ಧಾರ್ಮಿಕ

ಹಿಂದಾರು ಸಾಯಿ ಭಗವಾನ್ ಗೋಶಾಲೆಯಲ್ಲಿ ಸಾಮೂಹಿಕ ಗೋಪೂಜೆ | ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಕಾರ್ಯಕ್ರಮ

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ನೇತ್ರಾವತಿ ವಲಯ, ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ  ಪ್ರಯುಕ್ತ ಸಾಮೂಹಿಕ ಗೋಪೂಜಾ ಕಾರ್ಯಕ್ರಮ ಹಿಂದಾರು ಭಾಸ್ಕರ್ ಆಚಾರ್ ಅವರ ಸಾಯಿ ಭಗವಾನ್ ಗೋಶಾಲೆಯಲ್ಲಿ ಅ. 22ರಂದು ಬ್ರಾಹ್ಮೀ ಶುಭಮುಹೂರ್ತದಲ್ಲಿ ಅಭೂತಪೂರ್ವ, ಅವಿಸ್ಮರಣೀಯ ಹಾಗೂ ಸುಂದರವಾಗಿ ನಿರೀಕ್ಷೆಗೂ ಮೀರಿ ಸಂಪೂರ್ಣ ಯಶಸ್ವಿಯಾಗಿ ನೆರವೇರಿತು.

go-pooja

akshaya college

ಪುತ್ತೂರು ತಾಲೂಕಿನ ಸುಮಾರು 178ಕ್ಕೂ ಮಿಕ್ಕಿ ಯೋಗಬಂಧುಗಳು ಹಿಂದಾರುವಿನ ಪುಣ್ಯನೆಲದಲ್ಲಿ ಸಾಮೂಹಿಕ ಯೋಗಾಭ್ಯಾಸವನ್ನು ಮಾಡಿದರು. ನಿಶಾಲತಾರವರು ಶಿಕ್ಷಣ ವಿಧಿ ನೆರವೇರಿಸಿದರು, ಗೋಪೂಜೆ ಬಗ್ಗೆ ಗೋವಿನ ಬಗ್ಗೆ ವಿಶೇಷ ಬೌದ್ಧಿಕ ಅನ್ನು ವಿನಯ ಪೈ ರವರು ನೆರವೇರಿಸಿದರು. ಹಿಂದಾರು ಮನೆಯ ಹಿರಿಯರಾದ ಶ್ರೀಯುತ ಭಾಸ್ಕರ್ ಆಚಾರ್ ಅವರು ಸಮಿತಿಯ ಕಾರ್ಯಕ್ರಮಗಳನ್ನು ವೀಕ್ಷಿಸಿ, ಅಭ್ಯಾಸ ಸಮಯದಲ್ಲಿ ದೇವರ ಮಂತ್ರ ಪಠಣ ಮಾಡುವ ಪರಿಯನ್ನು ನೋಡಿ ಹೆಮ್ಮೆ ಪಟ್ಟರು ಹಾಗೆಯೇ ಇಂಥ ಸಂಸ್ಕಾರಗಳು ಇನ್ನೂ ಹೀಗೆ ಮುಂದುವರೆದು ಸಂಘಟನೆ ಗಟ್ಟಿಯಾಗಲಿ ಎಂದು ಹಾರೈಸಿದರು.

ಅನಂತರ ಎಲ್ಲಾ ಯೋಗ ಬಂಧುಗಳು ಜೊತೆ ಸೇರಿ ಗೋಶಾಲೆ ಸ್ವಚತೆ, ಗೋವುಗಳ ಸ್ವಚತೆ ನಂತರ ಗೋಪೂಜೆ ಮಾಡಿ ಸ್ಥಳದಲ್ಲೇ ಇರುವ ಶ್ರೀ ಕೃಷ್ಣ ವಿಗ್ರಹಕ್ಕೆ ಹಾಲಿನ ಅಭಿಷೇಕವನ್ನು ಶ್ರದ್ಧಾ ಭಕ್ತಿಯಿಂದ ಮಾಡಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರಿನಲ್ಲಿ ಆರೋಗ್ಯದ ಕಡೆಗೆ ಯೋಗದ ನಡಿಗೆ | ಎಸ್.ಪಿ.ವೈ.ಎಸ್.ಎಸ್.ನಿಂದ ನಡೆಯುತ್ತಿರುವ ಯೋಗ ಜೀವನ ದರ್ಶನ

ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ರಾಜ್ಯ ರಾಷ್ಟ್ರೀಯ ಯೋಗ ಶಿಕ್ಷಕರ…