ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶನಿವಾರ ಸಂಜೆ ದೊಡ್ಡ ರಂಗಪೂಜೆಯೊಂದಿಗೆ ಕಳೆದ 48 ದಿನಗಳ ಕಾಲ ನಡೆದ ಒಂದು ಮಂಡಲ ರಂಗಪೂಜೆ ಸಮಾಪ್ತಿಗೊಂಡಿತು.
ಕುಣಿತ ಭಜನೆಯೊಂದಿಗೆ ಸಂಜೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ದೊಡ್ಡ ರಂಗಪೂಜೆ, ಉಗ್ರಾಣ ಮುಹೂರ್ತ ನಡೆಯಿತು.
ಜನವರಿ 5ರಂದು ಮಧ್ಯಾಹ್ನ ಕಿರುಷಷ್ಠಿ ಪ್ರಸಾದ, ತುಲಾಭಾರ ಸೇವೆ ನಡೆಯಿತು.
ಸಂಜೆ ದೇವರ ಉತ್ಸವ, ಕಟ್ಟೆಪೂಜೆ, ಸಂಪ್ಯ ಸವಾರಿ ನಡೆಯಲಿದೆ.