Gl harusha
ಧಾರ್ಮಿಕ

ಮಿನಿಪದವು: ಮಾ. 23ರಂದು ಶ್ರೀ ಅಯ್ಯಪ್ಪ ಸಾನಿಧ್ಯದಲ್ಲಿ ಗುಳಿಗ ದೈವದ ನೇಮೋತ್ಸವ

ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಮಿನಿಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಅಯ್ಯಪ್ಪ ದೇವರಿಗೆ ಮಹಾಪೂಜೆ, ಗುಳಿಗ ದೈವದ ನೇಮೋತ್ಸವ ಮಾ. 23ರಂದು ನಡೆಯಲಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಮಿನಿಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಅಯ್ಯಪ್ಪ ದೇವರಿಗೆ ಮಹಾಪೂಜೆ, ಗುಳಿಗ ದೈವದ ನೇಮೋತ್ಸವ ಮಾ. 23ರಂದು ನಡೆಯಲಿದೆ.
ಒಡಿಯೂರು ಶ್ರೀ ಗುರು ದೇವಾನಂದ ಸ್ವಾಮೀಜಿ, ಶ್ರೀ ಮಹಾಬಲೇಶ್ವರ ಸ್ವಾಮೀಜಿ ಹಾಗೂ ಜ್ಯೋತಿಷಿ ಗಣೇಶ್ ಭಟ್ ಕೇಕನಾಜೆ ಅವರ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೆ. ಉದಯ ನಾರಾಯಣ ಕಲ್ಲೂರಾಯ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಸ್ಥಳ ಶುದ್ಧಿ ಪೂರ್ವಕ ಗಣಪತಿ ಹವನ ನಡೆದು ಭಜನೆ, ಮಧ್ಯಾಹ್ನ ಅಯ್ಯಪ್ಪ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ. ಮಧ್ಯಾಹ್ನ 2ರಿಂದ ಕ್ಷೇತ್ರ ರಕ್ಷಕ ಗುಳಿದ ದೈವದ ನರ್ತನ ಸೇವೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್ ಹಾಗೂ ಮಿನಿಪದವು ಶ್ರೀ ಅಯ್ಯಪ್ಪ ಭಕ್ತವೃಂದದ ಪ್ರಕಟಣೆ ತಿಳಿಸಿದೆ.
ಕ್ಷೇತ್ರದ ಬಗ್ಗೆ:
ಸುಮಾರು 47 ವರ್ಷಗಳ ಹಿಂದೆ ಮಿನಿಪದವಿನಲ್ಲಿ ಅಯ್ಯಪ್ಪ ಭಜನಾ ಮಂದಿರವನ್ನು ಅನಂತ ನಾಯ್ಕ ಹಾಗೂ ಊರವರು ಸ್ಥಾಪಿಸಿದರು. ವರ್ಷದಲ್ಲಿ ಒಂದು ಬಾರಿ ಮಕರ ಸಂಕ್ರಮಣದ ಸಂದರ್ಭ ಅಯ್ಯಪ್ಪ ಮಾಲಾಧಾರಿಗಳು 48 ದಿನಗಳ ಕಾಲ ಈ ಮಂದಿರದಲ್ಲಿ ವಾಸ್ತವ್ಯವಿದ್ದು, ಶರಣುಘೋಷ, ಪಡಿಪೂಜೆ ಹಾಗೂ ಶಬರಿಮಲೆಗೆ ಹೋಗುವ ದಿನ ಗಣಪತಿ ಹೋಮ, ಅಯ್ಯಪ್ಪ ಪೂಜೆ, ಪಡಿಪೂಜೆ ಹಾಗೂ ಅನ್ನದಾನ ಕಾರ್ಯಕ್ರಮಗಳು ವರ್ಷಂಪ್ರತಿ ನಡೆದುಕೊಂಡು ಬರುತ್ತಿದ್ದವು. ಕಾಲಾಂತರದಲ್ಲಿ ಈ ಕಾರ್ಯಕ್ರಮಗಳು ನಿಂತು ಹೋಗುವಂತಾಯಿತು.
ಇತ್ತೀಚಿನ ಕೆಲ ವರ್ಷಗಳಲ್ಲಿ ಈ ಗುಡಿಯ ಎದುರು ಭಾಗದ ರಸ್ತೆಯಲ್ಲಿ ಹಾದುಹೋಗುವ ವಾಹನಗಳು ಅಪಘಾತಕ್ಕೆ ಒಳಗಾಗುವುದು ಹೆಚ್ಚತೊಡಗಿತು. ವಾಹನ ಸವಾರರು ಹಾಗೂ ಅಕ್ಕಪಕ್ಕದಲ್ಲಿ ವಾಸ್ತವ್ಯವಿದ್ದ ಮನೆಯವರು ಭಯಬೀತರಾದರು. ಕಾರಣ ಏನೆಂದು ಜ್ಯೋತಿಷ್ಯ ಮುಖೇನ ತಿಳಿದಾಗ, ಮುಂಚಿನಿಂದಲೂ ನಡೆದುಕೊಂಡು ಬರುತ್ತಿದ್ದ ಅಯ್ಯಪ್ಪ ಸ್ವಾಮಿ ಪೂಜಾ ಕಾರ್ಯದಿ ಅನ್ನದಾನ ಸೇವೆಗಳು ನಿಂತು ಹೋಗಿರುವುದೇ ಇದಕ್ಕೆಲ್ಲಾ ಕಾರಣ ಎಂದು ತಿಳಿದು ಬಂತು. ಆ ನಂತರದಲ್ಲಿ ಊರವರನ್ನು ಒಟ್ಟು ಸೇರಿಕೊಂಡು ವರ್ಷಪೂರ್ತಿ ಆಗಾಗ ಪೂಜಾ ಕೈಂಕರ್ಯ ನಡೆಸಿಕೊಂಡು ಬರಲಾಗುತ್ತಿದೆ. ತದನಂತರ ಯಾವುದೇ ಅಪಘಾತಗಳು ಈ ಪರಿಸರದಲ್ಲಿ ಸಂಭವಿಸಿಲ್ಲ.
ಬಳಿಕ ಸ್ಥಳೀಯರು ಸೇರಿಕೊಂಡು ಅಯ್ಯಪ್ಪ ಸೇವಾ ಟ್ರಸ್ಟ್ (ರಿ.) ಮಿನಿಪದವು ಎಂಬ ಹೆಸರಿನಲ್ಲಿ ರಿಜಿಸ್ಟರ್ಡ್ ಬಾಡಿಯನ್ನು ಸ್ಥಾಪಿಸಿ, 2024ರ ಜನವರಿಯಲ್ಲಿ ಜೀರ್ಣೋದ್ಧಾರ ನಡೆಸಲಾಗಿದೆ.

srk ladders
Pashupathi
Muliya

ಈ ಸುದ್ದಿಯನ್ನು ಶೇರ್ ಮಾಡಿ

Related Posts