ಧಾರ್ಮಿಕ

2ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ: ಭಜನೆ ಕಾರ್ಯಕ್ರಮಕ್ಕೆ ಚಾಲನೆ |ಬೃಹತ್ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ಉಗ್ರಾಣ ಮುಹೂರ್ತ

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಇದರ ಸಾರಥ್ಯದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ದ್ವಿತೀಯ ಬಾರಿಗೆ ಡಿ.28 ಮತ್ತು 29 ರಂದು ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಅಂಗವಾಗಿ ಡಿ.27ರಂದು ಸಂಜೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ವೈಭವದಿಂದ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಇದರ ಸಾರಥ್ಯದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ದ್ವಿತೀಯ ಬಾರಿಗೆ ಡಿ.28 ಮತ್ತು 29 ರಂದು ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಅಂಗವಾಗಿ ಡಿ.27ರಂದು ಸಂಜೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ವೈಭವದಿಂದ ನಡೆಯಿತು.

ತಾಲೂಕಿನ ವಿವಿಧ ಗ್ರಾಮಗಳಿಂದ ಬರುವ ಹೊರೆಕಾಣಿಕೆಯು ದರ್ಬೆಗೆ ಬಂದು ಅಲ್ಲಿಂದ ಜೊತೆಯಾಗಿ ಮೆರವಣಿಗೆಯು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಗೆ ಬಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಹಸಿರುವಾಣಿಯನ್ನು ಸಂಗ್ರಹಿಸಿ ಇಡಲಾಯಿತು. ಸಂಜೆ ದರ್ಬೆಯಲ್ಲಿ ಹಸಿರುವಾಣಿ ಮೆರವಣಿಗೆಯನ್ನು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ ಮತ್ತು ಕುಂಟಾರು ಬ್ರಹ್ಮಶ್ರೀ ಗುರು ತಂತ್ರಿಯವರು ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಉಗ್ರಾಣ ಮುಹೂರ್ತವನ್ನು ಬ್ರಹ್ಮಶ್ರೀ ಗುರುತಂತ್ರಿಯವರು ನೇರವೇರಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ ವಿಶ್ವನಾಥ ನಾಯಕ್ ಮತ್ತು ದೇವಣ್ಣಕಿಣಿ ಸಂಸ್ಥೆಯ ವಿಜಯಣ್ಣ ದೀಪ ಪ್ರಜ್ವಲಿಸಿದರು.

ಈ ಸಂದರ್ಭ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷರಾದ ಶಶಾಂಕ್ ಕೊಟೆಚಾ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾ‌ರ್ ಪುತ್ತಿಲ, ಅಧ್ಯಕ್ಷ ಶಿವಪ್ರಸಾದ್‌ ಇಜ್ಜಾವು, ಕಾರ್ಯಾಧ್ಯಕ್ಷ ಉಮೇಶ್‌ ಕೋಡಿಬೈಲು, ಸಹ ಸಂಚಾಲಕ ಮನೀಶ್ ಕುಲಾಲ್, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು, ಕಾರ್ಯದರ್ಶಿ ಗಣೇಶ್‌ಚಂದ್ರ ಭಟ್ ಮಕರಂದ, ಪ್ರವೀಣ್ ಶೆಟ್ಟಿ ತಿಂಗಳಾಡಿ, ಜೊತೆಕಾರ್ಯದರ್ಶಿ ಹರೀಶ್ ಮರುವಾಳ, ಸಂತೋಷ್ ಕುಮಾರ್ ಮುಕ್ರಂಪಾಡಿ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿಮಠ, ಕೋಶಾಧಿಕಾರಿ ಉದಯ ಕುಮಾರ್ ರೈ ಎಸ್.ಸಂಪ್ಯ, ಸ್ವಾಗತ ಸಮಿತಿ ಅಧ್ಯಕ್ಷ ರಾಜು ಶೆಟ್ಟಿ, ಸಂಚಾಲಕ ಅನಿಲ್ ತೆಂಕಿಲ,, ಕಾರ್ಯದರ್ಶಿಗಳಾದ ಗಣೇಶ್ಚಂದ್ರ ಭಟ್, ಪ್ರವೀಣ್ ಶೆಟ್ಟಿ ತಿಂಗಳಾಡಿ ಕೃಷ್ಣಪ್ರಸಾದ್ ಶೆಟ್ಟಿ, ಉಮೇಶ್ ವೆಜಿಟೇಬಲ್‌, ಪ್ರವೀಣ್ ಭಂಡಾರಿ, ನಿಶಾಂತ್ ರೈ, ಪ್ರಕಾಶ್, ನವೀನ್ ಪಡಿವಾಳ್‌ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಇದರ ಸಾರಥ್ಯದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ದ್ವಿತೀಯ ಬಾರಿಗೆ ಡಿ.28 ಮತ್ತು 29ರಂದು ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಅಂಗವಾಗಿ ಡಿ.28ರಂದು ಬೆಳಿಗ್ಗೆ ನಡೆದ ಭಜನಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಕಳೆದ ವರ್ಷ ಒಳ್ಳೆಯ ರೀತಿಯಲ್ಲಿ ಕಾರ್ಯಕ್ರಮ ಆಗಿದೆ. ನಾನು ಕೂಡಾ ಬಂದಿದ್ದೆ. ಈ ವರ್ಷ ಕೂಡಾ ಪುತ್ತಿಲ ಪರಿವಾರ ಟ್ರಸ್ಟ್‌ನವರು ಈ ಕಾರ್ಯಕ್ರಮ ಹಾಕಿಕೊಂಡು ಎಲ್ಲ ಊರಿನ ಜನರು ಬರಬೇಕೆಂದು ಕಾರ್ಯಕ್ರಮ ಹಾಕಿಕೊಂಡಿದ್ದಾರೆ.

ಅರುಣ್ ಕುಮಾ‌ರ್ ಪುತ್ತಿಲರಿಂದಾಗಿ ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನೋಡುವ ಭಾಗ್ಯ:

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಮಾತನಾಡಿ ಶ್ರೀಮಂತರು, ದುಡ್ಡಿದ್ದವರು ಮಾತ್ರ ಶ್ರೀನಿವಾಸ ಕಲ್ಯಾಣೋತ್ಸವ ಮಾಡಲು ಸಾಧ್ಯ. ಆದರೆ ಇವತ್ತು ಸಾಮೂಹಿಕವಾಗಿ ಶ್ರೀನಿವಾಸ ಕಲ್ಯಾಣೋತ್ಸವ ಮಾಡುವ ಮೂಲಕ ಎಲ್ಲ ಬಡವರಿಗೂ ಕೂಡಾ ಅದರಲ್ಲೂ ನನಗೂ ಕೂಡಾ ಶ್ರೀನಿವಾಸ ಕಲ್ಯಾಣೋತ್ಸವ ನೋಡುವ ಅವಕಾಶ ಲಭಿಸಿದೆ. ಯಾಕೆಂದರೆ ನಾನು ಕೂಡಾ ಶ್ರೀನಿವಾಸ ಕಲ್ಯಾಣೋತ್ಸವ ನೋಡಿದ್ದು ಪುತ್ತೂರಿನಲ್ಲಿ. ಹಾಗಾಗಿ ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವವನ್ನು ಎಲ್ಲರಿಗೂ ನೋಡುವಂತೆ ಮಾಡಿದವರು ಅದು ಅರುಣ್ ಕುಮಾರ್ ಪುತ್ತಿಲ ಮತ್ತು ಅವರ ತಂಡ. ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಈ ಹಿಂದಿನ ಸಮಿತಿ ಸಹಕಾರ ನೀಡಿರಿರಲಿಲ್ಲ:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ಕಳೆದ ಬಾರಿ ಕಾರ್ಯಕ್ರಮ ನಡೆಯುವಾಗ ಒಂದಷ್ಟು ವಿಘ್ನಗಳು ತೊಂದರೆ ಕೊಟ್ಟಿರುವುದು ಉಲ್ಲೇಕವಾಗಿದೆ. ಆದರೆ ಭಗವಂತನ ಆಶೀರ್ವಾದಿಂದ ಅಭೂತಪೂರ್ವವಾಗಿ ಕಾರ್ಯಕ್ರಮ ನಡೆದಿತ್ತು. ಇವತ್ತು ನಾವೆಲ್ಲ ಅತ್ಯಂತ ಸಂತೊಷದಿಂದ ಇಡಿ ಸಮಜವನ್ನು ಒಗ್ಗೂಡಿಸಬೆಕೆಂಬ ಯೋಜನೆಯಡಿಯಲ್ಲಿ ಕಾರ್ಯಕ್ರಮ ವ್ಯವಸ್ಥೆಯ ದೃಷ್ಟಿಯನ್ನು ಗಮನಿಸುವಾಗ ಈ ಭಾರಿ ಅತ್ಯಂತ ಸುಲಭವಾಗಿ ನಮಗೆಲ್ಲರಿಗೂ ಕಾರ್ಯಕ್ರಮ ನಡೆಸಲು ದೇವಳದ ನೂತನ ಸಮಿತಿ ಪೂರ್ಣ ಸಹಕಾರ ನೀಡಿದೆ. ಈ ನಿಟ್ಟಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೂತನ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಈ ತನಕ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆದಾಗ ಈ ಹಿಂದೆ ಇರುವ ಯಾವ ಸಮಿತಿಗಳು ಈ ರೀತಿಯ ಸಹಕಾರ ನೀಡಿರಲಿಲ್ಲ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರಲ್ಲದೆ ಈ ಕಾರ್ಯಕ್ರಮ ಇಡಿ ಸಮಾಜ ಒಂದಾಗಿದೆ ಎಂಬ ಸಂದೇಶ ಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷ ಶಶಾಂಕ ಕೊಟೇಚಾ, ಅಧ್ಯಕ್ಷ ಶಿವಪ್ರಸಾದ್‌ ಇಜ್ಜಾವು, ಸಹ ಸಂಚಾಲಕ ಮನೀಶ್ ಕುಲಾಲ್, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು, ಕಾರ್ಯದರ್ಶಿ ಗಣೇಶ್‌ಚಂದ್ರ ಭಟ್ ಮಕರಂದ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಕಡಬ ತಾಲೂಕು ಅಧ್ಯಕ್ಷ ವೆಂಕಟ್ರಮಣ ಭಟ್, ಪುತ್ತಿಲ. ವೈದಿಕ ಸಮಿತಿ ಸದಸ್ಯ ಬ್ರಹ್ಮಶ್ರೀ ಕುಂಟಾರು ಗುರು ತಂತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರವಿಕುಮಾ‌ರ್ ರೈ ಕೆದಂಬಾಡಿ ಮಠ ಸ್ವಾಗತಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಭಜಾನ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ಮಾದರಿ ಆಡಳಿತಕ್ಕೆ ಮೊದಲ ಹೆಜ್ಜೆ ಈಶ್ವರ ಭಟ್

 ಪಂಜಿಗುಡ್ಡೆ ಧಾರ್ಮಿಕ ಶ್ರದ್ದೆಯ ಮೂಲಕ ಧಾರ್ಮಿಕ ಪರಂಪರೆಯನ್ನು ಉಳಿಸಬೇಕು. ಈ ಸಂದರ್ಭ ಹಿಂದೆಲ್ಲ ಇಲ್ಲಿ ಬೇರೆ ಬೇರೆ ರೀತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬರುವ ವ್ಯಾಪಾರಿಗಳು ರೂ. 10 ಸಾವಿರ, ರೂ. 20 ಸಾವಿರ ಕೊಟ್ಟು ಸ್ಟಾಲ್ ಪಡೆದ ಸಂದರ್ಭವಿತ್ತು. ಆದರೆ ಧಾರ್ಮಿಕ ಶ್ರದ್ದಾಕೇಂದ್ರ ವ್ಯಾಪಾರಿಕರಣ ಆಗಬಾರದು ಎಂದು ಒಂದು ಹೆಜ್ಜೆ ಮುಂದಿಟ್ಟಿರುವ ಈಗಿನ ವ್ಯವಸ್ಥಾಪಾನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಕೇವಲ ರೂ.1200ಕ್ಕೆ ಸ್ಟಾಲ್‌ಗಳನ್ನು ವ್ಯಾಪಾರಿಗಳಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ಈಶ್ವರ ಭಟ್ ಪಂಜಿಗುಡ್ಡೆ ತಂಡದ ಜೊತೆ ಹಿಂದು ಸಮಾಜವಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಧರ್ಮಸ್ಥಳ: ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವದ 44ನೆ ವರ್ಧಂತ್ಯುತ್ಸವ | ನಾಳೆ ಬಾಹುಬಲಿಸ್ವಾಮಿ ಮೂರ್ತಿಗೆ ಪಾದಾಭಿಷೇಕ

ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿಮೂರ್ತಿಯ ಪ್ರತಿಷ್ಠಾಪಕರು ಹಾಗೂ ಧರ್ಮಾಧಿಕಾರಿ…