pashupathi
ಧಾರ್ಮಿಕ

ಅಂಬಿಕಾ ವಿದ್ಯಾಲಯದ ಮಂದಿರಾ ಕಜೆ, ಸಾತ್ವಿಕ್ ಜಿ. ರಾಷ್ಟ್ರಮಟ್ಟಕ್ಕೆ ಆಯ್ಕೆ

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ವಿದ್ಯಾರ್ಥಿಗಳು, ವಿದ್ಯಾಭಾರತಿ ಅಖಿಲ ಭಾರತೀಯ ಸಂಸ್ಥಾನವು ಹೈದರಾಬಾದ್ ನಲ್ಲಿ ಏರ್ಪಡಿಸಿದ್ದ ಝೋನಲ್ ಹಂತದ  ಗಣಿತ ವಿಜ್ಞಾನ ಮೇಳ ಸ್ಪರ್ಧೆಯಲ್ಲಿ ಭಾಗವಹಿಸಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

akshaya college

ಕಿಶೋರವರ್ಗದ ಗಣಿತ ಮಾದರಿ ಪ್ರದರ್ಶನದಲ್ಲಿ ಗಿರೀಶ ಗೌಡ ಹಾಗೂ ಸುಮಿತ್ರಾ ದಂಪತಿಗಳ ಪುತ್ರ 9ನೇ ತರಗತಿಯ ವಿದ್ಯಾರ್ಥಿ ಸಾತ್ವಿಕ್ ಜಿ. ಪ್ರಥಮ ಸ್ಥಾನವನ್ನು ಗಳಿಸಿದರೆ, ಕಿಶೋರ ವರ್ಗದ ವಿಜ್ಞಾನ ಪತ್ರ ವಾಚನ ಸ್ಪರ್ಧೆಯಲ್ಲಿ ಮಹೇಶ್ ಕಜೆ ಹಾಗೂ ದೀಪಿಕಾ ಕಜೆ ದಂಪತಿಯ ಪುತ್ರಿ, 10ನೇ ತರಗತಿ ವಿದ್ಯಾರ್ಥಿನಿ ಮಂದಿರಾ ಕಜೆ ಪ್ರಥಮ ಸ್ಥಾನವನ್ನು ಗಳಿಸಿಕೊಂಡಿದ್ದಾರೆ.

ಗಣಿತ ಮಾದರಿ ಸ್ಪರ್ಧೆ ಪಂಜಾಬಿನ ಸರ್ವಹಿತ ಕಾರ್ಯ ಕೇಶವ ವಿದ್ಯಾನಿಕೇತನ ವಿದ್ಯಾಧಾಮ ಜಲಂಧರದಲ್ಲಿ ಹಾಗೂ ರಾಷ್ಟ್ರೀಯ ಮಟ್ಟದ ವಿಜ್ಞಾನ ಪತ್ರವಾಚನ ಸ್ಪರ್ಧೆ ಉತ್ತರ ಪ್ರದೇಶದ ಮೀರತ್ ಬಾಲೆ ರಾಮ ಬ್ರಿಜಭೂಷಣ ಸರಸ್ವತಿ ಶಿಶುಮಂದಿರದಲ್ಲಿ ಜರಗಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರಿನಲ್ಲಿ ಆರೋಗ್ಯದ ಕಡೆಗೆ ಯೋಗದ ನಡಿಗೆ | ಎಸ್.ಪಿ.ವೈ.ಎಸ್.ಎಸ್.ನಿಂದ ನಡೆಯುತ್ತಿರುವ ಯೋಗ ಜೀವನ ದರ್ಶನ

ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ರಾಜ್ಯ ರಾಷ್ಟ್ರೀಯ ಯೋಗ ಶಿಕ್ಷಕರ…