Gl
ಧಾರ್ಮಿಕ

ದೇಲಂಪಾಡಿ: ಪಾರ್ತಿಸುಬ್ಬ ವಿರಚಿತ ಪಂಚವಟಿ ಯಕ್ಷಗಾನ ತಾಳಮದ್ದಳೆ, ಭಗವದ್ಗೀತೆ ಪಾರಾಯಣ

ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ವಿದ್ಯಾಶ್ರೀ ಆಚಾರ್ಯ ಈಶ್ವರಮಂಗಲ ಮತ್ತು ಮನೆಯವರ ವತಿಯಿಂದ ಪಾರ್ತಿಸುಬ್ಬ ವಿರಚಿತ ಪಂಚವಟಿ ಯಕ್ಷಗಾನ ತಾಳಮದ್ದಳೆ ಜರುಗಿತು.

ಈ ಸುದ್ದಿಯನ್ನು ಶೇರ್ ಮಾಡಿ

ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ವಿದ್ಯಾಶ್ರೀ ಆಚಾರ್ಯ ಈಶ್ವರಮಂಗಲ ಮತ್ತು ಮನೆಯವರ ವತಿಯಿಂದ ಪಾರ್ತಿಸುಬ್ಬ ವಿರಚಿತ ಪಂಚವಟಿ ಯಕ್ಷಗಾನ ತಾಳಮದ್ದಳೆ ಜರುಗಿತು.

rachana_rai
Pashupathi
akshaya college
Balakrishna-gowda

ಮೊದಲಿಗೆ ಸ್ಥಳ ಸಾನ್ನಿಧ್ಯ ಶ್ರೀ ಗೋಪಾಲಕೃಷ್ಣ ದೇವರಿಗೆ ಪೂಜಾರ್ಚನೆ ನಡೆದು, ಶೀರಾಮ ಗೀತಾಭ್ಯಾಸ ತಂಡ ಹಾಗೂ ಪೂರ್ಣಿಮಾ ಬನಾರಿ ಅವರ ಸಹಭಾಗಿತ್ವದಲ್ಲಿ ಭಗವದ್ಗೀತೆ ಪಾರಾಯಣ ನಡೆಯಿತು.

pashupathi

ಅನಂತರ ಹಿರಿಯ ಭಾಗವತ ಗುರು ವಿಶ್ವವಿನೋದ ಬನಾರಿ ಅವರ ನಿರ್ದೇಶನದಲ್ಲಿ ಯಕ್ಷಗಾನ ತಾಳಮದ್ದಳೆ ಜರಗಿತು.

ಭಾಗವತರಾಗಿ ಮೋಹನ ಮೆಣಸಿನಕಾನ, ಕುಮಾರಿ ವಿದ್ಯಾಶ್ರೀ ಆಚಾರ್ಯ ಈಶ್ವರ ಮಂಗಲ, ಕುಮಾರಿ ರಂಜಿತಾ ಆಚಾರ್ಯ ನಾರ್ಣಕಜೆ  ಹಾಗೂ ಚೆಂಡೆಮದ್ದಳೆ ವಾದನದಲ್ಲಿ ಶ್ರೀಧರ ಆಚಾರ್ಯ ಈಶ್ವರ ಮಂಗಲ, ಮಂಡೆಕೂಲು ಅಪ್ಪಯ್ಯ ಮಣಿಯಾಣಿ, ವಿಷ್ಣು ಶರಣ ಬನಾರಿ, ಕೃಷ್ಣ ಪ್ರಸಾದ ಬೆಳ್ಳಿಪ್ಪಾಡಿ, ಸದಾನಂದ ಮಯ್ಯಾಳ ಅವರು ಸಹಕರಿಸಿದರು.

ಅರ್ಥಧಾರಿಗಳಾಗಿ  ನಾರಾಯಣ ದೇಲಂಪಾಡಿ, ಪ್ರಭಾಕರ ಆಚಾರ್ಯ ಹಿರಿಯಾಣ, ಭಾಸ್ಕರ ಮಾಸ್ತರ್‌ ದೇಲಂಪಾಡಿ, ನಾರಾಯಣ ಪಾಟಾಳಿ ಪಯ್ಯಾಳ, ಪೂಜಾ ಸಿ.ಎಚ್‌. ದೇಲಂಪಾಡಿ, ಶ್ರೀದೇವ್‌ ಆಚಾರ್ಯ ಈಶ್ವರ ಮಂಗಲ, ಶಾಂತಾ ಕುಮಾರಿ ದೇಲಂಪಾಡಿ, ಬಿ.ಎಚ್.‌ ವೆಂಕಪ್ಪ ಗೌಡ, ಸಂಜೀವ ರಾವ್‌ ಮಯ್ಯಾಳ, ಪದ್ಮನಾಭ ಮಯ್ಯಾಳ ಭಾಗವಹಿಸಿರು.

ಪೂಜಾ ಸಿ.ಎಚ್‌ ಕಾರ್ಯಕ್ರಮ ನಿರೂಪಿಸಿ, ನಂದ ಕಿಶೋರ ಬನಾರಿ ವಂದಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts