳಿಗೆ ಸ್ನಾನ ಭಾಗ್ಯ! ಪವಿತ್ರ ಸ್ನಾನ ಮಾಡಿಸಿದ ಬಗೆಯಾದರೂ ಹೇಗೆ ಬಲ್ಲಿರಾ?

ಜೈಲುಗಳಲ್ಲಿ ಬಂಧಿತರಾಗಿರುವ ಸುಮಾರು 90 ಸಾವಿರ ಕೈದಿಗಳಿಗೆ ಮಹಾಕುಂಭದ ಪವಿತ್ರ ಸ್ನಾನ ಮಾಡಲು…