ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ರಾಜ್ಯ ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಿಕ್ಷಣ ಶಿಬಿರದ ಅಂಗವಾಗಿ ಪುತ್ತೂರಿನಲ್ಲಿ ನಡೆಯುತ್ತಿರುವ ಯೋಗ ಜೀವನ ದರ್ಶನ 2025ರ ನಾಲ್ಕನೆಯ ದಿನವಾದ ಜುಲೈ 19ರಂದು ಆರೋಗ್ಯದ ಕಡೆಗೆ ಯೋಗದ ನಡಿಗೆ ಜರಗಿತು.
ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಸಂಜೆ ಯೋಗ ನಡಿಗೆ ಉದ್ಘಾಟಿಸಿ ಮಾತನಾಡಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಯೋಗದಿಂದ ಉತ್ತಮ ಜೀವನ ಆರೋಗ್ಯ ಸಾಧಿಸಲು ಸಾಧ್ಯ. ಆದ್ದರಿಂದ ಯೋಗಕ್ಕೆ ನಾವೆಂದಿಗೂ ಪ್ರೋತ್ಸಾಹ ನೀಡುತ್ತಿರಬೇಕು ಎಂದರು.
ಮುಖ್ಯ ಅಭ್ಯಾಗತರಾಗಿದ್ದ ಪುತ್ತೂರು ನಗರ ಠಾಣೆಯ ಪೊಲೀಸ್ ನಿರೀಕ್ಷಕ ಆಂಜನೇಯ ರೆಡ್ಡಿ ಮಾತನಾಡಿ, ನಮ್ಮ ಹಿಂದೂ ಸಂಸ್ಕೃತಿ ಗಟ್ಟಿಯಾಗಲು ಇಂತಹ ಸಂಸ್ಕಾರ ಯೋಗಗಳು ಜೀವನಕ್ಕೆ ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂತ ಪ್ರಶಿಕ್ಷಣ ಸಂಚಾಲಕ ಹರಿಪ್ರಸಾದ್ ಮಾತನಾಡಿ, ಯೋಗ ಅಭ್ಯಾಸ ಜೀವನವನ್ನೇ ಬದಲಾಯಿಸುತ್ತದೆ ಎಂದರು.
ದೇವಣ್ಣ ವಂದಿಸಿ, ಪ್ರಕಾಶ್ ಅನ್ನಡ್ಕ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಯೋಗ ನಡಿಗೆ ನಡೆಯಿತು. ನಂತರ ತೆಂಕಿಲ ವಿವೇಕಾನಂದ ಶಾಲಾ ಆವರಣದಲ್ಲಿ ಅತಿಥಿ ಸತ್ಕಾರ ಜರಗಿತು.