ಧಾರ್ಮಿಕ

ಜಿಲ್ಲೆಯ ಮೊದಲ ಜಾತ್ರೋತ್ಸವಕ್ಕೆ ಬೆಟ್ಟಂಪಾಡಿಯಲ್ಲಿ ಗೊನೆ ಮುಹೂರ್ತ

tv clinic

ಈ ಸುದ್ದಿಯನ್ನು ಶೇರ್ ಮಾಡಿ

ನಿಡ್ಪಳ್ಳಿ; ಜಿಲ್ಲೆಯಲ್ಲಿ ವರ್ಷದ ಮೊದಲ ಜಾತ್ರೋತ್ಸವ ನಡೆಯುವ ಕ್ಷೇತ್ರ  ಎಂದು ಹೆಸರುವಾಸಿಯಾದ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ ಅ.29 ರಂದು ನಡೆಯಿತು.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನ.4 ರಿಂದ 7 ರವರೆಗೆ ಜಾತ್ರೋತ್ಸವ ಜರಗಲಿದೆ. ದೇವಸ್ಥಾನದ ಅರ್ಚಕ ನಾರಾಯಣ ಭಟ್ ಕಾನುಮೂಲೆ ಬೆಳಿಗ್ಗೆ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಗೊನೆ ಕಡಿಯಲಾಯಿತು.
ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಶಿವಗಿರಿ ಬೀಡು, ಮೊಕ್ತೇಸರ ವಿನೋದ್ ರೈ ಗುತ್ತು, ಶಿವಕುಮಾರ್ ಬಲ್ಲಾಳ್ ಬೀಡು, ಸಹಾಯಕ ಅರ್ಚಕ ಪ್ರಸನ್ನ ಭಟ್, ಸಿಬ್ಬಂದಿ ವಿನಯ ಕುಮಾರ್ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಹಿಂದಾರು ಸಾಯಿ ಭಗವಾನ್ ಗೋಶಾಲೆಯಲ್ಲಿ ಸಾಮೂಹಿಕ ಗೋಪೂಜೆ | ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಕಾರ್ಯಕ್ರಮ

ಪುತ್ತೂರು : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ನೇತ್ರಾವತಿ ವಲಯ, ಪುತ್ತೂರು ತಾಲೂಕು ಇದರ…

ಪುತ್ತೂರಿನಲ್ಲಿ ಆರೋಗ್ಯದ ಕಡೆಗೆ ಯೋಗದ ನಡಿಗೆ | ಎಸ್.ಪಿ.ವೈ.ಎಸ್.ಎಸ್.ನಿಂದ ನಡೆಯುತ್ತಿರುವ ಯೋಗ ಜೀವನ ದರ್ಶನ

ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ರಾಜ್ಯ ರಾಷ್ಟ್ರೀಯ ಯೋಗ ಶಿಕ್ಷಕರ…